Team India Players: ಟಿ 20 ವಿಶ್ವಕಪ್ 2024ರ ವಿಜೇತ ಟೀಮ್ ಇಂಡಿಯಾ ಗುರುವಾರ ಬೆಳಿಗ್ಗೆ ಭಾರತವನ್ನು ತಲುಪುವ ಸಾಧ್ಯತೆಯಿದೆ ಎಂದು ವರಿದಿಯಾಗಿದೆ. ವಾಸ್ತವವಾಗಿ, ವಿಶ್ವಕಪ್ ನಂತರ ಭಾರತ ತಂಡ ಕಳೆದ ಸೋಮವಾರ ಮನೆಗೆ ಮರಳಬೇಕಿತ್ತು. ಆದರೆ ಭಾರೀ ಬಿರುಗಾಳಿಯಿಂದಾಗಿ ಸಂಚಾರ ಸ್ಥಗಿತಗೊಂಡ ಕಾರಣ ರೋಹಿತ್ ಪಡೆ ಭಾರತಕ್ಕೆ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿಯಬೇಕಾಯಿತು.
Rishab Pant: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಭಾವುಕರಾಗಿದ್ದಾರೆ. ಎಲ್ಲವೂ ದೇವರ ಬರಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್ ಪಯಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 16 ತಿಂಗಳ ಹಿಂದೆ ರಿಷಬ್ ಪಂತ್ ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು ಸಾವಿನ ಹಂಚಿನಿಂದ ತಪ್ಪಿಸಿಕೊಂಡು ಬಂದು ಮರಳಿ ಟಿಂ ಇಂಡಿಯಾ ತಂಡ ಸೇರಿದ್ದರು.
Rohit Sharma: ಟಿ20 ವಿಶ್ವಕಪ್ 2024ರ ಗೆಲುವಿನ ನಂತರ ಭಾರತ ತಂಡದ ಕ್ಯಾಪ್ಟನ್ ಮಣ್ಣು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರೋಹಿತ್ ಶರ್ಮಾ ಈ ನಡುವಳಿಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Sanjay Majrekar: ಟಿ20 ವಿಶ್ವಕಪ್ 2024ರ ಫೈನಲ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ಕೊಹ್ಲಿ ಈ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 2024 ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಅನುಮಾನ ಇತ್ತು, ಈ ಕುರಿತು ಅಂದಾಜು ಮಾಡಿದ್ದ ಆಸಿಸ್ ಮಾಧ್ಯಮಗಳು ಆಸಿಸ್ ತಂಡ ಸೋಲುತ್ತಿದ್ದಂತೆ ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಾರೆ.
Narendra Modi: ಶನಿವಾರ ರಾತ್ರಿ ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ ಅವರ ಅತ್ಯುತ್ತಮ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಟಿ 20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಆಟವನ್ನು ಶ್ಲಾಘಿಸಿದ್ದಾರೆ.
MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ ಭಾರತ ಏಳು ರನ್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
T20 World Cup 2024:ದಕ್ಷಿಣ ಆಫ್ರಿಕಾ T20 ವಿಶ್ವಕಪ್ 2024 ಫೈನಲ್ಗೆ ಎಂಟ್ರಿ ಕೊಟ್ಟಿದೆ. ಅಫ್ಘಾನಿಸ್ತಾನ ವಿರುದ್ಧದ ಏಕಪಕ್ಷೀಯ ಸೆಮಿಫೈನಲ್ ಪಂದ್ಯದಲ್ಲಿಸೌತ್ ಆಫ್ರಿಕಾ ತಂಡ ಒಂಬತ್ತು ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ದಕ್ಷಿಣ ಆಫ್ರಿಕಾ ಫೈನಲ್ ತಲುಪಿದೆ.
India vs England: ಗುರುವಾರ (ಜೂನ್ 27) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 2024 ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
IND vs ENG: ಟಿ20 ವಿಶ್ವಕಪ್ ಅಂತಿಮ ಹಂತ ತಲುಪಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಕಣಕ್ಕಿಳಿಯಲಿವೆ, ಎರಡನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.
AFG vs BAN: ಟಿ20 ವಿಸ್ವಕಪ್ 2024ರ ಸೂಪರ್-8 ಪಂದ್ಯ ಮಂಗಳವಾರ, ಜೂನ್ 25ರಂದು ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಮಧ್ಯೆ ನಡೆಯಿತು. ಬಾಂಗ್ಲಾ ತಂಡವನ್ನು ಮಣಿಸುವ ಮೂಲಕ ಅಫ್ಘಾನಿಸ್ತಾನ ತಂಡ ಇತಿಹಾಸ ಸೃಷ್ಟಿಸಿತು.
AUS vs AFG: ಆಸ್ಟ್ರೇಲಿಯಾದ ವೇಗಿ ಬೌಲರ್ ಪ್ಯಾಟ್ ಕಮ್ಮಿನ್ಸ್ ಟಿ20 ವಿಶ್ವಕಪ್ 2024ರಲ್ಲಿ ಮತ್ತೊಂದು ಸಂಚಲನ ಮೂಡಿಸಿದ್ದಾರೆ. ಸೇಂಟ್ ವಿನ್ಸೆಂಟ್ಸ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ . ಬ್ಯಾಟಿಂಗ್ನಲ್ಲಷ್ಟೇ ಅಲ್ಲದೆ ಹಾರ್ದಿಕ್ ಬೌಲಿಂಗ್ನಲ್ಲೂ ಉತ್ತಮ ಆಟವಾಡಿದ್ದಾರೆ. ಅವರ ಉತ್ತಮ ಪ್ರದರ್ಶನದಿಂದ ನಾವು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್ ಶರ್ಮ ಹಾರ್ದಿಕ್ಗೆ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.
Kohli: ಶನಿವಾರ, ಜೂನ್ 22ರಂದು ಭಾರತ vs ಬಾಂಗ್ಲಾದೇಶದ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಿತು. ಭಾರತ ತಂಡ ಎದುರಳಿ ತಂಡದ ಎದುರು ಭರ್ಜರಿ ಆಟವಾಡಿ ಸೆಮಿಫೈನಲ್ ಕನಸ್ಸಿಗೆ ಜೀವ ತುಂಬಿತು. ಮತ್ತೊಂದೆಡೆ ಕಿಂಗ್ ಕೊಹ್ಲಿ ಈ ಪಂದ್ಯದ ಮೂಲಕ ಹೊಸ ದಾಖಲೆ ಬರೆದರು.
T20 World Cup 2024: ಟಿ20 ವಿಶ್ವಕಪ್ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್ 22, ಶನಿವಾರ ಆಂಟಿಗುವಾದ ನಾರ್ತ್ ಸೌಂಡ್ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
T20 World Cup 2024: ಜೂನ್ 20, ಗುರುವಾರ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಯ ಸೂಪರ್ 8 ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆಯಲಿದೆ.
T20 Worldcup 2024 Super 8: ಟಿ20 ವಿಶ್ವಕಪ್ 2024ರ ಸೂಪರ್ 8ರ(T20 World Cup 2024 Super 8) ಮೊದಲ ಪಂದ್ಯ ಬುಧವಾರ, ಜೂನ್ 19 ರಂದು ನಡೆಯಿತು. ವೆಸ್ಟ್ ಇಂಡೀಸ್ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ(South Africa) ತಂಡದ ವಿರುದ್ಧ ಯುಎಸ್ಎ(USA) ಮಂಡಿಯೂರಿತು.
ಟಿ20 ವಿಶ್ವಕಪ್ನ ದ್ವಿತಿಯ ಸುತ್ತಿನ ಪಂದ್ಯಗಳು ಬುಧವಾರ, ಜೂನ್ 19 ರಂದು ಪ್ರಾರಂಭವಾಗಲಿದೆ. ಗುರುವಾರ ತನ್ನ ಮೊದಲ ಪಂದ್ಯವನ್ನು ಭಾರತ ತಂಡ ಅಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದ್ದು, ಈ ಪಂದ್ಯ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡಿಯಲಿದೆ.
ಇಲ್ಲಿನ ಲಾಡರ್ಹಿಲ್ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆಯಬೇಕಿದ್ದ ಟಿ ೨೦ ವಿಶ್ವಕಪ್ ಟೂರ್ನಿಯ ಭಾರತ-ಕೆನಡಾ ಪಂದ್ಯವು ಮಳೆಯಿಂದಾಗಿ ಟಾಸ್ ಮಾಡದೆ ರದ್ದುಗೊಳಿಸಲಾಯಿತು.ಕೆನಡಾ ತಂಡವು ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದೆ.ಇನ್ನೊಂದೆಡೆಗೆ ಭಾರತ ತಂಡವು ಸೂಪರ್-8 ಗೆ ಪ್ರವೇಶಿಸಿದೆ.
United States vs India: ಅಮೇರಿಕಾ ತಂಡವು ನೀಡಿದ 111 ರನ್ ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭದಲ್ಲಿಯೇ ಯುಎಸ್ ಬೌಲರ್ ಗಳು ಶಾಕ್ ನೀಡಿದರು.ಅದರಲ್ಲೂ ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡವು ಆರಂಭಿಕ ಆಘಾತವನ್ನು ಎದುರಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.