ಜುಲೈ 21ರಿಂದ ಅಮರನಾಥ ಯಾತ್ರೆ ಆರಂಭ ಸಾಧ್ಯತೆ, ಆದರೆ...

ಈ ಬಾರಿ ಒಂದು ದಿನದಲ್ಲಿ 500ಕ್ಕೂ ಹೆಚ್ಚು ಭಕ್ತರಿಗೆ ಅಮರನಾಥ ಯಾತ್ರೆಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.

Last Updated : Jul 9, 2020, 03:04 PM IST
ಜುಲೈ 21ರಿಂದ ಅಮರನಾಥ ಯಾತ್ರೆ ಆರಂಭ ಸಾಧ್ಯತೆ, ಆದರೆ... title=

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿರುವ ಕರೋನಾವೈರಸ್ ಕಾರಣದಿಂದಾಗಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ, ಆದರೆ ಅಮರನಾಥ ಯಾತ್ರೆಯನ್ನು ಅನುಮೋದಿಸಬಹುದು ಎಂದು ನಿರೀಕ್ಷಿಸಲಾಗಿದೆ. ಬಾಬಾ ಅಮರನಾಥನ ದರ್ಶನಕ್ಕೆ ಸರ್ಕಾರವು ಅಲ್ಪ ಸಂಖ್ಯೆಯ ಭಕ್ತರಿಗೆ ಅನುಮೋದಿಸಬಹುದು ಎಂಬ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಅಮರನಾಥ ಯಾತ್ರೆ ಕುರಿತು ಅಂತಿಮ ತೀರ್ಮಾನವನ್ನು ಮುಂದಿನ ವಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆ ದೇವಾಲಯ ಮತ್ತು ವೈಷ್ಣೋದೇವಿ  (ಮಾತಾ ವೈಷ್ಣೋ ದೇವಿ) ದರ್ಶನಕ್ಕೆ ಭಕ್ತರಿಗೆ ಅನುಮತಿ ನೀಡಲು ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚಿಸಲಾಗಿದೆ.

ಈ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಕಿಶನ್ ರೆಡ್ಡಿ, ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮತ್ತು ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದವರು ಭಾಗವಹಿಸಿದ್ದರು. ಜುಲೈ 21 ರಿಂದ ಅಮರನಾಥ ಯಾತ್ರೆ ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಅಮರನಾಥ ಯಾತ್ರೆ ಪ್ರಯಾಣದ ಅಂತಿಮ ದಿನಾಂಕದ ಬಗ್ಗೆ ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳಬಹುದು.

ಕೋವಿಡ್ -19 ರ ಸನ್ನಿವೇಶದಿಂದಾಗಿ ಈ ಬಾರಿ ಅಮರನಾಥ ಯಾತ್ರೆಯಲ್ಲಿ ಒಂದು ದಿನದಲ್ಲಿ 500ಕ್ಕೂ ಹೆಚ್ಚು ಭಕ್ತರಿಗೆ ಹೋಗಲು ಅವಕಾಶ ನೀಡದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಪಹಲ್ಗಮ್ ಮಾರ್ಗದಲ್ಲಿ ಹಿಮದಿಂದಾಗಿ ಈ ಮಾರ್ಗ ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ ಈ ವರ್ಷ ಬಾಲ್ಟಾಲ್ ಮಾರ್ಗದಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬಹುದು.

ಜುಲೈ 31 ರವರೆಗೆ ವೈಷ್ಣೋ ದೇವಿ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ನಿಷೇಧವಿದೆ. ವೈಷ್ಣೋದೇವಿ ದೇವಸ್ಥಾನವನ್ನು ಮೊದಲು ಸ್ಥಳೀಯ ಜನರಿಗೆ ತೆರೆಯಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು, ನಂತರ ಇತರ ರಾಜ್ಯಗಳ ಜನರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಆಡಳಿತದಿಂದ ಸಿದ್ದತೆ: 
ಅಮರನಾಥ ಯಾತ್ರೆ ಔಪಚಾರಿಕವಾಗಿ ಘೋಷಿಸಲ್ಪಟ್ಟಿಲ್ಲ, ಆದರೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅದರ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಪ್ರಯಾಣದ ಸಮಯದಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವ ಪ್ರಯಾಣಿಕರನ್ನು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ನೊಂದಿಗೆ ಬಸ್ ಮೂಲಕ ಕಳುಹಿಸಲು ಸಿದ್ಧತೆ ನಡೆಸಿದೆ.

ಜಮ್ಮುವಿನಿಂದ ಬಾಲ್ಟಾಲ್‌ಗೆ ಭಕ್ತರನ್ನು ಕರೆದೊಯ್ಯುವ ಕಾರ್ಯವು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿರುತ್ತದೆ. ಬಿಗಿ ಭದ್ರತೆಯಡಿಯಲ್ಲಿ ಪ್ರಯಾಣಿಕರ ಬಸ್ಸುಗಳನ್ನು ಜಮ್ಮುವಿನಿಂದ ಬಾಲ್ಟಾಲ್ಗೆ ಕಳುಹಿಸಲಾಗುವುದು. 
 

Trending News