ಹೊರ ರಾಜ್ಯದವರು ಇನ್ನು ರಾಜ್ಯದಲ್ಲಿ ಭೂಮಿ ಖರೀದಿಸುವಂತಿಲ್ಲ ! ಹೊರಬಿತ್ತು ಮುಖ್ಯಮಂತ್ರಿಯ ಕಟ್ಟುನಿಟ್ಟಿನ ಆದೇಶ

ಭೂ ಕಾನೂನಿನ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ರಾಜ್ಯದ ನಿವಾಸಿಗಳಲ್ಲದೆ ಹೊರಗಿನವರು ಭೂಮಿ ಖರೀದಿಸುವುದನ್ನು ಸರ್ಕಾರ  ನಿಷೇಧಿಸಿದೆ. 

Written by - Ranjitha R K | Last Updated : Jan 2, 2024, 09:46 AM IST
  • ಧಮಿ ಸರ್ಕಾರವದ ಮಹತ್ವದ ನಿರ್ಧಾರ
  • ಹೊರಗಿನವರು ಭೂಮಿ ಖರೀದಿಸುವುದಕ್ಕೆ ನಿಷೇಧ
  • ಎಲ್ಲಾ ಡಿಎಂಗಳಿಗೆ ಸೂಚನೆ ರವಾನೆ
ಹೊರ ರಾಜ್ಯದವರು ಇನ್ನು ರಾಜ್ಯದಲ್ಲಿ ಭೂಮಿ ಖರೀದಿಸುವಂತಿಲ್ಲ ! ಹೊರಬಿತ್ತು ಮುಖ್ಯಮಂತ್ರಿಯ ಕಟ್ಟುನಿಟ್ಟಿನ ಆದೇಶ  title=

ಉತ್ತರಾಖಂಡ : ಉತ್ತರಾಖಂಡದಲ್ಲಿ ಭೂ ಕಾನೂನು ಮತ್ತು ಸ್ಥಳೀಯ ನಿವಾಸ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಧಮಿ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಉತ್ತರಾಖಂಡದಲ್ಲಿ ಹೊರಗಿನವರು ಭೂಮಿ ಖರೀದಿಸುವುದನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ನಿಷೇಧಿಸಿದ್ದಾರೆ.

ಮುಂದಿನ ಆದೇಶದವರೆಗೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಕೃಷಿ ಮತ್ತು ತೋಟಗಾರಿಕೆ ಉದ್ದೇಶಕ್ಕಾಗಿ ಉತ್ತರಾಖಂಡದ ಹೊರಗಿನ ವ್ಯಕ್ತಿಗಳಿಗೆ ಭೂಮಿ ಖರೀದಿಸಲು ಅವಕಾಶ ನೀಡದಂತೆ  ಧಾಮಿ ಆದೇಶಿಸಿದ್ದಾರೆ.ಅಂದರೆ, ರಾಜ್ಯದಲ್ಲಿ ಹೊರಗಿನವರು ಭೂಮಿ ಖರೀದಿಸುವ ಬಗ್ಗೆ  ಮಧ್ಯಂತರ ನಿಷೇಧವನ್ನು ಹೇರಲಾಗಿದೆ. 

ಇದನ್ನೂ ಓದಿ : ಒಂದು ಲಕ್ಷಕ್ಕೂ ಕಡಿಮೆ ಬೆಲೆ ಬಾಳುವ ಈ ಸ್ಕೂಟರ್ ಗಳು ಮಹಿಳೆಯರಿಗೆ ಬೆಸ್ಟ್ ಆಯ್ಕೆಯಾಗಿವೆ!

ಉತ್ತರಾಖಂಡ್‌ನಲ್ಲಿ ಭೂಮಿ ಖರೀದಿಸುವ ಮುನ್ನ ಖರೀದಿದಾರರ ಹಿನ್ನೆಲೆ ಪರಿಶೀಲನೆ ನಡೆಸಬೇಕು. ಹಿನ್ನೆಲೆ ಪರಿಶೀಲನೆ ನಂತರವೇ ಭೂಮಿ ಖರೀದಿಸುವಂತೆ ಇದಕ್ಕೂ ಮುನ್ನ  ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು.

ಸಾರ್ವಜನಿಕ ವಿಚಾರಣೆ ನಡೆಸಲು ಆದೇಶ  :
ಮುಖ್ಯಮಂತ್ರಿ ನಿವಾಸದಲ್ಲಿ ಭೂ ಕಾನೂನಿಗೆ ಸಂಬಂಧಿಸಿದಂತೆ ಸಿಎಂ ಧಾಮಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಭೂ ಕಾಯಿದೆ ರೂಪಿಸಿರುವ ಕುರಿತು ಮುಖ್ಯಮಂತ್ರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಇದನ್ನೂ ಓದಿ : ಇವರು ಇನ್ನು ಮುಂದೆ UPI ಮೂಲಕ ಹಣ ವರ್ಗಾಯಿಸಲು ಸಾಧ್ಯವಿಲ್ಲ : ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ

ದೊಡ್ಡ ಪ್ರಮಾಣದ ಸಾರ್ವಜನಿಕ ವಿಚಾರಣೆ ನಡೆಸಬೇಕು. ವಿವಿಧ ಕ್ಷೇತ್ರಗಳ ಜನರು ಮತ್ತು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಭೂ ಕಾನೂನಿಗೆ ವಿಕೇಂದ್ರೀಕೃತ ವ್ಯವಸ್ಥೆಗಾಗಿ ಗರ್ವಾಲ್ ಮತ್ತು ಕುಮಾನ್ ಕಮಿಷನರ್ ಕೂಡಾ ಸೇರಿಸಬೇಕು ಎಂದು ಹೇಳಿದ್ದಾರೆ.  

ಉತ್ತರ ಪ್ರದೇಶ ಜಮೀನ್ದಾರಿ ಮತ್ತು ಭೂ ವ್ಯವಸ್ಥೆ ಕಾಯಿದೆ 1950 ರ ಸೆಕ್ಷನ್ 154 ರಲ್ಲಿ 2004 ರಲ್ಲಿ ಮಾಡಿದ ತಿದ್ದುಪಡಿಯ ಪ್ರಕಾರ, ಸೆಪ್ಟೆಂಬರ್ 12, 2003 ರ ಮೊದಲು ಉತ್ತರಾಖಂಡ ರಾಜ್ಯದಲ್ಲಿ ಸ್ಥಿರ ಆಸ್ತಿಯನ್ನು ಹೊಂದಿರದ ವ್ಯಕ್ತಿಗಳು, ಕೃಷಿ ಮತ್ತು ತೋಟಗಾರಿಕೆ ಉದ್ದೇಶಕ್ಕಾಗಿ ಜಮೀನು ಖರೀದಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿ ನೀಡಲು ಅವಕಾಶವಿದೆ. 

ಎಲ್ಲಾ ಡಿಎಂಗಳಿಗೆ ಸೂಚನೆ ರವಾನೆ :  
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಭೂ ಕಾನೂನು ಸಮಿತಿಯ ವರದಿ ಸಲ್ಲಿಕೆಯಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿಗಳು ಹೊರಗಿನ ವ್ಯಕ್ತಿಗಳಿಗೆ ಅವಕಾಶ ನೀಡದಂತೆ ನಿರ್ಧರಿಸಲಾಗಿದೆ. 

ಇದನ್ನೂ ಓದಿ : ಭಾರತದಲ್ಲಿ ಜನವರಿ 1 ರಂದು ಚಿನ್ನದ ಬೆಲೆಯಲ್ಲಿ ಏರಿಕೆ: ನಿಮ್ಮ ನಗರ ದರವನ್ನು ಪರಿಶೀಲಿಸಿ!

ಸಮಿತಿಯ ಪರವಾಗಿ ತಜ್ಞರು ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಜನರ ಸಲಹೆಗಳ ಆಧಾರದ ಮೇಲೆ ಶೀಘ್ರವಾಗಿ ಕರಡು ಸಿದ್ಧಪಡಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದಾರೆ.  ಅಲ್ಲಿಯವರೆಗೆ ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಉದ್ದೇಶಗಳಿಗಾಗಿ ಹೊರಗಿನವರು ಭೂಮಿ ಖರೀದಿಸುವುದನ್ನು ನಿಷೇಧಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News