ಶಿರಡಿ: Shirdi Temple - ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಶ್ರೀ ಶಿರಡಿ ದೇವಸ್ಥಾನಕ್ಕೆ ದೇಶಾದ್ಯಂತದ ಭಕ್ತಾದಿಗಳ ದಂಡೆ ಹರಿದುಬರುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಡಿಸೆಂಬರ್ 31 ರ ಇಡೀ ರಾತ್ರಿ ದೇವಸ್ಥಾನವನ್ನು ತೆರೆದಿಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಭಕ್ತರಲ್ಲಿ ಬಾಬಾ ದರ್ಶನಕ್ಕೆ ಯಾವುದೇ ರೀತಿಯ ಅಡೆತಡೆಗಳು ಎದುರಾಗುವುದಿಲ್ಲ. ಈ ಅವಧಿಯಲ್ಲಿ ದೇವಸ್ಥಾನಕ್ಕೆ ಭಾರಿ ಭದ್ರತೆ ಕಲ್ಪಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಹೊಸ ವರ್ಷದಲ್ಲಿ ಆರಂಭದಲ್ಲಿ ಇಡೀ ರಾತ್ರಿ ಭಕ್ತರು ಸಾಯಿ ದರುಶನ ಪಡೆಯಬಹುದು
ಈ ಕುರಿತು ಹೇಳಿಕೆ ಹೊರಡಿಸಿರುವ ಶಿರಡಿ ಆಡಳಿತ, ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಿರುವ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 31ರಂದು ಇಡೀ ರಾತ್ರಿ ದೇವಸ್ಥಾನ ತೆರೆದುಕೊಂಡಿರಲಿದೆ ಎಂದಿದೆ. ಹೀಗಾಗಿ ಬಾಬಾ ದರುಶನಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಆದರೆ, 31 ಡಿಸೆಂಬರ್ ರಾತ್ರಿ 11.35 ರಿಂದ 11.55ರವರೆಗೆ ಸ್ವಚ್ಚತೆಯ ದೃಷ್ಠಿಯಿಂದ ದೇವಸ್ತಾನವನ್ನು ಮುಚ್ಚಲಾಗುವುದು ಎಂದು ಆಡಳಿತ ಸ್ಪಷ್ಟಪಡಿಸಿದೆ. ಆದರೆ, ಗುರುವಾರ ಡಿಸೆಂಬರ್ 31 ರ ಸಂಜೆಯ ಶ್ರೀ ಶೆಜಾರತಿ ಹಾಗೂ ಬೆಳಗಿನ ಕಕ್ಕಡಾರತಿ ನಡೆಸಲಾಗುವುದಿಲ್ಲ.
ಇದನ್ನು ಓದಿ- Tiruapathi : ಹೊಸವರ್ಷಕ್ಕೆ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದೀರಾ..?ಹಾಗಾದರೆ ಇದನ್ನು ನೀವು ಓದಲೇಬೇಕು..!
ಬಿಗಿ ಬಂದೋಬಸ್ತ್ ಇರಲಿದೆ
ಡಿಸೆಂಬರ್ 31 ರಂದು ಭಕ್ತರ ಭಾರಿ ಜನಸಂದಣಿಯ ದೃಷ್ಟಿಯಿಂದ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಗುಂಪನ್ನು ಗಮನದಲ್ಲಿಟ್ಟುಕೊಂಡು 8 ಅಧಿಕಾರಿಗಳು, 117 ಸೈನಿಕರು, 30 ಮಹಿಳಾ ಸೈನಿಕರು, ಮೀಸಲು ಪೊಲೀಸ್ ಸಿಬ್ಬಂದಿ ಮತ್ತು ಸಂಚಾರ ಪೊಲೀಸರನ್ನುನಿಯೋಜಿಸಲಾಗುವುದು ಎಂದು ಶಿರಡಿಯ ಹೆಚ್ಚುವರಿ ಸಿ.ಪಿ. ಮಾಹಿತಿ ನೀಡಿದ್ದಾರೆ. ಇದಲ್ಲದೆ ದೇವಾಲಯದ ಪ್ರವೇಶದ್ವಾರದಲ್ಲಿ 2 ಸ್ಥಳಗಳಲ್ಲಿ ದಿಗ್ಬಂಧನ, ಸಿಸಿಟಿವಿ, ಪಾರ್ಕಿಂಗ್ ಸೌಲಭ್ಯ ಮತ್ತು ಬಲವಾದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಈ ಸಮಯದಲ್ಲಿ ಕರೋನಾ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗುವುದು ಎಂದೂ ಕೂಡ ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ- Astro Predictions 2021: ನೌಕರಿ-ವ್ಯಾಪಾರಕ್ಕೆ ಹೇಗಿರಲಿದೆ 2021?
ದೇವಸ್ಥಾನಕ್ಕೆ ಹರಿದುಬಂದ ಅಪಾರ ಧನ ರಾಶಿ
ಡಿಸೆಂಬರ್ 15 ರಿಂದ 29 ಡಿಸೆಂಬರ್ ಈ ಅವಧಿಯಲ್ಲಿ ದೇವಸ್ಥಾನಕ್ಕೆ (Shirdi Temple) ಅಪಾರ ಧನರಾಶಿ ಹರಿದುಬಂದಿದೆ. ಈ ಅವಧಿಯಲ್ಲಿ 3 ಕೋಟಿಗೂ ಅಧಿಕ ರೂ. ಹಣ ಹರಿದುಬಂದಿದ್ದು, ಭಕ್ತಾದಿಗಳು 93 ಗ್ರಾಂ.ಚಿನ್ನ ಹಾಗೂ 3,808 ಗ್ರಾಂ.ಬೆಳ್ಳಿ ಶ್ರೀಚರಣಗಳಲ್ಲಿ ಅರ್ಪಿಸಿದ್ದಾರೆ.
ಇದನ್ನು ಓದಿ-Eclipse: 2021ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ : ಯಾವಾಗ ಗೋಚರಿಸಲಿದೆ ಮೊದಲ ಸೂರ್ಯಗ್ರಹಣ
1 ಲಕ್ಷ ಭಕ್ತರು ದರ್ಶನ ಪಡೆಯಬಹುದು
ಹೊಸ ವರ್ಷದಲ್ಲಿ ರಾತ್ರಿಯಿಡೀ ದೇವಾಲಯವನ್ನು ತೆರೆದಿಡುವ ಹಿನ್ನೆಲೆ ಸುಮಾರು 1 ಲಕ್ಷ ಭಕ್ತರು ಬಾಬಾಗೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕರೋನಾ ಅವಧಿಯ ನಂತರ ದೇವಸ್ಥಾನದ ಬಾಗಿಲುಗಳು ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಂಡ ಬಳಿಕ ದರುಶನ ಪಡೆಯುವ ಭಕ್ತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕರೋನಾ ಅವಧಿಯಲ್ಲಿ ದೇವಸ್ಥಾನದ ಕಪಾಟಗಳನ್ನು ಸುಮಾರು 7 ತಿಂಗಳುಗಳ ಕಾಲ ಮುಚ್ಚಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.