ICAR Recruitment 2024: 5,360 ಕೃಷಿ ಸಹಾಯಕರ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ICAR Recruitment 2024: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷಗಳು, ಗರಿಷ್ಠ ವಯಸ್ಸು 35 ವರ್ಷಗಳು. ನೇಮಕಾತಿ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

Written by - Puttaraj K Alur | Last Updated : Mar 26, 2024, 10:26 PM IST
  • ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ
  • ಒಟ್ಟು 5,360 ಕೃಷಿ ಸಹಾಯಕರ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು
ICAR Recruitment 2024: 5,360 ಕೃಷಿ ಸಹಾಯಕರ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ title=
ICAR Recruitment 2024

ICAR Recruitment 2024: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ICAR ಕೃಷಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ಕೃಷಿ ಸಹಾಯಕರ ನೇಮಕಾತಿ-2024ರ ಅನುಸಾರ ಒಟ್ಟು 5,360 ಕೃಷಿ ಸಹಾಯಕರ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಹುದ್ದೆಯ ವಿವಿರ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಕೃಷಿ ಸಹಾಯಕರ 5,360 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಪ್ರಿಲ್-ಮೇ 2024ರ ಅವಧಿಯಲ್ಲಿ ಪ್ರಾರಂಭವಾಗಲಿದ್ದು, ಅಧಿಕೃತ ವೆಬ್‌ಸೈಟ್ https://icar.org.in ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. 

ಇದನ್ನೂ ಓದಿ: Daily GK Quiz: ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು?

ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷಗಳು, ಗರಿಷ್ಠ ವಯಸ್ಸು 35 ವರ್ಷಗಳು. ನೇಮಕಾತಿ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ: ಸಾಮಾನ್ಯ /OBC/EWS ಅಭ್ಯರ್ಥಿಗಳಿಗೆ 100 ರೂ. ಮತ್ತು  SC/ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಪಾವತಿ ವಿಧಾನ: ಅಭ್ಯರ್ಥಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಇ-ಚಲನ್, UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು

ಶೈಕ್ಷಣಿಕ ಅರ್ಹತೆಗಳು: ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಲ್ಲಿ 10ನೇ ತರಗತಿಯ ಹೈಸ್ಕೂಲ್ ವ್ಯಾಸಂಗ ಮಾಡಿರಬೆಕು. ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.  

ಆನ್‌ಲೈನ್‌ನಲ್ಲಿ ಅರ್ಜಿ ನಮೂನೆ ಭರ್ತಿ ಮಾಡುವ ಹಂತಗಳು

  • ಭಾರತೀಯ ಕೃಷಿ ನೇಮಕಾತಿ ಫಾರ್ಮ್ ಭರ್ತಿ ಮಾಡಲು ಮೊದಲು ನೀವು ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.  
  • ಅಧಿಸೂಚನೆ ಪಟ್ಟಿಯಲ್ಲಿರುವ Notificationಅನ್ನು ಕ್ಲಿಕ್ ಮಾಡುವ ಮೂಲಕ ನೀವು ಸಂಪೂರ್ಣ ಅಧಿಸೂಚನೆ ಓದಬೇಕು.
  • ಮೆನು ಬಾರ್‌ನಲ್ಲಿರುವ Recruitment ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಆನ್‌ಲೈನ್‌ನಲ್ಲಿ Apply ಬಟನ್ ಕ್ಲಿಕ್ ಮಾಡಿ.
  • ಹೆಸರು ನೋಂದಾಯಿಸಲು Registration ಬಟನ್ ಮೇಲೆ ಕ್ಲಿಕ್ ಮಾಡಿ.
  • ಲಾಗಿನ್ ಆದ ಬಳಿಕ ಸಂಪೂರ್ಣ ಫಾರ್ಮ್ ಭರ್ತಿ ಮಾಡಬೇಕು.
  • ಫೋಟೋ ಸಹಿಯನ್ನು ಅಪ್‌ಲೋಡ್ ಮಾಡುವ ಮೂಲಕ ಮತ್ತು ಭರ್ತಿ ಮಾಡಿದ ಫಾರ್ಮ್ Submit ಮಾಡಬೇಕು.

ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: Lok Sabha Election 2024: ಚುನಾವಣೆ ವೇಳೆ ಜಪ್ತಿ ಮಾಡಿದ ಮದ್ಯ, ಹಣ ಎಲ್ಲಿಗೆ ಹೋಗುತ್ತದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News