3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

3 month old fetus found on the road : ಗುಜರಾತ್‌ನ ಸೂರತ್ ನಗರದಲ್ಲಿ ಯುವ ಜೋಡಿಯೊಂದು ರಸ್ತೆಬದಿಯಲ್ಲಿ ಭ್ರೂಣ ಎಸೆದು ಪರಾರಿಯಾದ ಹೃದಯವಿದ್ರಾವಕ ಘಟನೆ ಜರುಗಿದೆ. 3 ತಿಂಗಳ ಭ್ರೂಣವನ್ನು ನಿರ್ದಾಕ್ಷಿಣ್ಯವಾಗಿ ರಸ್ತೆಯಲ್ಲಿ ಬಿಸಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Written by - Chetana Devarmani | Last Updated : Feb 11, 2023, 08:20 AM IST
  • 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿ
  • ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ
  • ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ.!   title=
Fetus thrown on the road

Fetus thrown on the road : ಗುಜರಾತ್‌ನ ಸೂರತ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದ ಗೊಡತಾರಾ ಪ್ರದೇಶದಲ್ಲಿ ಯುವ ಜೋಡಿಯೊಂದು ರಸ್ತೆಬದಿಯಲ್ಲಿ ಭ್ರೂಣ ಎಸೆದು ಪರಾರಿಯಾದ ಹೃದಯವಿದ್ರಾವಕ ಘಟನೆ ಜರುಗಿದೆ. 3 ತಿಂಗಳ ಭ್ರೂಣವನ್ನು ನಿರ್ದಾಕ್ಷಿಣ್ಯವಾಗಿ ರಸ್ತೆಯಲ್ಲಿ ಬಿಸಾಡಿ ಹೋಗಿರುವ ದೃಶ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಭ್ರೂಣವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆಯ ಕುರಿತು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗೋದಾರಾ ಪ್ರದೇಶದ ಲಕ್ಷ್ಮೀನಾರಾಯಣ ಸೊಸೈಟಿಯ ಗೇಟ್ ಬಳಿ ಭ್ರೂಣ ಬಿದ್ದಿರುವ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಭ್ರೂಣವನ್ನು ವಶಪಡಿಸಿಕೊಂಡು ಸಮೀಪದ ಸಮೀರ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧಿಸಲು ಸುಪ್ರೀಂ ನಕಾರ

ಸೊಸೈಟಿಯ ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಯುವಕ - ಯುವತಿ ಕತ್ತಲಲ್ಲಿ ಭ್ರೂಣ ಎಸೆದು ಪರಾರಿಯಾಗಿರುವುದು ಕಂಡು ಬಂದಿದೆ. ಯುವಕ ಕೈಯಲ್ಲಿ ಫೈಲ್ ಹಿಡಿದು ನಿಂತಿದ್ದರೆ, ಯುವತಿ ಭ್ರೂಣವನ್ನು ರಸ್ತೆಬದಿ ಕತ್ತಲಲ್ಲಿ ಎಸೆದಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರ ಮುಖಗಳು ಸ್ಪಷ್ಟವಾಗಿ ಗೋಚರಿಸದಿದ್ದರೂ, ಇಬ್ಬರೂ ಒಂದೇ ಪ್ರದೇಶದ ನಿವಾಸಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರ ಆಧಾರದ ಮೇಲೆ ಅವರನ್ನು ಗುರುತಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ಕಳೆದ ವರ್ಷ ಮಧ್ಯಪ್ರದೇಶದಲ್ಲಿ ನಡೆದಿತ್ತು ಇಂತಹದ್ದೇ ಘಟನೆ ; 

ಪಿಟಿಐ ವರದಿ ಪ್ರಕಾರ, ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ 40 ವರ್ಷದ ಮಹಿಳೆಯೊಬ್ಬರು ತನ್ನ 4 ತಿಂಗಳ ಭ್ರೂಣವನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆಕೆಯನ್ನು ಗುರುತಿಸಿ ಬಂಧಿಸಲಾಯಿತು. ಮಗುವನ್ನು ಸಾಕಲು ತನ್ನ ಬಳಿ ಹಣವಿಲ್ಲ, ಮಗು ಬೇಡವೆಂದು ಭ್ರೂಣವನ್ನು ಬಿಟ್ಟು ಹೋಗಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದರು. 

ಇದನ್ನೂ ಓದಿ : Monkey Video : ಮಂಗನಿಗೆ ಮಾಲೀಕನ ಶಿಕ್ಷೆ! ಶರವೇಗದಲ್ಲಿ ರಾಶಿ ಪಾತ್ರೆ ತೊಳೆದ ಬಡಪಾಯಿ ಕೋತಿ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News