Diwali Offer: ನೈಯಾ ಪೈಸೆಯೂ ಪಾವತಿಸದೇ ಮನೆಗೆ ತನ್ನಿ Honda Bike, EMI ಜೊತೆಗೆ ಕ್ಯಾಶ್ ಬ್ಯಾಕ್, ಬಡ್ಡಿಯೂ ಇಲ್ಲ!

Honda Diwali Offer: ಕೊಡುಗೆಯಲ್ಲಿ ಝೀರೋ ಡೌನ್ ಪೇಮೆಂಟ್ ಹಾಗೂ ನೋ ಕಾಸ್ಟ್ ಇಎಂಐ ಎಂಬುದನ್ನು ಸ್ಪಷ್ಟಪಡಿಸಲಾಗಿದ್ದು, ಯಾರಿಗೆ ಈ ಕೊಡುಗೆಯ ಲಾಭ ಸಿಗಲಿದೆ ಎಂಬುದು ಫೈನಾನ್ಸ್ ಮಾಡುವ ಕಂಪನಿಯನ್ನು ಅವಲಂಭಿಸಿದೆ ಎನ್ನಲಾಗಿದೆ.  

Written by - Nitin Tabib | Last Updated : Oct 13, 2022, 11:06 AM IST
  • ಇದಲ್ಲದೇ, ಹೋಂಡಾದ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ.
  • 50,000 ರೂ.ವರೆಗಿನ ವಹಿವಾಟಿನ ಮೇಲೆ 5000 ರೂ.ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆ ಇದೆ.
  • IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ EMI ಮಾಡುವ ಮೂಲಕ ಗ್ರಾಹಕರು ಇದರ ಲಾಭವನ್ನು ಪಡೆಯಬಹುದು.
Diwali Offer: ನೈಯಾ ಪೈಸೆಯೂ ಪಾವತಿಸದೇ ಮನೆಗೆ ತನ್ನಿ Honda Bike, EMI ಜೊತೆಗೆ ಕ್ಯಾಶ್ ಬ್ಯಾಕ್, ಬಡ್ಡಿಯೂ ಇಲ್ಲ! title=
Honda Bikes

Honda Bikes: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಹೀರೋ ನಂತರ ಎರಡನೇ ಅತಿ ಹೆಚ್ಚು ಮಾರಾಟಗೊಳ್ಳುವ ಬೈಕ್ ಇದಾಗಿದೆ. ಇದೀಗ ದೀಪಾವಳಿ ಸಂದರ್ಭದಂದು ಕಂಪನಿ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಕೊಡುಗೆಯ ಅಡಿಯಲ್ಲಿ, ಗ್ರಾಹಕರು ಝೀರೋ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐನಲ್ಲಿ ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳನ್ನು ಖರೀದಿಸಬಹುದು. ಇದರರ್ಥ ಗ್ರಾಹಕರು ಯಾವುದೇ ಹಣ ಪಾವತಿ ಮಾಡದೆಯೇ ಬೈಕ್ ಅಥವಾ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು. HMSI ಕೊಡುಗೆಯು 31 ಅಕ್ಟೋಬರ್ 2022 ರವರೆಗೆ ಮಾನ್ಯವಾಗಿರುತ್ತದೆ. ಇದರ ಅಡಿಯಲ್ಲಿ, ಕಂಪನಿಯ ಎಲ್ಲಾ ಮಾದರಿ ಬೈಕ್ ಗಳನ್ನು ನೀವು ಖರೀದಿಸಬಹುದಾಗಿದೆ.

ಇದಲ್ಲದೇ, ಹೋಂಡಾದ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. 50,000 ರೂ.ವರೆಗಿನ ವಹಿವಾಟಿನ ಮೇಲೆ 5000 ರೂ.ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆ ಇದೆ. IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ EMI ಮಾಡುವ ಮೂಲಕ ಗ್ರಾಹಕರು ಇದರ ಲಾಭವನ್ನು ಪಡೆಯಬಹುದು. ಇದಲ್ಲದೆ, ಈ ಕ್ಯಾಶ್‌ಬ್ಯಾಕ್ ಕೊಡುಗೆಯು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ಸಹ ಲಭ್ಯವಿದೆ.

ಇದನ್ನೂ ಓದಿ-Home Loan Offer: ಸ್ವಂತ ಮನೆಯ ಕನಸು ಸುಲಭದಲ್ಲಿ ನನಸಾಗುವುದು.! ಈ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದೆ ಗೃಹ ಸಾಲ

ಆದರೂ, ಆಫರ್‌ನಲ್ಲಿ ಝೀರೋ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ಆಫರ್ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದ್ದರೂ ಕೂಡ ವಾಹನವನ್ನು ಖರೀದಿಸುವ ಸಮಯದಲ್ಲಿ ಈ ಕೊಡುಗೆಯನ್ನು ಯಾರು ಪಡೆಯುತ್ತಾರೆ ಮತ್ತು ಯಾರು ಪಡೆಯುವುದಿಲ್ಲ ಎಂಬುದು ಫೈನಾನ್ಸ್ ಮಾಡುವ ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ. ಹಣಕಾಸು ಕಂಪನಿಯು ತನ್ನ ನೀತಿಯ ಪ್ರಕಾರ ಡೌನ್‌ಪೇಮೆಂಟ್ ಮೊತ್ತವನ್ನು ನಿರ್ಧರಿಸಲಿದೆ.

ಇದನ್ನೂ ಓದಿ-ಅಗ್ಗದ ಎಲೆಕ್ಟ್ರಿಕ್ ಕಾರು ಇದು.! ಟಾಟಾ ಟಿಯಾಗೊ ಇವಿಗೆ ನೀಡಲಿದೆ ಪೈಪೋಟಿ

ಗಮನಾರ್ಹವಾಗಿ, ಹೋಂಡಾ ದ್ವಿಚಕ್ರ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ದೃಢವಾಗಿ ಬೇರೂರಿವೆ. ಸೆಪ್ಟೆಂಬರ್ 2022 ರಲ್ಲಿ, ಕಂಪನಿಯು ಒಟ್ಟು 5.18 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ 2021 ರಲ್ಲಿ ಈ ಸಂಖ್ಯೆ 4.88 ಲಕ್ಷ ಆಗಿತ್ತು. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ 7.6% ರಷ್ಟು ಹೆಚ್ಚಾಗಿದೆ. ಇದೀಗ ಹಬ್ಬದ ಋತುವಿನಲ್ಲಿ ಕಂಪನಿಯು ತನ್ನ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಿದೆ ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News