ಆಯುರ್ವೇದ ಉತ್ಪನ್ನಗಳ ನಂತರ ಇದೀಗ Credit Card ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್

ಯೋಗ ಮತ್ತು ಆಯುರ್ವೇದದ ಮೂಲಕ ವಿಶ್ವಾದ್ಯಂತ ಗುರುತಿಸಿಕೊಂಡಿರುವ ಪತಂಜಲಿ,  ಇದೀಗ ತನ್ನದೇ ಆದ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.

Written by - Ranjitha R K | Last Updated : Feb 3, 2022, 01:23 PM IST
  • ಪತಂಜಲಿ ಆಯುರ್ವೇದ್ ಲಿಮಿಟೆಡ್ PNBಯೊಂದಿಗೆ ಕ್ರೆಡಿಟ್ ಕಾರ್ಡ್ ಆರಂಭ
  • PNB RuPay ಪ್ಲಾಟಿನಂ, PNB RuPay Select ಎರಡು ರೂಪಾಂತರಗಳಲ್ಲಿ ಲಭ್ಯ
  • ಕ್ಯಾಶ್ ಬ್ಯಾಕ್, ಲಾಯಲ್ಟಿ ಪಾಯಿಂಟ್‌ಗಳು, ವಿಮಾ ರಕ್ಷಣೆಯ ಸೌಲಭ್ಯಗಳು ಕೂಡಾ ಲಭ್ಯ
ಆಯುರ್ವೇದ ಉತ್ಪನ್ನಗಳ ನಂತರ ಇದೀಗ  Credit Card ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್  title=
ಪತಂಜಲಿ ಆಯುರ್ವೇದ್ ಲಿಮಿಟೆಡ್ PNBಯೊಂದಿಗೆ ಕ್ರೆಡಿಟ್ ಕಾರ್ಡ್ ಆರಂಭ (photo zee news)

ನವದೆಹಲಿ : ಯೋಗ ಮತ್ತು ಆಯುರ್ವೇದದ ಮೂಲಕ ವಿಶ್ವಾದ್ಯಂತ ಗುರುತಿಸಿಕೊಂಡಿರುವ ಪತಂಜಲಿ,  ಇದೀಗ ತನ್ನದೇ ಆದ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಈ ಕ್ರೆಡಿಟ್ ಕಾರ್ಡ್‌ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬಾಬಾ ರಾಮ್‌ದೇವ್ (Baba Ramdev) ಅವರ ಪತಂಜಲಿ ಆಯುರ್ವೇದ್ ಲಿಮಿಟೆಡ್ (PAL), ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ  (NPCI) ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದೆ. ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ RuPay ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾಗುತ್ತದೆ. ಈ ಕ್ರೆಡಿಟ್ ಕಾರ್ಡ್ PNB RuPay Platinum ಮತ್ತು PNB RuPay Select ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ .

ಕ್ಯಾಶ್ ಬ್ಯಾಕ್, ಲಾಯಲ್ಟಿ ಪಾಯಿಂಟ್‌ಗಳು ಲಭ್ಯ  :
ಎರಡೂ ಸಹ-ಬ್ರಾಂಡ್ ಕಾರ್ಡ್‌ಗಳು ಕ್ಯಾಶ್ ಬ್ಯಾಕ್ (Cash back), ಲಾಯಲ್ಟಿ ಪಾಯಿಂಟ್‌ಗಳು, ವಿಮಾ ರಕ್ಷಣೆ (Insurance cover) ಮತ್ತು ಇತರ ಕೆಲವು ವೈಶಿಷ್ಟ್ಯಗಳನ್ನು ಈ ಕಾರ್ಡ್ ಹೊಂದಿದೆ. ಅಲ್ಲದೆ,  ಯಾವುದೇ ಕಿರಿಕಿರಿಯಿಲ್ಲದೆ ಪತಂಜಲಿ ಉತ್ಪನ್ನಗಳನ್ನು (Patanjali product) ಖರೀದಿಸಲು ಸಹಾಯವಾಗುವಂತೆ , ಕ್ರೆಡಿಟ್ ಸೇವೆಯನ್ನು ನೀಡುತ್ತವೆ. ಕಾರ್ಡ್ ಬಿಡುಗಡೆಯಾದ ಮೂರು ತಿಂಗಳವರೆಗೆ, ಪತಂಜಲಿ ಸ್ಟೋರ್‌ಗಳಲ್ಲಿ 2500 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ 2 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಅನ್ನು   ಕಾರ್ಡ್‌ದಾರರು ಪಡೆಯಲಿದ್ದಾರೆ. ಕ್ಯಾಶ್‌ಬ್ಯಾಕ್ ಮಿತಿ 50 ರೂ. ಆಗಿರಲಿದೆ. 

ಇದನ್ನೂ ಓದಿ : ಆಸ್ತಿಯ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿನ ಬದಲಾವಣೆಗಳು ಇವು

300 ರಿವಾರ್ಡ್ ಪಾಯಿಂಟ್‌ಗಳ ವೆಲ್ಕಮ್ ಬೋನಸ್ : 

ಇದಲ್ಲದೇ, PNB RuPay ಪ್ಲಾಟಿನಂ ಮತ್ತು PNB RuPay Select ಕಾರ್ಡಿನ  ಆಕ್ಟಿವೆಶನ್ 300 ರಿವಾರ್ಡ್ ಪಾಯಿಂಟ್‌ಗಳ ವೆಲ್ಕಮ್ ಬೋನಸ್ (reward point welcome bonus) ಸಿಗಲಿದೆ.  ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್ ಆಕ್ಸೆಸ್,  ಕಾರ್ಡ್ ನಿರ್ವಹಣೆಗಾಗಿ PNB Genie ಮೊಬೈಲ್ ಅಪ್ಲಿಕೇಶನ್, ಆಡ್-ಆನ್ ಕಾರ್ಡ್ ಸೌಲಭ್ಯ, ಖರ್ಚಿನ ಮೇಲೆ ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳು, EMI ಮತ್ತು ಆಟೋ -ಡೆಬಿಟ್ ಸೌಲಭ್ಯ ಕೂಡಾ ಇರಲಿದೆ. 

10 ಲಕ್ಷದವರೆಗಿನ ಕ್ರೆಡಿಟ್ ಮಿತಿ : 
ಪ್ಲಾಟಿನಂ ಮತ್ತು ಸೆಲೆಕ್ಟ್ ಕಾರ್ಡ್‌ಗಳು ಅಪಘಾತದಲ್ಲಿ ಸಾವು ಸಂಭವಿಸಿದರೆ, ಅಂಗವೈಕಲ್ಯವಾದರೆ ಕ್ರಮವಾಗಿ  2 ಲಕ್ಷ ಮತ್ತು  10 ಲಕ್ಷ ರೂ. ಗಳ ವಿಮಾ ರಕ್ಷಣೆಯನ್ನು ನೀಡುತ್ತವೆ.  ಪ್ಲಾಟಿನಂ ಕ್ರೆಡಿಟ್ ಕಾರ್ಡ್‌ನಲ್ಲಿ (platinum credit card) 25,000 ದಿಂದ  5 ಲಕ್ಷದವರೆಗಿನ ಕ್ರೆಡಿಟ್ ಮಿತಿ ಲಭ್ಯವಿದ್ದರೆ,  ಸೆಲೆಕ್ಟ್ ಕಾರ್ಡ್‌ನಲ್ಲಿ (select card) 50,000 ರಿಂದ 10 ಲಕ್ಷ ರೂಪಾಯಿಗಳ ಕ್ರೆಡಿಟ್ ಮಿತಿ ಇರುತ್ತದೆ. ಪ್ಲಾಟಿನಂ ಕಾರ್ಡ್‌ನಲ್ಲಿ ಝೀರೋ ಜಾಯಿನಿಂಗ್ ಚಾರ್ಜ್ ಇರುತ್ತದೆ. ಆದರೆ ವಾರ್ಷಿಕ 500 ರೂ. ಪಾವತಿಸಬೇಕಾಗುತ್ತದೆ. ಇನ್ನು ಸೆಲೆಕ್ಟ್ ನಲ್ಲಿ  500 ರೂ ಜಾಯಿನಿಂಗ್ ಚಾರ್ಜ್ ಇದ್ದರೆ,  750 ರೂ. ವಾರ್ಷಿಕ ಶುಲ್ಕ ನೀಡಬೇಕಾಗುತ್ತದೆ. 

ಇದನ್ನೂ ಓದಿ : Earn Money : ನಿಮ್ಮ ಬಳಿ ಈ ಹಳೆಯ ₹ 1 ನೋಟು ಇದ್ದರೆ ನೀವು ಆಗಬಹುದು ಮಿಲಿಯನೇರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News