ಇದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಬಗ್ಗೆ ದಾಸ ದರ್ಶನ್ ಮಾತನಾಡಿರೋ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. “ಅಭಿಮಾನಿಗಳು ನನಗೆ ಇಷ್ಟೆಲ್ಲಾ ಪ್ರೀತಿ ತೋರಿಸುತ್ತಾರೆ. ನಾನು ಅವರ ಋಣವನ್ನ ಹೇಗೆ ತೀರಿಸಲಿ..? ಈ ಜನ್ಮದಲ್ಲಿ ತೀರಿಸಲು ಸಾಧ್ಯವೇ ಇಲ್ಲ ಬಿಡಿ” ಅನ್ನೋದನ್ನ ತುಂಬಾ ಭಾವುಕರಾಗಿ ಹೇಳಿದ್ರು ದರ್ಶನ್.
ದರ್ಶನ್ ಕನ್ನಡಾಭಿಮಾನಿಗಳ ಹೃದಯದ ಯಜಮಾನ. ಅಭಿಮಾನಿಗಳ ನೆಚ್ಚಿನ ದಾಸ. ತನ್ನವರಿಗಾಗಿ ಸದಾ ಮಿಡಿಯುವ ನಮ್ಮ ಪ್ರೀತಿಯ ರಾಮು. ಈ ಮಾತು ಬರಿ ಅಭಿಮಾನಿಗಳಿಗೆ ಮೀಸಲಾಗಿಲ್ಲ. ತಾನೂ ಬೆಳೆದು ತನ್ನ ಜೊತೆಗಿರುವ ಇತರನ್ನು ಬೆಳೆಸುವ ದೊಡ್ಡ ಮನಸ್ಸಿನ ದೊರೆ ದರ್ಶನ್ ಚಿತ್ರರಂಗದ ಅನೇಕ ಕಲಾವಿದರಿಗೆ ಹೆಗಲಾಗಿದ್ದಾರೆ. ಟ್ರೈಲರ್, ಟೀಸರ್, ಸಿನಿಮಾದಲ್ಲಿ ಅತಿಥಿ ಪಾತ್ರ ಎನಕ್ಕಾದ್ರೂ ಪ್ರೀತಿಯಿಂದ ಕರೆದ್ರೆ ಬರುತ್ತಾರೆ D Boss.
Banaras Prerelease Event: ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.