Four star players injured: ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದಲ್ಲಿ ದೀರ್ಘಕಾಲದ ಗಾಯದ ನಂತರ ಮೂವರು ಆಟಗಾರರು ಮರಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಆಟದ ಪರಿಸ್ಥಿತಿ ಸ್ಪಷ್ಟವಾಗಿಲ್ಲ. ಸ್ಕ್ಯಾನಿಂಗ್ ನಂತರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು.
ಫೆಬ್ರವರಿ 19 ರಂದು ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಮತ್ತು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಶನಿವಾರ ಪ್ರಕಟಿಸಲಾಗಿದೆ.
Champions Trophy 2025: ಚಾಂಪಿಯನ್ಸ್ ಟ್ರೋಫಿ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ತಂಡದಲ್ಲಿ ಯಾರಿದ್ದಾರೆ? ಯಾವ ಆಟಗಾರರನ್ನು ಹೊರಹಾಕಲಾಗಿದೆ? ಅದರ ಬಗ್ಗೆ ನೋಡೋಣ.
Champions Trophy 2025: ಭಾರತ ಕ್ರಿಕೆಟ್ ತಂಡ ತನ್ನ ಕಳಪೆ ಪ್ರದರ್ಶನಕ್ಕಾಗಿ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ತಂಡದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ಪರಿಸ್ಥಿತಿಯನ್ನು ಸರಿಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಮಗಳನ್ನು ಪ್ರಾರಂಭಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೂ ಮುನ್ನ ಕೊಹ್ಲಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಏನಾಯ್ತು ಕೊಹ್ಲಿಗೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ. ವಿರಾಟ್ ಕೊಹ್ಲಿಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ ರಣಜಿಗೆ ಕೊಹ್ಲಿ ಹೆಸರನ್ನು ಘೋಷಿಸಲಾಯಿತು.
ಭಾರತದ ಎಲ್ಲಾ ಗುಂಪು ಆಟಗಳು ಮತ್ತು ಮೊದಲ ಸೆಮಿಫೈನಲ್ ಅನ್ನು ದುಬೈನಲ್ಲಿ ಆಡಲಾಗುತ್ತದೆ. ಒಂದು ವೇಳೆ ಭಾರತ ಫೈನಲ್ಗೆ ಅರ್ಹತೆ ಪಡೆದರೆ, ಅದನ್ನು ದುಬೈಗೆ ಸ್ಥಳಾಂತರಿಸಲಾಗುತ್ತದೆ.ಇಲ್ಲದಿದ್ದರೆ ಲಾಹೋರ್ ನಲ್ಲಿ ಚಾಂಪಿಯನ್ಶಿಪ್ ಪಂದ್ಯವನ್ನು ಆಯೋಜಿಸಲಾಗುತ್ತದೆ.
ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್ಗಾಗಿ ಆಸ್ಟ್ರೇಲಿಯಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಉನ್ನತ ಮಟ್ಟದ ಪಂದ್ಯಾವಳಿಯನ್ನು 8 ವರ್ಷಗಳ ನಂತರ ನಡೆಸಲಾಗುತ್ತಿದೆ.
Champions Trophy 2025: ಆಸ್ಟ್ರೇಲಿಯಾ ಪ್ರವಾಸದಲ್ಲಿ ಎದುರಾದ ಹೀನಾಯ ಸೋಲಿನಿಂದ ತೀವ್ರ ನಿರಾಸೆಗೊಂಡಿರುವ ಟೀಂ ಇಂಡಿಯಾ ಅಭಿಮಾನಿಗಳಿಗೆ ಮತ್ತೊಂದು ವಿಷಯ ಇದೀಗ ಚಿಂತೆಗೀಡು ಮಾಡಿದೆ. ಆಸೀಸ್ ಪ್ರವಾಸದ ವೇಳೆ ಬೆನ್ನುನೋವಿಗೆ ಒಳಗಾದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮುಂಬರುವ ICC ಟೂರ್ನಮೆಂಟ್ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಆಡುತ್ತಾರೆಯೇ? ಅಥವಾ ಇಲ್ಲವೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿನ ಆತಂಕ ಹೆಚ್ಚಿಸಿದೆ.
Champions Trophy 2025: ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 9 ರಂದು ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಹಳ ಸಮಯದಿಂದ ಉದ್ವಿಗ್ನತೆ ಇತ್ತು.
Champions Trophy 2025: ಭಾರತೀಯ ಕ್ರಿಕೆಟ್ ನಲ್ಲಿ ಭಾರೀ ಬದಲಾವಣೆಗಳು ಆಗುವ ಅವಕಾಶಗಳಿವೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದೆ. ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ಈ ಇಬ್ಬರು ಸ್ಟಾರ್ ಆಟಗಾರರು ಗೌರವಯುತವಾಗಿ ನಿವೃತ್ತಿಯಾಗಲಿ ಎಂದು ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ.
Champions Trophy 2025: ಐಸಿಸಿಯ ಈ ನಿರ್ಧಾರದ ಬಗ್ಗೆ ಗುರುವಾರ ಮಾಹಿತಿ ಹೊರಬಿದ್ದಿದೆ ಬೆಳಕಿಗೆ ಬಂದಿದೆ. ಈ ಹಿಂದೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. 2025ರ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಲಿ, 2026ರಲ್ಲಿ ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.
Champions Trophy 2025: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ. ಇದರ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಂಕಷ್ಟದಲ್ಲಿದೆ.
Champions Trophy 2025 Latest Update: 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಹೈಬ್ರಿಡ್ ಮಾದರಿಯು ಈಗ ಏಕೈಕ ಆಯ್ಕೆಯಾಗಿದೆ ಎಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಅಲ್ಟಿಮೇಟಮ್ ನೀಡಿತ್ತು. ಒಂದು ವೇಳೆ ಪಿಸಿಬಿ ಇದಕ್ಕೆ ಒಪ್ಪಿಗೆ ನೀಡದಿದ್ದಲ್ಲಿ ಅದರ ತಂಡ ಹೊರಗುಳಿಯಲಿದ್ದು, ಈ ಐಸಿಸಿ ಟೂರ್ನಿಯನ್ನು ಬೇರೆ ದೇಶದಲ್ಲಿ ಆಯೋಜಿಸಲಾಗುವುದು.
Champions Trophy: ICC ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯು 1998 ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಿತು. ಅಂದಿನಿಂದ ಇಲ್ಲಿಯವರೆಗೆ ಚಾಂಪಿಯನ್ಸ್ ಟ್ರೋಫಿಯ ಎಂಟು ಆವೃತ್ತಿಗಳು ನಡೆದಿವೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಈ ಬಾರಿ ಪಾಕಿಸ್ತಾನದ ನೆಲದಲ್ಲಿ ನಡೆಯಲಿದೆ.
KL Rahul and Shreyas Iyer: ಚಾಂಪಿಯನ್ಸ್ ಟ್ರೋಫಿ 2025 ಎಲ್ಲಾ ತಂಡಗಳು ತಯಾರಿ ನಡೆಸುತ್ತಿರುವ ಮುಂದಿನ ಪ್ರಮುಖ ICC ಈವೆಂಟ್ ಆಗಿದೆ. ಪಾಕಿಸ್ತಾನವು ಮೆಗಾ-ಈವೆಂಟ್ ಅನ್ನು ಆಯೋಜಿಸಲಿದೆ ಎಂದು ಸದ್ಯದ ಮಟ್ಟಿಗೆ ಹೇಳಲಾಗುತ್ತಿದೆಯಾದರೂ, ಭಾರತದ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ನಿಂತಿದೆ.
Harbhajan Singh: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
David Warner: ನಿವೃತ್ತಿಯಿಂದ ಯು-ಟರ್ನ್ ತೆಗೆದುಕೊಂಡ ಆಸ್ಟ್ರೇಲಿಯಾದ ಮಾಜಿ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ಗೆ ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಮಂಡಳಿ ಆಘಾತ ನೀಡಿದೆ. ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಆಸ್ಟ್ರೇಲಿಯಾದ ಆಯ್ಕೆಗಾರ ಜಾರ್ಜ್ ಬೈಲಿ ಸ್ಪಷ್ಟಪಡಿಸಿದ್ದಾರೆ. ODI ವರ್ಲ್ಡ್ ಕಪ್ 2023 ಗೆದ್ದ ನಂತರ, ಡೇವಿಡ್ ವಾರ್ನರ್ 50 ಓವರ್ ಫಾರ್ಮ್ಯಾಟ್ ಮತ್ತು T20 ವಿಶ್ವಕಪ್ 2024 ನೊಂದಿಗೆ ಕಿರು ಸ್ವರೂಪಕ್ಕೆ ವಿದಾಯ ಹೇಳಿದರು. ಈ ವರ್ಷದ ಆರಂಭದಲ್ಲಿ, ವಾರ್ನರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದರು.
India-Pakistan Match: ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಲಾಹೋರ್ನಲ್ಲಿ ಹಣಿ ನಡೆಸಿತ್ತು. ಆದರೆ, ಇದೀಗ ಈ ಪಂದ್ಯ ಲಾಹೋರ್ನಲ್ಲಿ ನಡೆಯುವುದಿಲ್ಲ ಎನ್ನು ಸುದ್ದಿ ಕೇಳಿಬಂದಿದೆ. ಐಸಿಸಿ ಚಾಂಫಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ, ಬದಲಿಗೆ ಪಾಕಿಸ್ತಾನ ತಂಡ ಬಾರತಕ್ಕೆ ಪ್ರಯಾಣ ಬೆಳಸಲಿದೆ ಎಂದು ಮೂಲಗಳು ತಿಳಿಸಿವೆ.
IND vs PAK Champions Trophy: ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ದಿನಾಂಕ ಮತ್ತು ಸ್ಥಳವನ್ನು ಪಿಸಿಬಿ ನಿರ್ಧರಿಸಿದೆ. ಆದರೆ, ಇದಕ್ಕೆ ಬಿಸಿಸಿಐ ಒಪ್ಪಿಗೆ ನೀಡಬೇಕಿದೆ. 2025ರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.