ಹೊಸ ಅವತಾರದಲ್ಲಿ ನಟಿ ಪ್ರಿಯಾಮಣಿ ಪ್ರತ್ಯಕ್ಷ !

ಮದುವೆಯಾದ ನಂತರ ಸ್ವಲ್ಪ ದಿನಗಳ ಕಾಲ ದೂರವಾಗಿದ್ದ ಬಹುಭಾಷಾ ನಟಿ ಪ್ರಿಯಾಮಣಿ ಈಗ ಮತ್ತೆ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಷ್ಟಕ್ಕೂ ಅವರ ಹೊಸ ಅವತಾರ ಯಾವುದೇನ್ನುತ್ತಿರಾ? ಈಗ ಟ್ವಿಟ್ಟರ್ ನಲ್ಲಿ ಹೊಸ ಪೋಟೋ ಶೂಟ್ ಮೂಲಕ ಕಾಣಿಸಿಕೊಳ್ಳುವ ಮೂಲಕ ತಮ್ಮ ಹೊಸ ಅವತಾರವನ್ನು ಪ್ರಸ್ತುತ ಪಡಿಸಿದ್ದಾರೆ.

Last Updated : Oct 26, 2018, 04:43 PM IST
ಹೊಸ ಅವತಾರದಲ್ಲಿ ನಟಿ ಪ್ರಿಯಾಮಣಿ ಪ್ರತ್ಯಕ್ಷ ! title=
Photo:twitter

ಬೆಂಗಳೂರು: ಮದುವೆಯಾದ ನಂತರ ಸ್ವಲ್ಪ ದಿನಗಳ ಕಾಲ ದೂರವಾಗಿದ್ದ ಬಹುಭಾಷಾ ನಟಿ ಪ್ರಿಯಾಮಣಿ ಈಗ ಮತ್ತೆ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಷ್ಟಕ್ಕೂ ಅವರ ಹೊಸ ಅವತಾರ ಯಾವುದೇನ್ನುತ್ತಿರಾ? ಈಗ ಅವರು ಟ್ವಿಟ್ಟರ್ ನಲ್ಲಿ ಹೊಸ ಪೋಟೋ ಶೂಟ್ ಮೂಲಕ ಕಾಣಿಸಿಕೊಂಡಿದ್ದು, ಆ ಮೂಲಕ ತಮ್ಮ ಹೊಸ ಅವತಾರವನ್ನು ಪ್ರಸ್ತುತ ಪಡಿಸಿದ್ದಾರೆ. ಅಲ್ಲದೆ ಮತ್ತೆ ಸಿನಿಮಾದಲ್ಲಿ ಸಕ್ರೀಯವಾಗಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಕನ್ನಡದಲ್ಲಿ ರಾಮ್,ಏನೋ ಒಂಥರಾ, ವಿಷ್ಣುವರ್ಧನ್, ಅಣ್ಣಾ ಬಾಂಡ್ ,ಚಾರುಲತಾ,ಲಕ್ಷ್ಮಿಯಂತಹ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಪ್ರಿಯಾಮಣಿ ಮುಸ್ತಾಪಾ ಎನ್ನುವರೊಂದಿಗೆ ಕಳೆದ ವರ್ಷ ಆಗಸ್ಟ್ ನಲ್ಲಿ ಮದುವೆಯಾಗಿದ್ದರು ಇದಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು.

ಈಗ ಮತ್ತೆ ಹೊಸ ಪೋಟೋ ಶೂಟ್ ನೊಂದಿದೆ ಸಿನಿಮಾಯಾನವನ್ನು ಮುಂದುವರಿಸುವ ಸೂಚನೆಯನ್ನು ನೀಡಿದ್ದಾರೆ. ಪ್ರಿಯಾಮಣಿ ತಮ್ಮ ಅಭಿನಯ ಚಾತುರ್ಯದಿಂದ ಹಲವಾರು  ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಅದರಲ್ಲಿ ಪ್ರಮುಖವಾಗಿ ಪರುತೀವೀರನ್ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ತದನಂತರ ಇಡೀ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

 

Trending News