ನವದೆಹಲಿ: ದಕ್ಷಿಣ ಭಾರತದಲ್ಲಿ ಗಂಡನ ಶ್ರೆಯೋಭಿವೃದ್ಧಿಗಾಗಿ 'ಭೀಮನ ಅಮಾವಾಸ್ಯೆ' ಆಚರಿಸುವಂತೆ ಉತ್ತರ ಭಾರತದಲ್ಲಿ 'ಕರ್ವಾ ಚೌತ್' ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಪೂರ್ಣಿಮೆಯ ನಾಲ್ಕನೆ ರಾತ್ರಿಯನ್ನು ಕರ್ವಾ ಚೌತ್ ಎಂಬುದಾಗಿ ಆಚರಿಸಲಾಗುತ್ತದೆ. ಕರ್ವಾ ಅಂದರೆ ಮಣ್ಣಿನ ಮಡಿಕೆ. ಚೌತ್ ಅಂದರೆ, ಹುಣ್ಣಿಮೆಯ ನಂತರದ ನಾಲ್ಕನೆ ದಿವಸ.
ಗಂಡನ ದೀರ್ಘಾಯುಷ್ಯ, ಆರೋಗ್ಯಕ್ಕಾಗಿ ಮಡದಿಯು ದಿನವಿಡೀ ಉಪವಾಸ ಮಾಡುತ್ತಾರೆ. ಸುಮಂಗಲೆಯರು ಚಂದ್ರನ ದರ್ಶನವಾದ ರಾತ್ರಿಯಿಂದ ತಮ್ಮ ಉಪವಾಸ ವೃತವನ್ನು ಆರಂಭಿಸುತ್ತಾರೆ. ನಂತರ ಮರುದಿನ ಚಂದ್ರೋದಯದ ಬಳಿಕವಷ್ಟೆ ಅವರ ಉಪವಾಸ ಸಮಾಪ್ತಿಗೊಳ್ಳುತ್ತದೆ. ಕರ್ವಾ ಚೌತ್ ದಿನದಂದು ಸಾಯಂಕಾಲ ವ್ರತಾಚರಣೆಯಲ್ಲಿರುವ ಮಹಿಳೆಯರು ಹೊಸ ಉಡುಪು, ಆಭರಣಗಳನ್ನು ತೊಟ್ಟು, ಕೈ ಕಾಲುಗಳಿಗೆ ಮದರಂಗಿ ಹಚ್ಚಿ ಸಂಭ್ರಮಿಸುತ್ತಾರೆ. ಸಾಣಿಗೆ ಎದುರು ದೀಪ ಹಚ್ಚಿ ಅದರ ಬೆಳಕಿನಲ್ಲಿ ಗಂಡನ ಮೊಗವನ್ನು ಕಾಣುತ್ತಾರೆ.
ಈ ವರ್ಷ ಅಕ್ಟೋಬರ್ 17 ರ ಗುರುವಾರವಾದ ಇಂದು ಮಹಿಳೆಯರು ಕರ್ವಾ ಚೌತ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಬಾಲಿವುಡ್ನಲ್ಲಿ, ಪ್ರತಿ ಚಿತ್ರದಲ್ಲೂ ಯಾವುದಾದರೂ ಹಬ್ಬದ ಹಾಡುಗಳು ಮತ್ತು ದೃಶ್ಯಗಳನ್ನು ತೋರಿಸಲಾಗುತ್ತದೆ. ಆದರೆ ಕರ್ವಾ ಚೌತ್(Karwa Chauth) ಸಂಬಂಧಿತ ಗೀತೆಗಳು ಬಾಲಿವುಡ್ಗೆ ಅದೃಷ್ಟವೆಂದೇ ಹೇಳಬಹುದು. ಏಕೆಂದರೆ ಕರ್ವಾಚೌತ್ ಹಬ್ಬಕ್ಕೆ ಸಂಬಂಧಿಸಿದ ಗೀತೆಗಳಿರುವ ಚಿತ್ರಗಳು ಸೂಪರ್ಹಿಟ್ ಆಗಿವೆ.
ಈ ಬಾಲಿವುಡ್ ಹಾಡುಗಳು ಈ ಉಪವಾಸದ ವೈಭವವನ್ನು ತೋರಿಸುತ್ತವೆ ಮತ್ತು ಗಂಡ-ಹೆಂಡತಿ ಸಂಬಂಧದ ಭಾವನೆಗಳನ್ನು ತೋರಿಸುತ್ತವೆ. ಈ ಪವಿತ್ರ ಹಬ್ಬಕ್ಕೆ ಸಂಬಂಧಿಸಿದ ಬಾಲಿವುಡ್ನ ಕೆಲವು ಆಯ್ದ ಕರ್ವಾ ಚೌತ್ ವಿಶೇಷ ಗೀತೆಗಳು...
'ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ' ಚಿತ್ರದಲ್ಲಿ, ಕರ್ವಾ ಚೌತ್ ಗೀತೆಯು ಗಂಡ ಮತ್ತು ಹೆಂಡತಿಯೊಂದಿಗೆ ಇಬ್ಬರು ಪ್ರೇಮಿಗಳಿಗೆ ಈ ಹಬ್ಬದ ಮಹತ್ವವನ್ನು ತಿಳಿಸಿದೆ. ಕಾಜೋಲ್ ಮದುವೆಗೆ ಮೊದಲು ಶಾರುಖ್ ಖಾನ್ ಗಾಗಿ ಈ ಉಪವಾಸವನ್ನು ಆಚರಿಸುತ್ತಾರೆ.
'ಬೋಲೆ ಚುಡಿಯಾ' ಹಾಡಿನಲ್ಲಿ ಅಮಿತಾಭ್-ಜಯಾ, ಶಾರುಖ್-ಕಾಜೋಲ್ ಮತ್ತು ಹೃತಿಕ್-ಕರೀನಾ ಜೋಡಿ ಕಾಣಿಸಿಕೊಂಡಿದ್ದು, 'ಕಭಿ ಖುಷಿ ಕಭಿ ಘಾಮ್' ಚಿತ್ರದ ಈ ಹಾಡು ಅದ್ಭುತವಾಗಿದೆ.
ಕರ್ವಾ ಚೌತ್ ಹಬ್ಬದ ಸಂಭ್ರಮವನ್ನು ಪ್ರಸ್ತುತ ಪಡಿಸುವ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಹಾಡು ಸಹ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಕರ್ವಾಚೌತ್ ಉಪವಾಸವನ್ನು ಎರಡು ಬಾರಿ ತೋರಿಸಲಾಗಿದೆ, ಒಮ್ಮೆ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಜೋಡಿ, ಮತ್ತೊಮ್ಮೆ ಅಜಯ್ ದೇವಗನ್ ಅವರನ್ನು ಐಶ್ವರ್ಯಾ ರೈ ಮದುವೆಯಾದ ನಂತರ ಎರಡನೇ ಬಾರಿಗೆ ಈ ವ್ರತಾಚರಣೆಯ ಬಗ್ಗೆ ತೋರಿಸಲಾಗಿದೆ.