"ನನ್ನ ಪತ್ನಿ ನಾರ್ಮಲ್ ಹುಡುಗಿ ಅಲ್ಲ, ಆಕೆ ಪ್ರೊಫೆಸರ್": ಮುದ್ದಿನ ಮಡದಿ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೌರವದ ಮಾತು

Dhruva Sarja: ಹೊಸ ಪ್ರಯತ್ನ ಎನಿಸುವಂತೆ ಮಾರ್ಟಿನ್ ಚಿತ್ರತಂಡ ಪ್ಯಾನ್ ವರ್ಲ್ಡ್ ಸುದ್ದಿಗೋಷ್ಠಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ಕಾರ್ಯದಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡಿದೆ.    

Written by - YASHODHA POOJARI | Edited by - Bhavishya Shetty | Last Updated : Aug 25, 2024, 09:19 PM IST
    • ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಪ್ಯಾನ್ ವರ್ಲ್ಡ್ ಸಿನಿಮಾ ಮಾರ್ಟಿನ್
    • ಮಾರ್ಟಿನ್ ಚಿತ್ರತಂಡದಿಂದ ಪ್ಯಾನ್ ವರ್ಲ್ಡ್ ಸುದ್ದಿಗೋಷ್ಠಿ
    • ತಮಿಳು ಮತ್ತು ಮಲಯಾಳಂ ವಾಹಿನಿಗಳಿಗೆ ಸಂದರ್ಶನ ಕೊಡೋದ್ರಲ್ಲಿ ಕಂಪ್ಲೀಟ್ ಬ್ಯುಸಿ
"ನನ್ನ ಪತ್ನಿ ನಾರ್ಮಲ್ ಹುಡುಗಿ ಅಲ್ಲ, ಆಕೆ ಪ್ರೊಫೆಸರ್": ಮುದ್ದಿನ ಮಡದಿ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೌರವದ ಮಾತು title=
File Photo

Dhruva Sarja: ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಪ್ಯಾನ್ ವರ್ಲ್ಡ್ ಸಿನಿಮಾ ಮಾರ್ಟಿನ್, ಅಕ್ಟೋಬರ್ 11ರಂದು ರಿಲೀಸ್ ಆಗುತ್ತಿದೆ. ಇತ್ತೀಚೆಗೆಯಷ್ಟೇ  ಟ್ರೇಲರ್ ರಿಲೀಸ್‌ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡುವಂತಿದೆ. ಇನ್ನು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರರಾಜ್ಯ, ಹೊರದೇಶಗಳಲ್ಲಿ ʼಮಾರ್ಟಿನ್‌ʼ ಬಗ್ಗೆ ಮಾತು ಜೋರಾಗಿಯೇ ಕೇಳಿಬರುತ್ತಿದೆ.

ಇದನ್ನೂ ಓದಿ: ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ?

ಹೊಸ ಪ್ರಯತ್ನ ಎನಿಸುವಂತೆ ಮಾರ್ಟಿನ್ ಚಿತ್ರತಂಡ ಪ್ಯಾನ್ ವರ್ಲ್ಡ್ ಸುದ್ದಿಗೋಷ್ಠಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ಕಾರ್ಯದಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡಿದೆ.  

ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮಿಳು ಮತ್ತು ಮಲಯಾಳಂ ವಾಹಿನಿಗಳಿಗೆ ಸಂದರ್ಶನ ಕೊಡೋದ್ರಲ್ಲಿ ಕಂಪ್ಲೀಟ್ ಬ್ಯುಸಿ ಆಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ತಮಿಳು ನಿರೂಪಕಿ, "ನೀವು ಸಾಮಾನ್ಯ ಹುಡುಗಿಯನ್ನ ಮದುವೆಯಾಗಿ ಗ್ರೇಟ್ ಅನಿಸಿಕೊಂಡಿದ್ದೀರಾ" ಎಂದಿದ್ದಾರೆ. ಈ ಮಾತಿಗೆ ಪ್ರತಿಕ್ರಿಯಿಸಿದ ಧ್ರುವ, "ನನ್ನ ಪತ್ನಿ ನಾರ್ಮಲ್ ಹುಡುಗಿ ಅಲ್ಲ, ಆಕೆ ಪ್ರೊಫೆಸರ್" ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಅವರ ಈ ಮಾತು ಕೇಳಿದರೆ, ಪತ್ನಿ ಮೇಲಿನ ಗೌರವ ಎಷ್ಟಿದೆ ಎಂಬುದು ತಿಳಿಯುತ್ತದೆ. ಇದೀಗ ಪತ್ನಿ ಬಗ್ಗೆ ಮಾತನಾಡಿರುವ ಧ್ರುವ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.  ಜೊತೆಗೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.

"ಹೆಣ್ಣು ಮಕ್ಕಳು ಹೊರ ಬಂದು ದುಡಿಯಬೇಕು" ಎಂಬ ಹೇಳಿಕೆಯನ್ನು ಧ್ರುವ ಕೊಟ್ಟಿದ್ದರು. ಈ ಮಾತು ಅದೆಷ್ಟೋ ಹೆಣ್ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗಿತ್ತು.

ಇದನ್ನೂ ಓದಿ: ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!

ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಈ ವರ್ಷ ಭರ್ಜರಿ ಸಿಹಿಸುದ್ದಿಯೇ ಇದೆ. ಏಕೆಂದರೆ ಮಾರ್ಟಿನ್ ಬೆನ್ನಲ್ಲೇ KD ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು ಭರ್ಜರಿ ಬಾಡೂಟ ಅಂದರೂ ತಪ್ಪಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News