Bhairathi Ranagal OTT release: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
Bhairathi Ranagal : ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರ ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. "ಮಫ್ತಿ" ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಛಾಯಾ ಸಿಂಗ್ ಮತ್ತು ರುಕ್ಮಿಣಿ ವಸಂತ್ ಗೆ ಅಷ್ಟೇನೂ ಸ್ಪೇಸ್ ಇಲ್ಲ. ಕ್ಯಾಮೆರಾ ವರ್ಕ್ ಅದ್ಬುತವಾಗಿದೆ. ಮೇಕಿಂಗ್ ದಿಲ್ ಖುಷ್ ಆಗಿಸುತ್ತೆ. ಮ್ಯೂಸಿಕ್ ಕುಳಿತಲ್ಲೇ ನಮ್ಮನ್ನ ನಡುಗಿಸುತ್ತೆ. 62ರ ಪ್ರಾಯದಲ್ಲೂ ಶಿವಣ್ಣ ಎನರ್ಜಿಗೆ ಎದ್ದು ನಿಂತು ಸಲ್ಯೂಟ್ ಹೊಡೆಯಲೇಬೇಕು. ಸೊ ಥೀಯೇಟರ್ ಗೆ ಬಂದು ಭೈರತಿ ರಣಗಲ್ ಸಿನಿಮಾ ನೋಡಿ.
Bhairathi Ranagal: ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಅದೇ ದಿನ ಶಿವಣ್ಣ ನಟನೆಯ ಬೈರತಿ ರಣಗಲ್ ಕೂಡ ರಿಲೀಸ್ ಆಗುತ್ತಿದೆ. ಅಂದು ಜನುಮದ ಜೋಡಿ ಸಿನಿಮಾ ಅಮ್ಮ ಪಾರ್ವತಮ್ಮ ನಿರ್ಮಾಪಕಿ. ಇಂದು ಪತ್ನಿ ಈ ಸಿನಿಮಾಗೆ ನಿರ್ಮಾಪಕಿ.
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಭೈರತಿ ರಣಗಲ್ ಚಿತ್ರದ ಅಧಿಕೃತ ಟ್ರೇಲರ್ ಇಂದು ಬಿಡುಗಡೆಯಾಗಿದೆ.ಈಗ ಅಭಿಮಾನಿಗಳು ಚಿತ್ರದ ಟ್ರೈಲರ್ ನೋಡಿ ಶಿವಣ್ಣ ಅವರ ಪವರ್ ಫುಲ್ ಪಾತ್ರಕ್ಕೆ ಮನಸೋತಿದ್ದು ಚಿತ್ರದ ಬಿಡುಗಡೆಯಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
Shivarajkumar Bhairathi Ranagal : "ಮಫ್ತಿ" ಚಿತ್ರದ ಪ್ರೀಕ್ವೆಲ್ ಆಗಿರುವ "ಭೈರತಿ ರಣಗಲ್" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಟೈಟಲ್ ಸಾಂಗ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ "ಭೈರತಿ ರಣಗಲ್" ಚಿತ್ರ ನವೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Srimurali In Bhairathi Ranagal: ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸುತ್ತಾರಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ನಟ ಶ್ರೀಮುರಳಿ ಹೇಳಿದ್ದೇನು? ಇಲ್ಲಿದೆ ಫುಲ್ ಮಾಹಿತಿ.
Rukmini Vasanth In Bhairathi Ranagal: ನಟ ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಭೈರತಿ ರಣಗಲ್ ಸಿನಿಮಾದ ನಾಯಕಿ ಯಾರೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಹಲವು ದಿನಗಳಿಂದ ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಸಿದ್ದರು. ಇದಕ್ಕೆ ಕೊನೆಗೂ ಉತ್ತರ ದೊರೆತಿದೆ.
Amrithadhare Serial: ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇದೀಗ ಮತ್ತೆ ಸ್ಯಾಂಡಲ್ವುಡ್ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರನ್ನು ರಂಚಿಸಲು ಬರುತ್ತಿದ್ದಾರೆ.
Shivarajkumar Bhairathi Ranagal Movie : ಸ್ಯಾಂಡಲ್ವುಡ್ ಹ್ಯಾಟ್ರೀಕ್ ಹೀರೋ ಡಾ. ಶಿವರಾಜಕುಮಾರ್ ಅವರ ಮಫ್ತಿ ಚಿತ್ರದಲ್ಲಿನ ʼಭೈರತಿ ರಣಗಲ್ʼ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಇದೀಗ ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಬೈರತಿ ರಣಗಲ್ ಚಿತ್ರದ ಕಥೆ ಮಾಡಲಾಗಿದೆ. ಇದು ʼಮಫ್ತಿʼ ಚಿತ್ರದ ಪ್ರೀಕ್ವೆಲ್. "ಮಫ್ತಿ" ಚಿತ್ರದಲ್ಲಿ ಮಧ್ಯಾಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ.
ಸ್ಯಾಂಡಲ್‌ವುಡ್‌ನಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಇಂದು ಬೆಳಿಗ್ಗೆ ಯೂಟ್ಯೂಬ್‌ನಲ್ಲಿ ಕಬ್ಜ ಟ್ರೈಲರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಇದರ ಬೆನ್ನಲ್ಲೆ ಹ್ಯಾಟ್ರೀಕ್ ಹೀರೋ ಡಾ. ಶಿವರಾಜಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಪ್ಯಾನ್ ಇಂಡಿಯಾ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ಕ್ಯೂರಿಯಾಸಿಟಿ ಡಬಲ್ ಮಾಡಿದೆ.
Shivarajkumar New Movie : ಮಡಚಿಟ್ಟಿದ್ದ ಅಧ್ಯಾಯದ ಪುನಾರಾರಂಭ 'The Era, Where It All Began' ಯೆಸ್.. ಮಡಚಿಟ್ಟಿದ್ದ ಅಧ್ಯಾಯವನ್ನ ಮತ್ತೇ ಆರಂಭ ಮಾಡಲು ಶಿವಣ್ಣ ಸಜ್ಜಾಗಿದ್ದಾರೆ. ವೇದ ಸಿನಿಮಾದಲ್ಲಿ ಅದ್ಭುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಅತ್ಯದ್ಭುತ ಸ್ಟೋರಿಯನ್ನ ಕೊಟ್ಟ ಶಿವಣ್ಣ ಇತ್ತೀಚಿಗೆ ಫುಲ್ ಬ್ಯುಸಿ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.