ಮೋದಿ ಸೀಟ್‌ನಲ್ಲಿ ಕುರ್ತಾರೆ ಬಾಹುಬಲಿ ʼಕಟ್ಟಪ್ಪʼ..! ʼವಿಶ್ವನೇತಾ' ಆಗಲಿದ್ದಾರೆ ನಟ ಸತ್ಯರಾಜ್‌

Actor Sathyaraj : ಪ್ರಧಾನಿ ಮೋದಿ ಬಂದ ನಂತರ ಭಾರತದ ಕೀರ್ತಿ ಹೆಚ್ಚಾಯಿತು, ವಿದೇಶಗಳಲ್ಲಿ ಭಾರತದ ದ್ವಿಗುಣಗೊಂಡಿತು. ನಮೋ ಮೋದಿಯವರಿಗೆ ಬೇರೆ ದೇಶಗಳ ಪ್ರಧಾನಿಗಳು, ರಾಷ್ಟ್ರಪತಿಗಳು ನೀಡಿದ ಗೌರವದ ದೃಷ್ಟಿಯಿಂದ ಈ ಸಿನಿಮಾಗೆ ʼವಿಶ್ವನೇತಾʼ ಎಂಬ ಶೀರ್ಷಿಕೆ ಫೈನಲ್ ಮಾಡಲಾಗಿದೆ.. ಆದರೆ ಸತ್ಯರಾಜ್‌ಗೂ  ಮೋದಿಯವರಿಗೂ ಏನ್‌ ಸಂಬಂಧ.. ಇಲ್ಲಿದೆ ನೋಡಿ..

Written by - Krishna N K | Last Updated : May 18, 2024, 05:45 PM IST
    • ಪ್ರಧಾನಿ ಮೋದಿ ಬಂದ ನಂತರ ಭಾರತದ ಕೀರ್ತಿ ಹೆಚ್ಚಾಯಿತು,
    • ಪ್ರಸ್ತುತ ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಕಥೆ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ..
    • ಕೆಲವು ದಿನಗಳಿಂದ ಮೋದಿ ಬಯೋಪಿಕ್ ಬಗ್ಗೆ ಹಲವು ದಿನಗಳಿಂದ ಸುದ್ದಿ ಬರುತ್ತಿದೆ.
ಮೋದಿ ಸೀಟ್‌ನಲ್ಲಿ ಕುರ್ತಾರೆ ಬಾಹುಬಲಿ ʼಕಟ್ಟಪ್ಪʼ..! ʼವಿಶ್ವನೇತಾ' ಆಗಲಿದ್ದಾರೆ ನಟ ಸತ್ಯರಾಜ್‌ title=

Actor Sathyaraj as PM Narendra modi : ಇತ್ತೀಚಿಗೆ ಸೆಲೆಬ್ರಿಟಿಗಳ ಬಯೋಪಿಕ್ ಸಾಮಾನ್ಯವಾಗಿದೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾಗಳು ಹೆಚ್ಚಾಗಿ ತೆರೆ ಮೇಲೆ ಬರುತ್ತಿವೆ. ಅವುಗಳಲ್ಲಿ ಪೈಕಿ ಹೆಚ್ಚಿನವು ಒಟಿಟಿಗಳಿಗೆ ಸೀಮಿತವಾಗಿದ್ದರೆ, ಇನ್ನೂ ಕೆಲವು ದೇಶಾದ್ಯಂತ ಚರ್ಚೆಗೆ ಕಾರಣವಾಗುತ್ತಿವೆ. ಪ್ರಸ್ತುತ ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಕಥೆ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ..

ಈ ಬಯೋಪಿಕ್ ಬಗ್ಗೆ ಹಲವು ದಿನಗಳಿಂದ ಸುದ್ದಿ ಬರುತ್ತಿದೆ. ಆದರೆ ಯಾರು ನಟಿಸುತ್ತಿದ್ದಾರೆ ಮತ್ತು ಚಿತ್ರೀಕರಣದ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿನ್ನಲೆಯಲ್ಲಿ ಇಂಟರೆಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಪ್ರಧಾನಿ ಮೋದಿ ಪಾತ್ರದಲ್ಲಿ ನಟಿಸಲಿರುವ ನಟನನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ:ವೈಷ್ಣವಿ ಗೌಡಗೆ ಶಾಕ್‌ ಕೊಟ್ಟ ಅಭಿಮಾನಿ..! ನಟಿ ವಿರುದ್ಧ ದೂರು ನೀಡಿ, ದಂಡ ಕಟ್ಟುವಂತೆ ಮಾಡಿದ ಭೂಪ

ಮೋದಿ ಪಾತ್ರದಲ್ಲಿ ಬಾಹುಬಲಿ ʼಕಟ್ಟಪ್ಪ' ಖ್ಯಾತಿ ಸತ್ಯರಾಜ್‌ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿ ಮತ್ತು ಸತ್ಯತಾಜ್‌ ಲುಕ್‌ನಲ್ಲಿ ಸಾಮ್ಯತೆ ಇರುವ ಹಿನ್ನಲೆ ಸತ್ಯರಾಜ್ ಮೋದಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೆ, ಈ ಸಿನಿಮಾದ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.

ನಮೋ ಬಯೋಪಿಕ್‌ಗೆ ʼವಿಶ್ವನೇತಾʼ ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆಯಂತೆ. ಪ್ರಧಾನಿ ಮೋದಿ ಬಂದ ನಂತರ ಭಾರತದ ಕೀರ್ತಿ ಹೆಚ್ಚಾಯಿತು, ವಿದೇಶಗಳಲ್ಲಿ ಭಾರತದ ದ್ವಿಗುಣಗೊಂಡಿತು. ನಮೋ ಮೋದಿಯವರಿಗೆ ಬೇರೆ ದೇಶಗಳ ಪ್ರಧಾನಿಗಳು, ರಾಷ್ಟ್ರಪತಿಗಳು ನೀಡಿದ ಗೌರವದ ದೃಷ್ಟಿಯಿಂದ ಈ ಸಿನಿಮಾಗೆ ʼವಿಶ್ವನೇತʼ ಎಂಬ ಟೈಟಲ್ ಫೈನಲ್ ಮಾಡಲಾಗಿದೆ.. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ..

ಇದನ್ನೂ ಓದಿ:ಬಾಲಿವುಡ್‌ಗೆ ಕಾಲಿಡುತ್ತಲೇ ಆ ನಟನ ಜೊತೆ ಲಿಪ್‌ ಕಿಸ್‌ ಮಾಡೋಕೆ OK ಎಂದ ಕೀರ್ತಿ ಸುರೇಶ್‌..!

ಸಿಎಚ್ ಕ್ರಾಂತಿ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ವಂದೇ ಮೀಡಿಯಾ ಪ್ರೈ. ಲಿ ಬ್ಯಾನರ್ ಅಡಿಯಲ್ಲಿ ಕಾಶಿರೆಡ್ಡಿ ಶರತ್ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ.. ಸತ್ಯರಾಜ್ ಜೊತೆಗೆ ಅಭಯ್ ಡಿಯೋಲ್, ಅನುಪಮ್ ಖೇರ್, ನೀನಾ ಗುಪ್ತಾ, ಪಲ್ಲವಿ ಜೋಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಕಾಲಭೈರವ ಸಂಗೀತ ಚಿತ್ರಕ್ಕಿರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News