Astro Predictions 2021: ನೌಕರಿ-ವ್ಯಾಪಾರಕ್ಕೆ ಹೇಗಿರಲಿದೆ 2021?

Astro Predictions 2021: ನೌಕರಿ, ಉದ್ಯೋಗ ಮತ್ತು ವ್ಯಾಪಾರದ ವಿಷಯದಲ್ಲಿ 2020ರ ವರ್ಷ ಜನರಿಗೆ ಭಾರಿ ನಿರಾಶೆ ತಂದಿದೆ. 2021 ವರ್ಷ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ

Written by - Nitin Tabib | Last Updated : Dec 28, 2020, 11:49 AM IST
  • 2021 ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.
  • ಉದ್ಯೋಗ ಮತ್ತು ವ್ಯಾಪಾರದ ವಿಷಯದಲ್ಲಿ 2020ರ ವರ್ಷ ಜನರಿಗೆ ಭಾರಿ ನಿರಾಶೆ ತಂದಿದೆ.
  • ಹೊಸ ವರ್ಷದ ಹೊಸ ಉತ್ಸಾಹ, ಯಶಸ್ಸು ಮತ್ತು ಸಾಧನೆಗಳಿಗೆ ಜನ ಕಾಯುತ್ತಿದ್ದಾರೆ.
Astro Predictions 2021: ನೌಕರಿ-ವ್ಯಾಪಾರಕ್ಕೆ ಹೇಗಿರಲಿದೆ 2021? title=
Astro Predictions 2021 (File Photo)

Astro Predictions 2021: ನೌಕರಿ, ಉದ್ಯೋಗ ಮತ್ತು ವ್ಯಾಪಾರದ ವಿಷಯದಲ್ಲಿ 2020ರ ವರ್ಷ ಜನರಿಗೆ ಭಾರಿ ನಿರಾಶೆ ತಂದಿದೆ. 2021 ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷದ ಹೊಸ ಉತ್ಸಾಹ, ಯಶಸ್ಸು ಮತ್ತು ಸಾಧನೆಗಳಿಗೆ ಜನ ಕಾಯುತ್ತಿದ್ದಾರೆ. ಜ್ಯೋತಿಷಿಗಳ ಪ್ರಕಾರ 2021 ವರ್ಷ ಕರ್ಕ, ಸಿಂಹ, ವೃಶ್ಚಿಕ ಧನು, ಮಕರ ಹಾಗೂ ಕುಂಭ ರಾಶಿಯಜನರಿಗೆ ಭಾರಿ ಲಾಭ ತರಲಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ವಿವಿಧ ಜಾತಕದ ವ್ಯಕ್ತಿಗಳಿಗೆ ಹೊಸ ವರ್ಷ ಹೇಗಿರಲಿದೆ ಎಂಬುದನ್ನೊಮ್ಮೆ ತಿಳಿಯೋಣ.

ಮೇಷ: ನೌಕರಿಯ ವಿಷಯದಲ್ಲಿ ಈ ಹೊಸವರ್ಷ ((New Year 2021) ನಿಮ್ಮ ಪಾಲಿಗೆ ಉತ್ತಮವಾಗಿರಲಿದೆ. ನೌಕರಿಯಲ್ಲಿ ನಿರೀಕ್ಷಿತ ಲಾಭ ಹಾಗೂ ಪರಿವರ್ತನೆಗಲಾಗಳಿವೆ. ವ್ಯಾಪಾರಿಗಳಿಗೆ ಮೇ ತಿಂಗಳಿನಿಂದ ಕಾಲ ಉತ್ತಮವಾಗಿರಲಿದೆ. ಆದರೆ ಜನವರಿ-ಏಪ್ರಿಲ್ ವರೆಗೆ ಸ್ವಲ್ಪ ಜಾಗ್ರತೆ ವಹಿಸುವ ಆವಶ್ಯಕತೆ ಇದೆ.

ವೃಷಭ: ನೌಕರಿಯಲ್ಲಿ ಕಠಿಣ ಪರಿಶ್ರಮದಿಂದ ಲಾಭ ಸಿಗಲಿದೆ. ಪ್ರಮೋಶನ್ ಹಾಗೂ ಇನ್ಕ್ರೀಮೆಂಟ್ ಗಳು ಕೂಡ ನಿಮ್ಮ ಪರಿಶ್ರಮವನ್ನು ಅವಲಂಭಿಸಿವೆ. ಜವಾಬ್ದಾರಿ ಹೆಚ್ಚಾಗಲಿದೆ. ವಿದೇಶದಿಂದ ಲಾಭದ ಸಾಧ್ಯತೆ. ವ್ಯಾಪಾರ ವಿಸ್ತರಣೆ ಸಾಧ್ಯತೆ ಗೋಚರಿಸುತ್ತಿದೆ. ಲಾಭ ಮುಂದುವರೆಯಲಿದೆ. ನಿವೇಶನಗಳ ವಿಸ್ತಾರ ಹಾಗೂ ಆದಾಯದ ಮೂಲಗಳಲ್ಲಿ ವೃದ್ಧಿ.

ಮಿಥುನ: ನೌಕರಿಯಲ್ಲಿ ವ್ಯರ್ಥ ಒತ್ತಡ ಇರಲಿದೆ. ಆದರೆ, ನೌಕರಿ ಬದಲಾವಣೆ ಬೇಡ. ಉನ್ನತ ಅಧಿಕಾರಿಗಳ ಸಂಪರ್ಕದಲ್ಲಿರಿ. ಹೊಸ ವ್ಯಾಪಾರದ ಆರಂಭದ ಕುರಿತು ಆಲೋಚನೆ ಸದ್ಯಕ್ಕೆ ಬೇಡ. ಶಾರ್ಟ್ ಕಟ್ ನಿಂದ ಹಣ ಗಳಿಸುವುದರಿಂದ ಕೂಡ ದೂರ ಇರಿ.

ಇದನ್ನು ಓದಿ-Eclipse: 2021ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ : ಯಾವಾಗ ಗೋಚರಿಸಲಿದೆ ಮೊದಲ ಸೂರ್ಯಗ್ರಹಣ

ಕರ್ಕ: ವರ್ಷದ ಆರಂಭದಿಂದಲೇ ಕರಿಯರ್ ಬದಲಾವಣೆಯ ಸಂಕೇತ. ಈ ಬದಲಾವಣೆ ಸ್ನೇಹಿತರೊಬ್ಬರ ಸಹಯೋಗದಿಂದ ಲಾಭಕಾರಿ. ಹೊಸ ವ್ಯವಹಾರ ಆರಂಭದ ಕುರಿತು ಆಲೋಚಿಸಬಹುದು. ಆದರೆ, ವ್ಯಾಪಾರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮುಂಚೆ ಶುಭಚಿಂತಕರ ಸಲಹೆ ಪಡೆಯಲು ಮರೆಯದಿರಿ.

ಸಿಂಹ: ನೌಕರಿ ಹಾಗೂ ಉದ್ಯೋಗದ ದೃಷ್ಠಿಯಿಂದ ಈ ವರ್ಷದಲ್ಲಿ ನೀವು ಬಹುದೊಡ್ಡ ನಿರ್ಣಯ ಕೈಗೊಳ್ಳುವಿರಿ. ನೌಕರಿಗಾಗಿ ದೂರ ಅಥವಾ ವಿದೇಶ ಪ್ರಯಾಣ ಸಂಭವ. ಹಳೆ ವ್ಯಾಪಾರ ಹೊರತುಪಡಿಸಿ ಹೊಸ ವ್ಯಾಪಾರ ಆರಂಭಿಸುವಿರಿ. ಆದಾಯದ ಮೂಲಗಳು ಹೆಚ್ಚಾಗಲಿವೆ.

ಕನ್ಯಾ: ನೌಕರಿಯ ಸ್ಥಿತಿ ಈ ವರ್ಷ ಸಮಾಧಾನಕಾರಕವಾಗಿರಲಿದೆ. ಉದ್ಯೋಗ ಬದಲಾವಣೆಯ ಚಿಂತನೆ ಬೇಡ. ವ್ಯಾಪಾರದಲ್ಲಿ ಹಾನಿ ಕೈಮೆಯಾಗಲಿದೆ. ಜೊತೆಗೆ ಸಾಲದಿಂದ ಮುಕ್ತಿ ಸಿಗಲಿದೆ. ಖರ್ಚು ಕಮ್ಮಿಯಾಗಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.

ಇದನ್ನು ಓದಿ- New Year 2021 Auspicious Yog:ವರ್ಷಾರಂಭದ ಮೊದಲ ದಿನವೇ ಮೂರು ಮಹಾ ಸಂಯೋಗಗಳ ನಿರ್ಮಾಣ

ತುಲಾ : ಭಾರಿ ಪರಿಶ್ರಮದ ಮೂಲಕ ಮಾತ್ರ ನೌಕರಿಯಲ್ಲಿ ಯಶಸ್ಸು ಸಿಗಲಿದೆ. ಕರಿಯರ್ ವಿಷಯದಲ್ಲಿ ಯಾವುದೇ ರೀತಿಯ ತರಾತುರಿ ಅಧವಾ ನಿರ್ಲಕ್ಷ ಬೇಡ. ಹಲವು ಬಾರಿ ಯೋಚಿಸಿ ವ್ಯಾಪಾರ ಆರಂಭಿಸಿ. ಯಾವುದೇ ಕಾರ್ಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗೆ ಇದು ಸರಿಯಾದ ಸಮಯವಲ್ಲ.

ವೃಶ್ಚಿಕ: ನೌಕೈಯಲ್ಲಿ ದೊಡ್ಡ ಬದಲಾವಣೆಯ ಯೋಗ ಗೋಚರಿಸುತ್ತಿದೆ. ಉತ್ತಮ ಅವಕಾಶಗಳಿಗೆ ಕಮ್ಮಿ ಇರುವುದಿಲ್ಲ ಸ್ಥಾನ ಬದಲಾವಣೆಯ ಜೊತೆಗೆ ಹೊಸ ವ್ಯಾಪಾರ ಆರಂಭದ ಸಂಕೆತಗಳಿವೆ. ವ್ಯಾಪಾರದ ಸ್ತಿತಿ ಕೂಡ ಉತ್ತಮವಾಗಿರಲಿದೆ. ಸಂಕಷ್ಟಗಳು ದೂರವಾಗಲಿವೆ.

ಧನು: ನೌಕರಿ ಹಾಗೂ ಸ್ಥಾನ ಪರಿವರ್ತನೆಗೆ ಸಿದ್ಧರಾಗಿ. ವಿದೇಶದಲ್ಲಿ ನೌಕರಿ ಅಥವಾ ಹೊಸ ಆರಂಭದ ಯೋಗಗಳಿವೆ. ವ್ಯಾಪಾರದಲ್ಲಿ ಸ್ಥಿತಿ ಸ್ಥಿರವಾಗಿರಲಿದೆ. ಹಣಕಾಸಿನ ಸ್ಥಿತಿ ಸ್ಥಿರವಾಗಿರಲಿದೆ. ನಿವೇಶನದ ವಿಷಯದಲ್ಲಿಯೂ ಕೂಡ ಲಾಭ.

ಇದನ್ನು ಓದಿ- Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ

ಮಕರ: ವರ್ಷಾರಂಭದಲ್ಲಿ ನೌಕರಿಯಲ್ಲಿ ಭಾರಿ ಬದಲಾವಣೆಯ ಸಂಕೇತ. ನೌಕರಿಯ ವಿಷಯದಲ್ಲಿ ಇಡೀ ವರ್ಷ ಉತ್ತಮವಾಗಿರಲಿದೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ಹುದ್ದೆ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರದ ವಿಚಾರದಲ್ಲಿ ಕ್ರಮೇಣ ಪ್ರಗತಿಯ ಲಕ್ಷಣಗಳು ಗೋಚರಿಸುತ್ತಿವೆ.

ಕುಂಭ: ಈ ವರಿಶದಲ್ಲಿ ಕರಿಯರ್ ಗೆ ಸಂಬಂಧಿಸಿದಂತೆ ಪ್ಲಾನಿಂಗ್ ಅವಶ್ಯಕತೆ ಇದೆ. ನೌಕರಿಯ ವಿಷಯದಲ್ಲಿ ಸ್ಥಿರತೆ ಮುಂದುವರೆಯಲಿದೆ. ಧನ ವೃದ್ಧಿಯ ಯೋಗ ಕೂಡ ಮುಂದುವರೆಯಲಿದೆ. ಆದಾಯದ ಮೂಲಗಳು ಕೂಡ ಹೆಚ್ಚಾಗಲಿವೆ. ವ್ಯಾಪಾರದಲ್ಲಿ ಕೆಲ ಬದಲಾವಣೆ ಹಾಗೂ ಸುಧಾರಣೆಗಳನ್ನು ಮಾಡುವಿರಿ.  ಅವುಗಳಿಂದ ನಿಮಗೆ ಲಾಭ ಸಿಗಲಿದೆ.

ಮೀನ: ನೌಕರಿ ಹಾಗೂ ಸ್ಥಾನ ಪರಿವರ್ತನೆಯ ಸಂಕೇತಗಳು ಗೋಚರಿಸುತ್ತಿವೆ. ವಿದೇಶಗಳಿಂದ ಲಾಭ ಸಂಭವ. ವ್ಯಾಪಾರದಲ್ಲಿ ಸುಧಾರಣೆಯಾಗಲಿದೆ. ಧನ ಹಾಗೂ ಸಾಲದ ಸಮಸ್ಯೆಗಳು ದೂರಾಗಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News