Kisan Credit Card: ರೈತರಿಗೆ ಮಾತ್ರವಲ್ಲ ಇನ್ನು ಇವರಿಗೂ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಶೀಘ್ರವೇ ಅರ್ಜಿ ಸಲ್ಲಿಸಬಹುದು

ಸಮುದ್ರ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸಲು ಮತ್ತು ದೇಶದ ಐದು ಮೀನುಗಾರಿಕಾ ಬಂದರುಗಳನ್ನು ಸಂಸ್ಕರಣ ಘಟಕಗಳು ಮತ್ತು ಕೋಲ್ಡ್ ಸ್ಟೋರೇಜ್ ಸೇರಿದಂತೆ ಇತರ ಸೌಲಭ್ಯಗಳೊಂದಿಗೆ  ಆಧುನೀಕರಣಗೊಳಿಸಲು ಸರ್ಕಾರ ಯೋಜಿಸಿದೆ.

Written by - Ranjitha R K | Last Updated : Oct 25, 2021, 06:50 AM IST
  • ಮೀನುಗಾರರಿಗೂ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌
  • ಮೀನುಗಾರರಿಗೆ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪ್ರಯೋಜನ
  • ತಮಿಳುನಾಡಿನಲ್ಲಿ ಕಡಲಕಳೆ ಪಾರ್ಕ್ ಸ್ಥಾಪನೆ : ಎಲ್‌ ಮುರುಗನ್‌
Kisan Credit Card: ರೈತರಿಗೆ ಮಾತ್ರವಲ್ಲ ಇನ್ನು ಇವರಿಗೂ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಶೀಘ್ರವೇ ಅರ್ಜಿ ಸಲ್ಲಿಸಬಹುದು title=
ಮೀನುಗಾರರಿಗೂ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (file photo)

ನವದೆಹಲಿ : ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಅಡಿಯಲ್ಲಿನ ಎಲ್ಲಾ ಪ್ರಯೋಜನಗಳನ್ನು ಮೀನುಗಾರರಿಗೂ ನೀಡಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಲ್‌ ಮುರುಗನ್‌ (L Murugan) ತಿಳಿಸಿದ್ದಾರೆ. ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವರಾಗಿರುವ ಎಲ್‌ ಮುರುಗನ್‌,  ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಕೆಲಸಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. "ನಮ್ಮ ಸರ್ಕಾರವು ಈಗಾಗಲೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು (Kisan credit card for fisherman) ನೀಡುತ್ತಿದೆ. ಈ ಸೌಲಭ್ಯವನ್ನು ಮೀನುಗಾರರಿಗೂ ಒದಗಿಸಲು ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. 

ಸಮುದ್ರ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸಲು ಮತ್ತು ದೇಶದ ಐದು ಮೀನುಗಾರಿಕಾ ಬಂದರುಗಳಲ್ಲಿ ಸಂಸ್ಕರಣ ಘಟಕಗಳು ಮತ್ತು ಕೋಲ್ಡ್ ಸ್ಟೋರೇಜ್ (Cold storage) ಸೇರಿದಂತೆ ಇತರ ಸೌಲಭ್ಯಗಳೊಂದಿಗೆ ಆಧುನೀಕರಣಗೊಳಿಸಲು ಸರ್ಕಾರ ಯೋಜಿಸಿದೆ ಎಂದು ಮುರುಗನ್ ಹೇಳಿದ್ದಾರೆ.  ''ತಮಿಳುನಾಡಿನಲ್ಲಿ (Tamilnadu) ಕಡಲಕಳೆ ಪಾರ್ಕ್ ಸ್ಥಾಪಿಸಲಾಗುವುದು. ಇದೊಂದು ಹೊಸ ಪರಿಕಲ್ಪನೆಯಾಗಿದ್ದು, ಕಡಲ ಕೃಷಿಗೆ ನಮ್ಮ ಸರ್ಕಾರ ಉತ್ತೇಜನ ನೀಡುತ್ತಿದೆ  ಎಂದು ಹೇಳಿದ್ದಾರೆ.

ಇದನ್ನೂ ಓದಿ : LPG CNG Prices Hike: ಪೆಟ್ರೋಲ್-ಡೀಸೆಲ್ ನಂತರ, ಈಗ CNG-ದೇಶೀಯ ಅನಿಲಗಳ ಬೆಲೆ ಏರಿಕೆ!

ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಯೋಜನೆಯಾಗಿದೆ.  ಇದರ ಮೂಲಕ ರೈತರು (farmers), ಸಕಾಲದಲ್ಲಿ ಸಾಲ ಪಡೆಯುವುದು ಸಾಧ್ಯವಾಗುತ್ತದೆ. ಈ ಯೋಜನೆಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ರೈತರಿಗೆ ಸಕಾಲದಲ್ಲಿ ಅಲ್ಪಾವಧಿ ಸಾಲ ನೀಡುವುದು ಇದರ ಉದ್ದೇಶವಾಗಿತ್ತು. ಯೋಜನೆಯಡಿ, ಯಾವುದೇ ರೈತರು ಹತ್ತಿರದ ಬ್ಯಾಂಕ್ (Bank) ಶಾಖೆಯ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು.

ಇದನ್ನೂ ಓದಿ : LIC ಈ ಯೋಜನೆಯಲ್ಲಿ ಕೇವಲ 4 ಪ್ರೀಮಿಯಂ ಪಾವತಿಸಿ 1 ಕೋಟಿ ಲಾಭ ಪಡೆಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News