ನವದೆಹಲಿ: Bank Of India Latest Interest Rates - ನೀವು ಕೂಡ ಮನೆಗೆ ಖರೀದಿಸಲು ಯೋಜಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಒಳ್ಳೆಯ ಸುದ್ದಿ. ಏಕೆಂದರೆ ಇದೀಗ ನಿಮಗೆ ಅಗ್ಗದ ಬಡ್ಡಿದರದಲ್ಲಿ ಸಾಲ ಸಿಗಲಿದೆ. ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ (BOI) ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು (Home Loan Interest Rate) 0.35 ಶೇಕಡಾ ಇಳಿಕೆ ಮಾಡಿದೆ. ಅಂದರೆ, ಈಗ ನೀವು ನಿಮ್ಮ ಕನಸುಗಳ ಮನೆಯನ್ನು ಕಡಿಮೆ ಬಡ್ಡಿಯಲ್ಲಿ ಪಡೆಯಬಹುದು. ಇದಷ್ಟೇ ಅಲ್ಲ, ಆಟೋ ಸಾಲದ (Auto Loan Interest Rate) ಮೇಲಿನ ಬಡ್ಡಿದರವನ್ನು ಕೂಡ ಬ್ಯಾಂಕ್ ಶೇ. 0.50 ರಷ್ಟು ಕಡಿಮೆ ಮಾಡಿದೆ.
#BOIFestiveOffer Substantial Reduction in ROI on our Star Home Loan!
BOI reduces 35 bps ROI on Home Loan. Now available at ROI starting from 6.50% p.a.EMI starting at ₹632/- per lakh and NIL processing fees.Offer valid till 31.12.2021*T&C Apply
Apply now: https://t.co/bKdotIdeul pic.twitter.com/M3w85qrXCf— Bank of India (@BankofIndia_IN) October 17, 2021
ಈ ಕುರಿತು ಮಾಹಿತಿ ಹಂಚಿಕೊಂಡ ಬ್ಯಾಂಕ್
ಬ್ಯಾಂಕ್ ಸ್ವತಃ ಈ ಮಾಹಿತಿಯನ್ನು ಹಂಚಿಕೊಂಡಿದೆ. ಬ್ಯಾಂಕ್ ನೀಡಿರುವ ಹೇಳಿಕೆಯ ಪ್ರಕಾರ, 'ಈ ಕಡಿತದ ನಂತರ, BOI ನ ಗೃಹ ಸಾಲದ ದರವು 6.50 ಶೇಕಡದಿಂದ ಆರಂಭವಾಗಲಿದೆ. ಮೊದಲು ಇದು ಶೇ .6.85 ರಷ್ಟಿತ್ತು. ಅದೇ ವೇಳೆ ಬ್ಯಾಂಕಿನ ವಾಹನ ಸಾಲದ ಮೇಲಿನ ಬಡ್ಡಿದರವು 7.35 ರಿಂದ 6.85 ಕ್ಕೆ ಇಳಿಕೆಯಾಗಲಿದೆ.
Substantial Reduction in Interest rate on BOI Star Vehicle Loan!
Bank of India reduces 50 bps ROI on Star Vehicle Loan. Now available at ROI starting from 6.85% p.a.EMI starting at ₹1502/- per lakh and NIL processing fees.
Apply now: https://t.co/bKdotIdeul pic.twitter.com/1LEjjit3nz
— Bank of India (@BankofIndia_IN) October 17, 2021
ಇದನ್ನೂ ಓದಿ-LPG ಸಿಲಿಂಡರ್ಗಳ ಬುಕಿಂಗ್ನಲ್ಲಿ ₹2700 ವರೆಗಿನ ಕ್ಯಾಶ್ಬ್ಯಾಕ್ : ಇದರ ಲಾಭ ಹೀಗೆ ಪಡೆದುಕೊಳ್ಳಿ
ಎಲ್ಲಿಯವರೆಗೆ ಈ ಹೊಸ ದರಗಳು ಅನ್ವಯಿಸಲಿವೆ?
ಬ್ಯಾಂಕಿನ ಈ ವಿಶೇಷ ಬಡ್ಡಿ ದರಗಳು ಅಕ್ಟೋಬರ್ 18, 2021 ರಿಂದ ಡಿಸೆಂಬರ್ 31, 2021 ರವರೆಗೆ ಅನ್ವಯವಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಹೊಸ ಸಾಲ ಅಥವಾ ಸಾಲ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಹೊಸ ಬಡ್ಡಿ ದರ ಅನ್ವಯಿಸಲಿವೆ.
ಇದನ್ನೂ ಓದಿ-Aadhaar Card Big update! ಪ್ರತಿಯೊಬ್ಬರಿಗೂ ಅನ್ವಯವಾಗುವ ಈ ಅಪ್ಡೇಟ್ ನೀಡಿದೆ ಯುಐಡಿಎಐ
ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರೊಂದಿಗೆ ಬ್ಯಾಂಕ್ ಗೃಹ ಸಾಲ ಮತ್ತು ವಾಹನ ಸಾಲದ ಪ್ರಕ್ರಿಯೆ ಶುಲ್ಕವನ್ನು ಡಿಸೆಂಬರ್ 31, 2021 ರವರೆಗೆ ರದ್ದುಗೊಳಿಸಿದೆ. ಅಂದರೆ, ಇದೀಗ ಬ್ಯಾಂಕಿನ ಈ ಘೋಷಣೆಯ ನಂತರ, ಮನೆ ಮತ್ತು ಕಾರು ಎರಡನ್ನೂ ತೆಗೆದುಕೊಳ್ಳುವುದು ಆರ್ಥಿಕವಾಗಿ ಹಗುರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಈ ತಿಂಗಳು ಸಿಗಲಿದೆಯಾ Triple Bonanza? ಇಲ್ಲಿದೆ Big Update!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ