ನಿರೂಪ್ ಭಂಡಾರಿಗೆ ಜೋಡಿಯಾದರು ಬೃಂದಾ ಆಚಾರ್ಯ

Nirup Bhandari Movie: ಒಂದು ಚೆಂದದ ಪಾತ್ರ ಮತ್ತು ಅದನ್ನು ಆವಾಹಿಸಿಕೊಂಡು ನಟಿಸುವ ಕಲೆಗಾರಿಕೆ ಎಂಬುದು ನಟ ನಟಿಯರ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತೆ. 

Written by - YASHODHA POOJARI | Last Updated : Dec 26, 2023, 07:18 PM IST
  • ನಿರೂಪ್ ಭಂಡಾರಿ ಹೊಸ ಸಿನಿಮಾ
  • ಬೃಂದಾ ಆಚಾರ್ಯ ನಿರೂಪ್ ಭಂಡಾರಿಗೆ ಜೋಡಿ
  • ಸಚಿನ್ ವಾಲಿ ನಿರ್ದೇಶನ ಮಾಡಲಿರುವ ಸಿನಿಮಾ
ನಿರೂಪ್ ಭಂಡಾರಿಗೆ ಜೋಡಿಯಾದರು ಬೃಂದಾ ಆಚಾರ್ಯ    title=

Nirup Bhandari Movie: ಒಂದು ಚೆಂದದ ಪಾತ್ರ ಮತ್ತು ಅದನ್ನು ಆವಾಹಿಸಿಕೊಂಡು ನಟಿಸುವ ಕಲೆಗಾರಿಕೆ ಎಂಬುದು ನಟ ನಟಿಯರ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತೆ. ಸದ್ಯದ ಮಟ್ಟಿಗೆ ಹಾಗೆ ಒಂದು ಪಾತ್ರದ ಮೂಲಕ ಅದೃಷ್ಟ ಖುಲಾಯಿಸಿಕೊಂಡ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಹೊನ್ನಾವರದ ಹುಡುಗಿ ಬೃಂದಾ ಆಚಾರ್ಯ. ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಶಿವಾನಿಯಾಗಿ ಮನಸೋರೆಗೊಂಡಿದ್ದ ಬೃಂದಾ ಮುಂದೀಗ ಅವಕಾಶಗಳ ಸುಗ್ಗಿ ಶುರುವಾಗಿದೆ. ಲೇಟೆಸ್ಟ್ ವಿಚಾರವೇನೆಂದರೆ, ಬೃಂದಾ ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಈ ಮೂಲಕ ಬೃಂದಾ ಆಚಾರ್ಯ ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗ್ಗೆ ಕೆಲವೇ ಕೆಲ ಮಾಹಿತಿಗಳು ಮಾತ್ರವೇ ಜಾಹೀರುಗೊಂಡಿವೆ. ಅದರನ್ವಯ ಹೇಳೋದಾದರೆ, ಈ ಚಿತ್ರವನ್ನು ಸಚಿನ್ ವಾಲಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಸಚಿನ್ ಪಾಲಿಗಿದು ಸ್ವತಂತ್ರ ನಿರ್ದೇಶಕರಾಗಿ ಮೊದಲ ಚಿತ್ರ.

ಇದನ್ನೂ ಓದಿ: ʻಡಂಕಿ’ ಧಮಾಕ.. ಅಭಿಮಾನಿಗಳನ್ನು ಭೇಟಿಯಾದ ಶಾರುಖ್ ಖಾನ್.! 

ಇನ್ನುಳಿದಂತೆ ಬೃಂದಾ ಪಾತ್ರದ ವಿಚಾರಕ್ಕೆ ಬರೋದಾದರೆ, ಅವರ ಪಾಲಿಗೆ ಇಲ್ಲಿಯೂ ಕೂಡಾ ಭಿನ್ನವಾದ ಪಾತ್ರವೇ ಒಲಿದು ಬಂದಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಅಮರ್ ಕೂಡಾ ಈ ಚಿತ್ರದಲ್ಲಿ ರಿಪೋರ್ಟರ್ ಆಗಿ ನಟಿಸಲಿದ್ದಾರೆ. ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಶಿವಾನಿಯಾಗಿ ಬೃಂದಾ ಆಚಾರ್ಯ ಎಲ್ಲರಿಗೂ ಹಿಡಿಸಿದ್ದರು. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. 

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಜಿತೆಗಿನ ಎಕ್ಸ್ ಆಂಡ್ ವೈ, ಎಸ್ ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಚಿತ್ರಗಳು ಬೃಂದಾರ ಕೈಲಿವೆ. ಇದೀಗ ಕಥೆ, ಪಾತ್ರವನ್ನು ಇಷ್ಟಪಟ್ಟು ಸದರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. 

ಒಂದು ಯಶಸ್ವೀ ಚಿತ್ರದಲ್ಲಿ ನಟಿಸಿಯಾದ ನಂತರ ಇಡುವ ಪ್ರತೀ ಹೆಜ್ಜೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಕಲಾವಿದರ ವೃತ್ತಿ ಬದುಕನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ ನೋಡೋದಾದರೆ ಬೃಂದಾರದ್ದು ಪ್ರೌಢ ನಡೆ. ಯಾಕೆಂದರೆ, ತಾನು ನಟಿಸೋ ಪ್ರತೀ ಪಾತ್ರಗಳೂ ಕೂಡಾ ಹೊಸತನದೊಂದಿಗೆ ಪ್ರೇಕ್ಷಕರನ್ನು ತಲುಪಬೇಕೆಂಬ ಇರಾದೆ ಅವರಲ್ಲಿದೆ. ಅದೇ ಮನಃಸ್ಥಿತಿಯಲ್ಲಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದ ಬೃಂದಾ ನಾಲಕ್ಕನೇ ಚಿತ್ರಕ್ಕೂ ಸಹಿ ಮಾಡಿದ್ದಾರೆ. 

ಇದನ್ನೂ ಓದಿ: Charithrya Ganesh: ಸೀರೆಯುಟ್ಟು ಮಿಂಚಿದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ

ಈ ಚಿತ್ರದಲ್ಲಿ ಅವರು ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಹೊಸ ಆವೇಗ ಹೊಂದಿರೋ ಆ ಪಾತ್ರಕ್ಕೆ ಜೀವ ತುಂಬಲು ಎಲ್ಲ ತಯಾರಿಗಳನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ನಾಲಕ್ಕನೇ ಸಿನಿಮಾದ ಮತ್ತಷ್ಟು ವಿವರಗಳು ಸದ್ಯದಲ್ಲಿಯೇ ಹೊರಬೀಳಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News