Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌

Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. 

Written by - Chetana Devarmani | Last Updated : Oct 20, 2024, 11:01 AM IST
  • ದೀಪಿಕಾ ಪಡುಕೋಣೆ ವಿಡಿಯೋ
  • ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್
  • ಕನ್ನಡದಲ್ಲಿ ಮಾತನಾಡಿದ ದೀಪಿಕಾ ಪಡುಕೋಣೆ
Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌
Deepika Padukone

Deepika Padukone talks in Kannada: ದೀಪಿಕಾ ಪಡುಕೋಣೆ ಬಾಲಿವುಡ್‌ ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದರೂ, ಅವರ ಮೂಲ ಕರ್ನಾಟಕ. ಕರುನಾಡಿನ ಕುವರಿ ದೀಪಿಕಾ ನಟಿಸಿದ ಮೊದಲ ಸಿನಿಮಾ ಸಹ ಕನ್ನಡದ್ದೇ ಆಗಿದೆ. ಮೂಲತಃ ಕರ್ನಾಟಕದವರಾದ ದೀಪಿಕಾ ಪಡುಕೋಣೆ ಬೆಳೆದಿದ್ದು ಬೆಂಗಳೂರಿನಲ್ಲಿ. ವಿದ್ಯಾಭ್ಯಾಸ ಸಹ ಬೆಂಗಳೂರಿನಲ್ಲೇ ಮುಗಿಸಿದ್ದಾರೆ. ಹಿಂದಿಯಷ್ಟೇ ಶುದ್ಧವಾಗಿ ದೀಪಿಕಾ ಕನ್ನಡ ಸಹ ಮಾತನಾಡುತ್ತಾರೆ.   

Add Zee News as a Preferred Source

ದೀಪಿಕಾ ಪಡುಕೋಣೆ ಅವರು ಕೆಲ ವರ್ಷಗಳ ಹಿಂದೆ ಡಿಪ್ರೆಷನ್‌ ಅಂದರೆ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಹಲವು ಬಾರಿ ಪಬ್ಲಿಕ್‌ನಲ್ಲೇ ಹೇಳಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಕನ್ನಡದಲ್ಲೇ ಖಿನ್ನತೆ ಬಗ್ಗೆ ಅರಿವು ಮೂಡಿಸಿದ ವಿಡಿಯೋ ಇದೀಗ ವೈರಲ್‌ ಆಗಿದೆ. 

ಇದನ್ನೂ ಓದಿ: ನಟಿ ಐಶ್ವರ್ಯ ರೈ ವಿಶ್ವ ಸುಂದರಿ ಪಟ್ಟ ಏರಿದ ಸಂದರ್ಭದ ಫೋಟೋಗಳು ಹೇಗಿವೆ ಗೊತ್ತಾ..? ಈಕೆಯ ಸೌಂದರ್ಯ ನೋಡಿದರೆ ನೀವು ಮೈ ಮರೆಯೋದು ಗ್ಯಾರಂಟಿ!

 

 

ʻʻನಾನು ಕೂಡ ಖಿನ್ನತೆಯ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದೆ. ನನಗೆ ಖಿನ್ನತೆ ಹೆಚ್ಚುತ್ತಿದೆ ಎನಿಸಿದಾಗ ಔಷಧ ತೆಗೆದುಕೊಳ್ಳೋಕೆ ಆರಂಭಿಸಿದೆ. ಅಮ್ಮ ಸಮಯಕ್ಕೆ ಸರಿಯಾಗಿ ನಾನು ಔಷಧಿ ಪಡೆದೆನೋ ಇಲ್ಲವೋ ಎಂದು ಕೇಳುತ್ತಿದ್ದರು.  ನನ್ನ ಸ್ಟೋರಿನ ಎಲ್ಲರಿಗೂ ಹೇಳ್ತೀನಿ. ಇದರಿಂದ ಕೆಲವರಿಗೆ ಸಹಾಯ ಆದರೆ ಒಳ್ಳೆಯದುʼʼ ಎಂದಿದ್ದಾರೆ. 

ಔಷಧಿ ಜೊತೆಗೆ ಒಳ್ಳೆಯ ಆಹಾರ, ವ್ಯಾಯಾಮ, ನಿದ್ದೆ ಹಾಗೂ ಒತ್ತಡದಿಂದ ದೂರ ಇರಲು ಪ್ರಯತ್ನಿಸುತ್ತಿದ್ದೆ. ಈಗ ಯಾವುದೇ ತೊಂದರೆ ಇಲ್ಲʼʼ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 

ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿನ ತಾಯಿಯಾದರು. ದೀಪಿಕಾ ಪಡುಕೋಣೆ ತಾಯಿಯಾದ ಕಾರಣ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ದೀಪಿಕಾ ಪಡುಕೋಣೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ  ‘ಸಿಂಗಂ ಅಗೇನ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಟ ಸುದೀಪ್ ತಾಯಿ ಸರೋಜಾ ಸಂಜೀವ್ ಇನ್ನಿಲ್ಲ.. ಶೋಕದಲ್ಲಿ ಕಿಚ್ಚನ ಕುಟುಂಬ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News