ಶೀಘ್ರವೆ ನಿಮ್ಮ ಭಾಗ್ಯ ಬದಲಾಗಲಿದೆ ಎನ್ನುತ್ತವೆ ಈ ಸಂಕೇತಗಳು! ತಪ್ಪದೆ ಓದಿ

ನಮ್ಮ ಜೀವನದಲ್ಲಿ ಆಗಾಗ ವಿಭಿನ್ನ ರೀತಿಯ ಸಂಕೇತಗಳು ಗೋಚರಿಸುತ್ತವೆ. ಆದರೆ ನಾವು ಅವುಗಳತ್ತ ಹೆಚ್ಚಿನ ಗಮನ ಹರಿಸುವುದಿಲ್ಲ.

Last Updated : Sep 4, 2020, 07:09 PM IST
  • 1. ನಮ್ಮ ಜೀವನದಲ್ಲಿ ಆಗಾಗ ವಿಭಿನ್ನ ರೀತಿಯ ಸಂಕೇತಗಳು ಗೋಚರಿಸುತ್ತವೆ.
    2. ಕೆಲವು ಸಂಕೇತಗಳು ನಮ್ಮ ಜೀವನದಲ್ಲಿ ಶುಭ ಪರಿಣಾಮವನ್ನು ಬೀರುತ್ತವೆ
    3. ಕೆಲವು ದುರುದ್ದೇಶಪೂರಿತ ಪರಿಣಾಮಗಳನ್ನು ಬೀರುತ್ತವೆ.
ಶೀಘ್ರವೆ ನಿಮ್ಮ ಭಾಗ್ಯ ಬದಲಾಗಲಿದೆ ಎನ್ನುತ್ತವೆ ಈ ಸಂಕೇತಗಳು! ತಪ್ಪದೆ ಓದಿ title=

ನವದೆಹಲಿ: ನಮ್ಮ ಜೀವನದಲ್ಲಿ ಆಗಾಗ ವಿಭಿನ್ನ ರೀತಿಯ ಸಂಕೇತಗಳು ಗೋಚರಿಸುತ್ತವೆ. ಆದರೆ ನಾವು ಅವುಗಳತ್ತ ಹೆಚ್ಚಿನ ಗಮನ ಹರಿಸುವುದಿಲ್ಲ. ಕೆಲವು ಸಂಕೇತಗಳು ನಮ್ಮ ಜೀವನದಲ್ಲಿ ಶುಭ ಪರಿಣಾಮವನ್ನು ಬೀರುತ್ತವೆ ಮತ್ತು ಕೆಲವು ದುರುದ್ದೇಶಪೂರಿತ ಪರಿಣಾಮಗಳನ್ನು ಬೀರುತ್ತವೆ. ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತಿನ ಲಾಭಗಳನ್ನು ಸೂಚಿಸುವ ಕೆಲವು ಸಂಕೇತಗಳು ಸಹ ಇವೆ. ಅಂತಹ ಕೆಲವು ಸಂಕೇತಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಕೆಲಸವೊಂದರ ನಿಮಿತ್ತ ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗುತ್ತಿದ್ದು, ನಿಮ್ಮ ಮುಂದೆ ಆಕಸ್ಮಿಕವಾಗಿ ಹಾಲಿನಿಂದ ತುಂಬಿದ ಪಾತ್ರೆ ಕಂಡುಬಂದರೆ, ನೀವು ಮಾಡಲು ಹೊರಟಿರುವ ಕೆಲಸದಲ್ಲಿ ನಿಮಗೆ ಯಶಸ್ಸು ಲಭಿಸುತ್ತದೆ. ಅಷ್ಟೇ ಅಲ್ಲ ಅಂದಿನ ನಿಮ್ಮ ದಿನವೂ ಕೂಡ ಒಳ್ಳೆಯದಾಗಿಯೇ ಕಳೆಯಲಿದೆ.

2.ಇದೇ ರೀತಿ ಮನೆಯಿಂದ ಹೊರಗೆ ಹೋಗುವಾಗ ತುಂಬಿದ ಕೊಡ ಕಾಣಿಸಿದರೂ ಕೂಡ ಅದು ಶುಭ ಸಂಕೇತ. ಇದರಿಂದಾಲೂ ಕೂಡ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.

3. ಕೋತಿ ಮಾವಿನ ಹಣ್ಣು ಅಥವಾ ಕಾಯಿಯನ್ನು ತಿಂದು ಅದರ ಬೀಜವನ್ನು ಮನೆಯ ಮಹಡಿಯ ಮೇಲೆ ಎಸೆದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದಲ್ಲದೆ ಪಕ್ಷಿ ಗೆಜ್ಜೆಯಂತಹ ವಸ್ತುವನ್ನು ಮಹಡಿಯ ಮೇಲೆ ಎಸೆದರೆ ಅದೂ ಕೂಡ ಶುಭ ಸಂಕೇತ ಎನ್ನಲಾಗುತ್ತದೆ.

4.ಬೆಳಗ್ಗೆ ಮನೆಯಿಂದ ಹೊರಹೋಗುವಾಗ ದುಡ್ಡು ಲಭಿಸಿದರೆ ಅದೂ ಕೂಡ ಧನಲಾಭದ ಸಂಕೇತ ನೀಡುತ್ತದೆ. ಆದರೆ, ಒಂದು ವೇಳೆ ಸಂಜೆಯ ವೇಳೆ ಇದೇ ದುಡ್ಡು ಸಿಕ್ಕರೆ ಅದನ್ನು ದೇಗುಲದಲ್ಲಿ ದಾನ ಪೆಟ್ಟಿಗೆಗೆ ಹಾಕಿ.

5.ಒಂದು ವೇಳೆ ನಿಮ್ಮ ಮುಖ ಎಂದಿಗಿಂತ ಹೆಚ್ಚು ಹೊಳೆಯುತ್ತಿದ್ದರೆ ಅದೂ ಕೂಡ ಶುಭ ಸಂಕೇತ ಎಂದು ಹೇಳಲಾಗುತ್ತದೆ.

6.ಮನೆಯಿಂದ ಕೆಲಸಕ್ಕೆಂದು ಹೊರಹೋಗುವಾಗ ಯಾವುದೇ ಬಾಲಕ ಅಥವಾ ಬಾಲಕಿಯ ನಗುಮೊಗ ಕಂಡರೆ ಅದು ಶುಭ ಸಂಕೇತ ಎಂದು ಭಾವಿಸಲಾಗುತ್ತದೆ..

7. ಬೆಳಗ್ಗೆ ಹಸು ತನ್ನ ಕರುವಿಗೆ ಹಾಲುಣಿಸುತ್ತಿರುವುದನ್ನು ಕಂಡರೆ ಅಂದಿನ ದಿನ ನಿಮ್ಮ ಪಾಲಿಗೆ ಶುಭವಾಗಿದೆ ಎಂದೇ ಅರ್ಥ. ಧನ ವೃದ್ಧಿಯ ಯೋಗ ನಿಮ್ಮಗಾಗಿರುತ್ತದೆ ಎನ್ನಲಾಗುತ್ತದೆ.

Trending News