ಇಂದು ಕರ್ವಾ ಚೌತ್, ಇದರ ಬಗ್ಗೆ ನಿಮಗೆಷ್ಟು ಗೊತ್ತು?

Last Updated : Oct 27, 2018, 12:21 PM IST
ಇಂದು ಕರ್ವಾ ಚೌತ್, ಇದರ ಬಗ್ಗೆ ನಿಮಗೆಷ್ಟು ಗೊತ್ತು? title=

ಇಂದು ಕರ್ವ ಚೌತ್, ಈ ಹಬ್ಬವನ್ನು ಉತ್ತರ ಭಾರತದ ಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಒಂದು ದಿನ ಆಚರಿಸುವ ಈ ಹಬ್ಬದಲ್ಲಿ ವಿಶೇಷವಾಗಿ ಮಹಿಳೆಯರು ತನ್ನ ಗಂಡನು ದೀರ್ಘಕಾಲ ಬಾಳಲಿ ಎಂದು ಉಪವಾಸ ವೃತವನ್ನು ಆಚರಿಸುತ್ತಾರೆ. ಅವಿವಾಹಿತ ಮಹಿಳೆಯರು ಸಹಿತ ತಮಗೆ ಒಳ್ಳೆಯ ಗಂಡ ಸಿಗಲಿ ಎಂದು ಹರಕೆ ಹೊರುತ್ತಾರೆ.ಹೀಗೆ ಹಲವು ವೈವಿಧ್ಯತೆಗಳೊಂದಿಗೆ ಇಡೀ ಉತ್ತರ ಭಾರತದಾದ್ಯಂತ  ಪ್ರತಿವರ್ಷ ಹೆಚ್ಚಾಗಿ ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಆಚರಿಸಲ್ಪಡುತ್ತದೆ.

ಪ್ರತಿವರ್ಷ ಈ ಹಬ್ಬದ ದಿನ ಬೇರೆ ಬೇರೆ ದಿನಾಂಕದಂದು ಬರುತ್ತದೆ. ಹೆಚ್ಚಾಗಿ ಇದನ್ನು ಹಿಂದು ಪಂಚಾಂಗದ ಆಧಾರದ ಮೇಲೆ ಕರ್ವ ಚೌತ್ ದಿನವನ್ನು ನಿಗದಿ ಪಡಿಸಲಾಗುತ್ತದೆ. ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಪೂರ್ಣ ಚಂದ್ರ ಬಂದ ನಾಲ್ಕು ದಿನದ ನಂತರ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಕರ್ವ ಎಂದರೆ ಮಡಿಕೆ, ಚೌತ್ ಎಂದರೆ ನಾಲ್ಕನೆಯ ಎಂದರ್ಥ. ಕಾರ್ತಿಕ ಮಾಸದಲ್ಲಿ ಪಾಕ್ಷಿಕ ದಿನದ ನಾಲ್ಕನೇ ದಿನದಲ್ಲಿ ಈ ಹಬ್ಬ ಬರುವುದರಿಂದ ಇದಕ್ಕೆ ಕರ್ವಚೌತ್ ಎಂದು ಕರೆಯುತ್ತಾರೆ.ಈ ಹಬ್ಬದ ಇನ್ನೊಂದು ವೈಶಿಷ್ಟ್ಯವೆಂದರೆ ಗೋದಿ ಬೆಳೆಯುವ ಪ್ರದೇಶದಲ್ಲಿ ಮಡಿಕೆಯೊಂದರಲ್ಲಿ ಗೋದಿಯನ್ನು ಇಡುವುದಕ್ಕೆ ಕರ್ವ ಎಂದು ಕರೆಯುತ್ತಾರೆ.ಆ ಮೂಲಕ ಹೆಚ್ಚಿನ ಫಸಲು ಬರಲಿ ಎಂದು ಬೇಡಿಕೊಳ್ಳುತ್ತಾರೆ.

ಕರ್ವ ಚೌತ್ ಗೂ ಮೊದಲು ಮದುವೆಯಾದ ಹೆಣ್ಣು ಮಕ್ಕಳು ಮಡಿಕೆಯನ್ನು ಖರೀಧಿಸಿ ಅವುಗಳಿಗೆ ವಿವಿಧ  ಬಣ್ಣಗಳನ್ನು ಬಳಿಯುತ್ತಾರೆ. ಅಲ್ಲದೆ ಆ ಮಡಿಕೆಯೊಳಗೆ  ರಿಬ್ಬನ್ ಮತ್ತು  ಬಳೆಗಳನ್ನು, ಮನೆಯಲ್ಲಿ ತಯಾರಿಸಿದ ಸ್ವೀಟ್ ಪದಾರ್ಥ,ಮತ್ತು ಮೆಕ್ ಅಪ್ ವಸ್ತುಗಳನ್ನು  ಅದರಲ್ಲಿ ಇಡುತ್ತಾರೆ.ಪ್ರತಿ ವರ್ಷ ಕರ್ವ ಚೌತ್ ದಿನದಂದು ಈ ಮಡಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸುತ್ತಾರೆ.

Trending News