ಬೆಂಗಳೂರು : CBSE ಬೋರ್ಡ್ 10ನೇ ತರಗತಿಯ ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್ ನೀಡಿದೆ. CBSE 11 ನೇ ತರಗತಿ ಪ್ರವೇಶ 2024 ರಲ್ಲಿ ವಿಷಯ ಸಂಯೋಜನೆಗೆ ಸಂಬಂಧಿಸಿದಂತೆ ಹೊಸ ಸೂಚನೆಯನ್ನು ನೀಡಲಾಗಿದೆ. ಈ ಬಗ್ಗೆ cbse.gov.inನಲ್ಲಿ 2024ರ ಸುತ್ತೋಲೆಯನ್ನು ಪ್ರಕಟಿಸಲಾಗಿದೆ.
CBSE 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸುದ್ದಿ ಇದೆ. ಈ ವರ್ಷ ಅಂದರೆ 2024ರ CBSE 10ನೇ ಫಲಿತಾಂಶ ಪ್ರಕಟವಾದ ನಂತರ, 11 ನೇ ತರಗತಿಗೆ ಪ್ರವೇಶಕ್ಕಾಗಿ ಹೋದಾಗ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ತನ್ನ ವೆಬ್ ಸೈಟ್ cbse.gov.inನಲ್ಲಿ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ : ಇನ್ಮುಂದೆ ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ..! ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ ಇಲ್ಲಿದೆ
ಜನವರಿ 10, 2019 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ಗಣಿತದ ಎರಡು ಹಂತಗಳನ್ನು ಉಲ್ಲೇಖಿಸಲಾಗಿದೆ. ಹಿರಿಯ ಮಾಧ್ಯಮಿಕ ಹಂತದಲ್ಲಿ ಅಂದರೆ 11ನೇ 12ನೇ ತರಗತಿಯಲ್ಲಿ ಗಣಿತವನ್ನು (041) ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸ್ಟ್ಯಾಂಡರ್ಡ್ ಮಾಥ್ಸ್ ಮತ್ತು ಉನ್ನತ ಮಟ್ಟದಲ್ಲಿ ಗಣಿತವನ್ನು ಮುಂದುವರಿಯಲು ಬಯಸದವರಿಗೆ ಮ್ಯಾಥ್ಸ್ ಬೇಸಿಕ್ ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು.
'ಆ ಸುತ್ತೋಲೆಯ ಪ್ರಕಾರ, 10 ನೇ ತರಗತಿಯಲ್ಲಿ ಸ್ಟ್ಯಾಂಡರ್ಡ್ ಮ್ಯಾಥ್ಸ್ (041) ಆಯ್ಕೆ ಮಾಡಿದವರು 11 ನೇ ತರಗತಿಯಲ್ಲಿ ಗಣಿತ (041) ತೆಗೆದುಕೊಳ್ಳಬಹುದು.ಆದರೆ ಬೇಸಿಕ್ ಮಾಥ್ಸ್ (241) ಆಯ್ಕೆ ಮಾಡಿದ ವಿದ್ಯಾರ್ಥಿಗಳು 11 ನೇ ತರಗತಿಯಲ್ಲಿ ಅಪ್ಲೈಡ್ ಮಾಥ್ಸ್ ಅನ್ನು ಮಾತ್ರ ತೆಗೆದುಕೊಳ್ಳಬಹುದಾಗಿತ್ತು.
ಇದನ್ನೂ ಓದಿ : ನೀವು ಪದವಿ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಿರಾ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ...!
ಕರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 11 ಮತ್ತು 12 ನೇ ತರಗತಿಯಲ್ಲಿ ಕೂಡಾ ಗಣಿತ ವಿಷಯವನ್ನು (041) ಆಯ್ಕೆ ಮಾಉವ ಅವಕಾಶವನ್ನು ಸಿಬಿಎಸ್‌ಇ 10ನೇ ತರಗತಿಯಲ್ಲಿ ಬೆಸ್ಕ್ ಮಾಥ್ಸ್ ಆರಿಸಿಕೊಂಡ ವಿದ್ಯಾರ್ಥಿಗಳಿಗೂ ನೀಡಿತ್ತು. ಈಗ ಈ ಸೆಷನ್ ಅಂದರೆ 2024-2025, NEP ಶಿಫಾರಸುಗಳ ಅಡಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗುತ್ತಿದೆ.
ಈ ಸಡಿಲಿಕೆಯನ್ನು 2024-25ರ ಶೈಕ್ಷಣಿಕ ಅವಧಿಗೂ ವಿಸ್ತರಿಸಲಾಗಿದೆ.ಅಂದರೆ, ಈ ವರ್ಷವೂ 10ನೇ ತರಗತಿಯಲ್ಲಿ ಗಣಿತ ಬೇಸಿಕ್ (241) ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು 11ನೇ ತರಗತಿಗೆ ಪ್ರವೇಶ ಪಡೆಯುವ ಸಮಯದಲ್ಲಿ ಗಣಿತ (041) ತೆಗೆದುಕೊಳ್ಳಬಹುದು.
ಆದರೆ ಈ ವಿಷಯದೊಂದಿಗೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ, ವಿದ್ಯಾರ್ಥಿಯು ನಿಜವಾಗಿಯೂ 11 ನೇ ತರಗತಿಯಲ್ಲಿ ಗಣಿತವನ್ನು (041) ಅಧ್ಯಯನ ಮಾಡುವ ಯೋಗ್ಯತೆಯನ್ನು ಹೊಂದಿದ್ದಾನೆ ಎಂಬುದನ್ನು ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರು / ಪ್ರಾಂಶುಪಾಲರು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ : ವಾರಕ್ಕೆ ಕೇವಲ 10 ಗಂಟೆ ಕೆಲಸ ವೇತನ ಮಾತ್ರ 22 ಲಕ್ಷ ! ಅದು ಕೂಡಾ ವರ್ಕ್ ಫ್ರಮ್ ಹೋಂ
ಸಿಬಿಎಸ್‌ಇ ಮಂಡಳಿಯು 2024-25ರಲ್ಲಿ 10 ನೇ ತರಗತಿಯಲ್ಲಿ ವಿದ್ಯಾರ್ಥಿಗಳು LOC ಯಲ್ಲಿನ ವಿಷಯಗಳನ್ನು ಒಮ್ಮೆ ಭರ್ತಿ ಮಾಡಿದರೆ, ಅವುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಡಳಿಯು ನಿರ್ಧರಿಸಿದೆ ಎಂದು ಹೇಳಿದೆ. ಹೀಗಾಗಿ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕೂಡ ಈ ಬಗ್ಗೆ ನಿಗಾ ವಹಿಸಬೇಕು’ಎಂದು ಹೇಳಿದರು.
ಈ ನಿಟ್ಟಿನಲ್ಲಿ CBSE ಸುತ್ತೋಲೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.