ಭೋವಿ ಅಭಿವೃದ್ಧಿ ನಿಗಮದಲ್ಲಿ‌ 150 ಕೋಟಿ ಗುಳುಂ : ಎಸಿಬಿಯಿಂದ ಎಂಡಿ ಬಂಧನ

ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿಯನ್ನು ಬಂಧಿಸಿದ್ದಾರೆ. 

Written by - VISHWANATH HARIHARA | Last Updated : Jun 15, 2022, 08:24 PM IST
  • ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿನ ವಂಚನೆ ಪ್ರಕರಣ
  • ಎಸಿಬಿ ಅಧಿಕಾರಿಗಳು ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ ಬಂಧನ
  • ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ವಂಚಿಸಿದ್ದ ಆರೋಪ
ಭೋವಿ ಅಭಿವೃದ್ಧಿ ನಿಗಮದಲ್ಲಿ‌ 150 ಕೋಟಿ ಗುಳುಂ : ಎಸಿಬಿಯಿಂದ ಎಂಡಿ ಬಂಧನ title=

ಬೆಂಗಳೂರು : ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿಯನ್ನು ಬಂಧಿಸಿದ್ದಾರೆ. 

ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ವಂಚಿಸಿದ್ದ ಆರೋಪ ಲೀಲಾವತಿ ವಿರುದ್ಧ ಕೇಳಿ ಬಂದಿತ್ತು.ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ವಂಚಿಸಿದ್ದ ಆರೋಪ ನಿಗಮದ ವಿರುದ್ಧ ಸಹ ಹರಿದಾಡಿತ್ತು. ಈ ಹಿನ್ನೆಲೆ ನಿಗಮದ ಎಂ.ಡಿ ಲೀಲಾವತಿ, ಜನರಲ್ ಮ್ಯಾನೇಜರ್ ನಾಗರಾಜಪ್ಪ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ್ದರು.

ಇದನ್ನೂ ಓದಿ : Mandya : ಸಕ್ಕರೆನಾಡು ಮಂಡ್ಯದಲ್ಲಿ ಮಹಿಳೆಯ ಕತ್ತು ಕೊಯ್ದು ಬರ್ಬರ ಹತ್ಯೆ!

ತನಿಖೆಗೆ ಅಗತ್ಯವಿರುವ ದಾಖಲೆಗಳನ್ನ ಸಲ್ಲಿಸಲು ಇಬ್ಬರಿಗೂ ಸೂಚಿಸಿದ್ದರು. ಆದರೆ ತನಿಖೆಗೆ ಸಹಕರಿಸದ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸದ  ಹಿನ್ನೆಲೆ ಲೀಲಾವತಿಯನ್ನ ಬಂಧಿಸಲಾಗಿದೆ. ಸದ್ಯ  ಲೀಲಾವತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News