Income Tax Refund Tips: ಐ‌ಟಿ‌ಆರ್ ಸಲ್ಲಿಕೆ ವೇಳೆ ಈ ವಿಷಯಗಳು ನೆನಪಿನಲ್ಲಿದ್ದರೆ ಮರುಪಾವತಿ ವಿಳಂಬವಾಗಲ್ಲ

Income Tax Refund Tips: ಐ‌ಟಿ‌ಆರ್ ಅನ್ನು ಸರಿಯಾದ ಸಮಯಕ್ಕೆ ಫೈಲ್ ಮಾಡುವುದರಿಂದ ಮರುಪಾವತಿಯನ್ನು ಪಡೆಯಲು ಯಾವುದೇ ರೀತಿಯ ತೊಂದರೆಗುವುದಿಲ್ಲ. ಆದರೆ, ನೆನೆಪಿಡಿ, ಐ‌ಟಿ‌ಆರ್ ಫೈಲ್ ಮಾಡುವ ವೇಳೆ ನಾವು ಮಾಡುವ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಮರುಪಾವತಿಯನ್ನು ವಿಳಂಬಗೊಳಿಸಬಹುದು. ಇದನ್ನು ತಪ್ಪಿಸಲು ಐ‌ಟಿ‌ಆರ್ ಸಲ್ಲಿಕೆ ವೇಳೆ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅಗತ್ಯ.   

Written by - Yashaswini V | Last Updated : Jul 19, 2023, 01:39 PM IST
  • ಐಟಿ ಮರುಪಾವತಿ ವಿಳಂಬವನ್ನು ತಪ್ಪಿಸಲು ಐ‌ಟಿ‌ಆರ್ ಫೈಲಿಂಗ್ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ.
  • ನೀವೂ ಕೂಡ ಐ‌ಟಿ‌ಆರ್ ಫೈಲ್ ಮಾಡುತ್ತಿದ್ದರೆ ಆದಾಯ ತೆರಿಗೆ ಮರುಪಾವತಿಯಲ್ಲಿ ವಿಳಂಬವನ್ನು ತಪ್ಪಿಸಲು ಈ ಸಲಹೆಗಳನ್ನು ನೆನಪಿಡಿ
Income Tax Refund Tips: ಐ‌ಟಿ‌ಆರ್ ಸಲ್ಲಿಕೆ ವೇಳೆ ಈ ವಿಷಯಗಳು ನೆನಪಿನಲ್ಲಿದ್ದರೆ ಮರುಪಾವತಿ ವಿಳಂಬವಾಗಲ್ಲ  title=

Income Tax Refund Tips: ಪ್ರತಿ ಆರ್ಥಿಕ ವರ್ಷದಲ್ಲಿ ಸರಿಯಾದ ಸಮಯಕ್ಕೆ ಯಾವುದೇ ಮುಚ್ಚು ಮರೆಯಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆ ಪಾವತಿದಾರನ ಜವಾಬ್ದಾರಿ ಆಗಿದೆ. ಐ‌ಟಿ‌ಆರ್ ಪಾವತಿ ಬಳಿಕ ಪ್ರತಿಯೊಬ್ಬರೂ ನಮ್ಮ ಖಾತೆಗೆ ಮರುಪಾವತಿ ಹಣ ಯಾವಾಗ ಖಾತೆ ಸೇರುತ್ತೋ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ, ಐ‌ಟಿ‌ಆರ್ ಫೈಲ್ ಮಾಡುವ ವೇಳೆ ನಾವು ಮಾಡುವ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಮರುಪಾವತಿಯನ್ನು ವಿಳಂಬಗೊಳಿಸಬಹುದು. ಇದನ್ನು ತಪ್ಪಿಸಲು ಐ‌ಟಿ‌ಆರ್ ಸಲ್ಲಿಕೆ ವೇಳೆ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅಗತ್ಯ. 

ಐಟಿ ಮರುಪಾವತಿ ವಿಳಂಬವನ್ನು ತಪ್ಪಿಸಲು ಐ‌ಟಿ‌ಆರ್ ಫೈಲಿಂಗ್ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅಗತ್ಯ. ಅವುಗಳೆಂದರೆ... 
ಸಮಯೋಚಿತ ಐ‌ಟಿ‌ಆರ್ ಫೈಲಿಂಗ್:
 
ಐಟಿಆರ್ ಮರುಪಾವತಿ ವಿಳಂಬಕ್ಕೆ ಬಹಳ ಮುಖ್ಯವಾದ ಕಾರಣ ಐಟಿಆರ್ ಅನ್ನು ತಪ್ಪಾಗಿ ಅಥವಾ ತಡವಾಗಿ ಸಲ್ಲಿಸುವುದು. ಇದರಿಂದ ಮರುಪಾವತಿ ವಿಳಂಬವಾಗುವುದು ಮಾತ್ರವಲ್ಲ, ಸಮಯಕ್ಕೆ ಸರಿಯಾಗಿ ಫೈಲ್ ಮಾಡಲು ವಿಫಲವಾದರೆ ದಂಡವನ್ನೂ ಪಾವತಿಸಬೇಕಾಗಬಹುದು. 

ಸರಿಯಾದ ಐ‌ಟಿ‌ಆರ್ ಫಾರ್ಮ್ ಆಯ್ಕೆ: 
ನಿಮ್ಮ ಆದಾಯದ ಮೂಲಗಳು ಮತ್ತು ವರ್ಗವನ್ನು ಆಧರಿಸಿ ಸೂಕ್ತವಾದ ಆದಾಯ ತೆರಿಗೆ ರಿಟರ್ನ್  ಫಾರ್ಮ್ ಅನ್ನು ಆಯ್ಕೆ ಮಾಡುವುದು ಮುಖ್ಯ. ಒಂದೊಮ್ಮೆ ನೀವು ಐ‌ಟಿ‌ಆರ್‌ಈ ಫೈಲ್ ಮಾಡುವಾಗ ತಪ್ಪಾದ ಫಾರ್ಮ್ ಅನ್ನು ಬಳಸಿದರೆ ಇದರಿಂದ ಐ‌ಟಿ‌ಆರ್ ಪ್ರಕ್ರಿಯೆಯು ವಿಳಂಬವಾಗಬಹುದು ಮತ್ತು ನಿಮ್ಮ ಮರುಪಾವತಿ ಹಕ್ಕು ನಿರಾಕರಣೆಗೆ ಕಾರಣವಾಗಬಹುದು. ಹಾಗಾಗಿ, ಐ‌ಟಿ‌ಆರ್ ಫೈಲ್ ಮಾಡುವಾಗ ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡಲು ಮರೆಯಬೇಡಿ. 

ಸಂಪರ್ಕ ನವೀಕರಣ: 
ಸಾಮಾನ್ಯವಾಗಿ, ಐ‌ಟಿ‌ಆರ್ ಫೈಲಿಂಗ್ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಇಮೇಲ್ ಮತ್ತು ಸಂದೇಶದ ಮೂಲಕ ಆಗಾಗ್ಗೆ ಸಂಪರ್ಕಿಸುತ್ತದೆ. ಆದರೆ, ರಿಟರ್ನ್ ಫೈಲಿಂಗ್‌ನಲ್ಲಿ ಮಾನ್ಯವಾದ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂಡಿಸದಿದ್ದರೆ ಇದು ನಿಮ್ಮನ್ನು ಸಂಪರ್ಕಿಸಲು ತೊಡಕುಂಟು ಮಾಡುವುದರ ಜೊತೆಗೆ ಮರುಪಾವತಿಯೂ ವಿಳಂಬವಾಗಬಹುದು.

ಇದನ್ನೂ ಓದಿ- ವಿಶ್ವದ ಟಾಪ್ 10 ಶಕ್ತಿಶಾಲಿ ಪಾಸ್‌ಪೋರ್ಟ್‌ಗಳಿವು

ಸರಿಯಾದ ಬ್ಯಾಂಕ್ ಖಾತೆ ವಿವರ: 
ನೀವು ಯಾವುದೇ ವಿಳಂಬವಿಲ್ಲದೆ ಆದಾಯ ತೆರಿಗೆ ಮರುಪಾವತಿ ನಿಮ್ಮ ಖಾತೆ ಸೇರಬೇಕು ಎಂದು ಬಯಸಿದರೆ ಇದಕ್ಕಾಗಿ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸುವಾಗ ಎರಡೆರಡು ಬಾರಿ ಕ್ರಾಸ್ ಚೆಕ್ ಮಾಡುವುದು ಅಗತ್ಯ. ಆದಾಯ ತೆರಿಗೆ ಇಲಾಖೆಯು ಮರುಪಾವತಿ ಮೊತ್ತವನ್ನು ನೇರವಾಗಿ ತೆರಿಗೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಬ್ಯಾಂಕ್ ಖಾತೆ ಸಂಖ್ಯೆ ಅಥವಾ IFSC ಕೋಡ್‌ನಲ್ಲಿನ ಯಾವುದೇ ತಪ್ಪು ಮರುಪಾವತಿಯನ್ನು ವಿಳಂಬವಾಗುವಂತೆ ಮಾಡಬಹುದು ಅಥವಾ ಮರುಪಾವತಿಯನ್ನು ವಿಫಲಗೊಳಿಸಬಹುದು ಎಂಬುದನ್ನೂ ನೆನಪಿನಲ್ಲಿಡಿ. 

ಐ‌ಟಿ‌ಆರ್ ಇ-ಪರಿಶೀಲನೆ: 
ನಮ್ಮಲ್ಲಿ ಎಷ್ಟೋ ಮಂದಿ ಐ‌ಟಿ‌ಆರ್ ಫೈಲ್ ಮಾಡಿದ ಬಳಿಕ ಅದನ್ನು ಮತ್ತೆ ಪರಿಶೀಲಿಸುವ ಗೊಳಿಗೆ ಹೋಗುವುದೇ ಇಲ್ಲ. ಆದರೆ, ಇದು ತಪ್ಪು. ಆನ್‌ಲೈನ್ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ, ಅದನ್ನು ತಕ್ಷಣವೇ ಪರಿಶೀಲಿಸುವುದು ಅವಶ್ಯಕ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಆಧಾರ್ OTP, ನೆಟ್ ಬ್ಯಾಂಕಿಂಗ್ ಮತ್ತು ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (EVC) ನಂತಹ ಇ-ಪರಿಶೀಲನೆಯ ವಿವಿಧ ವಿಧಾನಗಳನ್ನು ನೀಡುತ್ತದೆ.

ಸ್ಪಷ್ಟ ಬಾಕಿಗಳು: 
ನೀವು ಹಿಂದಿನ ಅಸೆಸ್ಮೆಂಟ್ ವರ್ಷಗಳಿಂದ ಯಾವುದೇ ಬಾಕಿ ಉಳಿದಿರುವ ತೆರಿಗೆ ಬಾಧ್ಯತೆಗಳು ಅಥವಾ ಬಾಕಿಗಳನ್ನು ಹೊಂದಿದ್ದರೆ, ಪ್ರಸ್ತುತ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಅವುಗಳನ್ನು ಕ್ಲಿಯರ್ ಮಾಡುವುದು ಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ಯಾವುದೇ ಬಾಕಿ ಇರುವ ತೆರಿಗೆಯ ವಿರುದ್ಧ ನಿಮ್ಮ ಮರುಪಾವತಿಯನ್ನು ಹೊಂದಿಸಬಹುದು, ಇದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಹುದು.

ಇದನ್ನೂ ಓದಿ- GST Update: ಹಬ್ಬದ ಋತು ಆಗಮನಕ್ಕೂ ಮುನ್ನ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ!

ಸೂಚನೆಗಳು ಮತ್ತು ಸಂವಹನಗಳಿಗೆ ಪ್ರತಿಕ್ರಿಯಿಸಿ
ಕೆಲವೊಮ್ಮೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ತೆರಿಗೆ ರಿಟರ್ನ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು ಅಥವಾ ನೋಟಿಸ್‌ಗಳನ್ನು ನೀಡಬಹುದು. ಅಂತಹ ಸಂವಹನಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ ಮತ್ತು ಮರುಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಸರಿಯಾದ ಸಮಯಕ್ಕೆ ತಡಮಾಡದೆ ಅಗತ್ಯ ಮಾಹಿತಿಯನ್ನು ಒದಗಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News