ನಡುರಸ್ತೆಯಲ್ಲಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿ : ಮಚ್ಚು, ರಾಡ್‌ ಕಂಡು ಬೆಚ್ಚಿ ಬಿದ್ದ ಜನ

ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದ್ದು, ನಡುರಸ್ತೆಯಲ್ಲಿಯೇ ಮಚ್ಚು, ರಾಡ್‌ ಹಿಡಿದು ಹೊಡೆದಾಡಿಕೊಂಡ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ.

Written by - Krishna N K | Last Updated : Sep 4, 2022, 03:28 PM IST
  • ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
  • ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಘಟನೆ
  • ಮಚ್ಚು, ರಾಡ್‌ ಹಿಡಿದು ಹೊಡೆದಾಡಿಕೊಂಡ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ
ನಡುರಸ್ತೆಯಲ್ಲಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿ : ಮಚ್ಚು, ರಾಡ್‌ ಕಂಡು ಬೆಚ್ಚಿ ಬಿದ್ದ ಜನ title=

ಕೋಲಾರ: ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದ್ದು, ನಡುರಸ್ತೆಯಲ್ಲಿಯೇ ಮಚ್ಚು, ರಾಡ್‌ ಹಿಡಿದು ಹೊಡೆದಾಡಿಕೊಂಡ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ.

ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ವೇಣು ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಮೀಸಗಾನಹಳ್ಳಿ ಗ್ರಾಮದ ಕೃಷ್ಣಪ್ಪ ಹಾಗು ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ಎದುರಲೇ ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. 

ಇದನ್ನೂ ಓದಿ: Bengaluru: ಗಂಡನ ಕಥೆ ಮುಗಿಸಿ ನಾಟಕವಾಡುತ್ತಿದ್ದ ಚಾಲಕಿ ಹೆಂಡತಿಯ ಬಂಧನ!

ಗ್ರಾಮದಲ್ಲಿ ಗಂಗರಾಜ್ ಹಾಗು ಕೃಷ್ಣಪ್ಪ ಎನ್ನುವರ ಮಧ್ಯೆ ರಸ್ತೆ ಜಾಗದ ವಿಚಾರಕ್ಕೆ ನೆನ್ನೆ ಗಲಾಟೆ ನಡೆದಿತ್ತು. ಈ ವೇಳೆ ಗಂಗರಾಜ್‌ಗೆ ಕಂಡಕ್ಟರ್ ವೇಣು ಬೆಂಬಲಿಸಿದ್ದರು ಎನ್ನಲಾಗಿದೆ. ಇದರಿಂದ ಕೆರಳಿದ ಕೃಷ್ಣಪ್ಪ ಹಾಗೂ ಆತನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಗಲಾಟೆಯಲ್ಲಿ ಕೃಷ್ಣಪ್ಪ ತಲೆಗೆ ಗಾಯಗಳಾಗಿವೆ. ಲಾಠೀ ಚಾರ್ಜ್ ನಡೆಸಿ ಎರಡೂ ಕಡೆಯವರನ್ನ ಪೊಲೀಸರು ಚದುರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ಕು ಜನರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News