ನವದೆಹಲಿ: Breast Milk Production - ನವಜಾತ ಶಿಶುಗಳಿಗೆ, ಅವರ ತಾಯಿಯ ಹಾಲು (Breast Milk Benefits) ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಆವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು ಎಂಬ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅನೇಕ ಬಾರಿ, ಕೆಲವು ವಿಶೇಷ ಸಂದರ್ಭಗಳಲ್ಲಿ, ಮಗುವಿಗೆ ತಾಯಿಯ ಎದೆ ಹಾಲು ಸಿಗಲು ಸಾಧ್ಯವಾಗುವುದಿಲ್ಲ (Breastfeeding Kids). ಆದ್ದರಿಂದ ಇದೀಗ ಈ ಸಮಸ್ಯೆಯನ್ನು ಪರಿಹರಿಸಲು, ಎದೆ ಹಾಲು ಉತ್ಪಾದನೆಯನ್ನು (Breast Milk Production) ಮಾರುಕಟ್ಟೆಯಲ್ಲಿ ತರಲು ಸಿದ್ಧತೆಗಳು ನಡೆಯುತ್ತಿವೆ.
ಲ್ಯಾಬ್ ನಲ್ಲಿ ತಯಾರಾಗಲಿದೆ ಬ್ರೆಸ್ಟ್ ಮಿಲ್ಕ್
2021 ರ ಹೊತ್ತಿಗೆ, ತಂತ್ರಜ್ಞಾನವು (Technology) ತುಂಬಾ ಅಭಿವೃದ್ಧಿ ಹೊಂದಿದ್ದು, ಇದೀಗ ಪ್ರಯೋಗಾಲಯದಲ್ಲಿ ತಾಯಿಯ ಎದೆ ಹಾಲನ್ನು (Breast Milk In Lab) ತಯಾರಿಸಲು ಯೋಜನೆ ನಡೆಯುತ್ತಿದೆ. ಇದಕ್ಕಾಗಿ ಒಂದು ವಿಧಾನವನ್ನು ಸಹ ಕಂಡುಹಿಡಿಯಲಾಗಿದೆ. ಬಯೋಮಿಲ್ಕ್ (Biomilk)ಎಂಬ ಸ್ಟಾರ್ಟ್ ಅಪ್ (Start Up Company) ಕಂಪನಿಯು ಮಹಿಳೆಯರ ಸ್ತನ ಕೋಶಗಳಿಂದ (Breastfeeding Mother) ಹಾಲು ತಯಾರಿಸುವಲ್ಲಿ ಯಶಸ್ವಿಯಾಗಿದೆ. ಈ ಕಂಪನಿಯಲ್ಲಿ ಹೆಚ್ಚಿನ ಉದ್ಯೋಗಿಗಳು ಮಹಿಳೆಯರೇ ಆಗಿದ್ದಾರೆ ಎಂಬುದು ಇಲ್ಲಿ ವಿಶೇಷ.
ಇದನ್ನೂ ಓದಿ- Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ
ತಾಯಿಯ ಎದೆ ಹಾಲಿನಂತೆಯೇ ಪೌಷ್ಠಿಕವಾಗಿದೆ ಲ್ಯಾಬ್ ಹಾಲು
ಪ್ರಯೋಗಾಲಯಗಳಲ್ಲಿ ತಯಾರಿಸಲಾಗುವ ಹಾಲಿನಲ್ಲಿಯೂ ಕೂಡ ತಾಯಿಯ ಎದೆ ಹಾಲಿನಲ್ಲಿರುವ ಎಲ್ಲಾ ಪೌಷ್ಠಿಕ ಅಂಶಗಳು ಇರಲಿವೆ. ಮ್ಯಾಕ್ರೋನ್ಯೂಟ್ರಿಯೆಂಟ್ ಪ್ರೊಫೈಲ್ ಪ್ರಕಾರ, ಇದರಲ್ಲಿಯೂ ಕೂಡ ತಾಯಿಯ ಎದೆ ಹಾಲಿನಲ್ಲಿರುವ ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬಿನಾಂಶ ಹಾಗೂ ಬಯೋಆಕ್ಟಿವ್ ಲಿಪಿಡ್ ಗಳು (Brest Milk Nutrients) ಇರಲಿವೆ. ಇವು ತಾಯಿಯ ಎದೆ ಹಾಲಿನಲ್ಲಿಯೂ ಕೂಡ ಇರಲಿವೆ ಎಂದು ಕಂಪನಿ ಹೇಳಿದೆ. ಆದರೆ, ಈ ಎರಡೂ ಪ್ರಕಾರದ ಹಾಲಿನ ಆಂಟಿಬಾಡಿಗಳಲ್ಲಿ ಅಂತರವಿರಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ- ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?
ಮಾರುಕಟ್ಟೆಗೆ ಬರಲು ಎಷ್ಟು ಸಮಯಾವಕಾಶ ಬೇಕಾಗಲಿದೆ?
Forbes ಜೊತೆಗಿನ ತಮ್ಮ ಸಂಭಾಷಣೆಯಲ್ಲಿ ಹೇಳಿಕೊಂಡಿರುವ ಈ ಕಂಪನಿಯ ಸಹ-ಸಂಸ್ಥಾಪಕಿ ಹಾಗೂ ಚೀಫ್ ಸೈನ್ಸ್ ಆಫೀಸರ್ (Chief Science Officer) ಡಾ. ಲೀಲಾ ಸ್ಟ್ರೀಕ್ಲ್ಯಾಂಡ್, ನಾವು ನಮ್ಮ ಉತ್ಪನ್ನವನ್ನು ಸಾಕಷ್ಟು ಪ್ರಮಾಣದಲ್ಲಿ ತಾಯಿಯ ಎದೆಹಾಲಿನ ರೀತಿಯೇ ಮಾಡಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ. ಆದರೆ, ಇದೇ ವೇಳೆ ಅವರು, ತಾಯಿಯ ಹಾಲು ಮಗುವಿಗೆ ಎಷ್ಟೊಂದು ಉತ್ತಮವಾಗಿರುತ್ತದೆಯೋ ಅಷ್ಟು ಉತ್ತಮ ಯಾವುದು ಆಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಈ ಹಾಲನ್ನು ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದು ಡಾ.ಲೀಲಾ ಹೇಳಿದ್ದಾರೆ.
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸವಿಸಬೇಡಿ ಈ ಮಸಾಲೆ ಪದಾರ್ಥಗಳನ್ನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ