ಶಾರ್ಟ್ಸ್ ಧರಿಸಿದ ಬಾಯ್ ಫ್ರೆಂಡ್, ಖುಲ್ಲಂ-ಖುಲ್ಲಾ ಬಾಲಿವುಡ್ ಬೆಡಗಿ ಹೇಳಿದ್ದೇನು?

ಖ್ಯಾತ ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ಖ್ಯಾತ ನಟ ಟೈಗರ್ ಶ್ರಾಫ್ ಕಳೆದ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ. ಬಾಲಿವುಡ್ ನ ಜನಪ್ರೀಯ ಲವ್-ಬರ್ಡ್ಸ್ ಗಳ ಜೋಡಿಯಲ್ಲಿ ಈ ಜೋಡಿಯೂ ಹೆಸರೂ ಕೂಡ ಶಾಮೀಲಾಗಿದೆ.

Last Updated : Jan 13, 2020, 08:04 PM IST
ಶಾರ್ಟ್ಸ್ ಧರಿಸಿದ ಬಾಯ್ ಫ್ರೆಂಡ್, ಖುಲ್ಲಂ-ಖುಲ್ಲಾ ಬಾಲಿವುಡ್ ಬೆಡಗಿ ಹೇಳಿದ್ದೇನು? title=

ನವದೆಹಲಿ: ಬಾಲಿವುಡ್ ನಟ ದಿಶಾ ಪಟಾನಿ ಹಾಗೂ ಖ್ಯಾತ ನಟ ಟೈಗರ್ ಶ್ರಾಫ್ ಕಳೆದ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿರುವ 'ಲವ್-ಬರ್ಡ್ಸ್' ಜೋಡಿ ಇದಾಗಿದೆ. ಇತ್ತೀಚೆಗೆ ಈ ಇಬ್ಬರು ಒಟ್ಟಿಗೆ ವೆಕೇಶನ್ ಅಥವಾ ಸಮಯ ಕಳೆಯುವುದು ಕಂಡು ಬರುತ್ತದೆ. ಸದ್ಯ ಟೈಗರ್ ಶ್ರಾಫ್ ಅವರ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಇದರಲ್ಲಿ ದಿಶಾ ಪಟಾನಿ ಅವರ ಜೊತೆಗಿಲ್ಲ. ಆದರೆ, ಈ ಭಾವಚಿತ್ರದ ಮೇಲೆ ಕಾಮೆಂಟ್ ಮಾಡುವ ಮೂಲಕ ದಿಶಾ ಅಭಿಮಾನಿಗಳ ಈ ಕೊರತೆಯನ್ನು ದೂರ ಮಾಡಿದ್ದಾರೆ. ಏಕೆಂದರೆ, ಈ ಕಾಮೆಂಟ್ ನಲ್ಲಿ ದಿಶಾ ಖುಲ್ಲಂ ಖುಲ್ಲಾ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.

 
 
 
 

 
 
 
 
 
 
 
 
 

🌊

A post shared by Tiger Shroff (@tigerjackieshroff) on

ಈ ಫೋಟೋದಲ್ಲಿ ಟೈಗರ್ ಶ್ರಾಫ್ ಸಮುದ್ರದ ಕಡಲು ತೀರದಲ್ಲಿ ಶಾರ್ಟ್ ಧರಿಸಿದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೈಗರ್ ಅವರ ಈ ಫೋಟೋ ಅವರು ತುಂಬಾ ಕೂಲ್ ಆಗಿರುವುದನ್ನು ಒತ್ತಿ ಹೇಳುತ್ತಿದೆ. ಈ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಟೈಗರ್ ಅಭಿಮಾನಿಗಳು ಹೊಗಳಿಕೆಯ ಸುರಿಮಳೆಗೈಯಲಾರಂಭಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿಶಾ, FIRE ಇಮೋಜಿ ಹಂಚಿಕೊಳ್ಳುವ ಮೂಲಕ ತಮ್ಮ ಹೃದಯಕ್ಕೆ ತಗುಲಿರುವ ಪ್ರೀತಿಯ ಕಿಚ್ಚನ್ನು ವ್ಯಕ್ತಪಡಿಸಿದ್ದಾರೆ.

ಈ ಇಮೋಜಿ ಹಂಚಿಕೊಂಡಿರುವ ದಿಶಾ, ಕೇವಲ ಸನ್ನೆ ಮಾಡುವ ಮೂಲಕ ಟೈಗರ್ ಈ ಲುಕ್ ನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ದಿಶಾ ಅವರ ಜೊತೆಗೆ ಬಾಲಿವುಡ್ ನ ಹಲವು ಸೆಲಿಬ್ರಿಟಿಗಳು ಕೂಡ ಟೈಗರ್ ಅವರ ಈ ಭಾವಚಿತ್ರಕ್ಕೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಟೈಗರ್ ಅವರ ಫಿಟ್ನೆಸ್ ಅನ್ನು ಹೊಗಳಿದ್ದರೆ, ಕೆಲವರು ಟೈಗರ್ ಅವರನ್ನು 'ಛೋಟಾ ಹೃತಿಕ್' ಎಂದು ಕರೆದಿದ್ದಾರೆ.

ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಸದ್ಯ ಟೈಗರ್ ಶ್ರಾಫ್ ತಮ್ಮ ಮುಂಬರುವ ಚಿತ್ರ 'ಬಾಗಿ-3'ರ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಇನ್ನೊಂದೆಡೆ ದಿಶಾ ಕೂಡ ತಮ್ಮ ಮುಂಬರುವ ಚಿತ್ರ 'ಮಲಂಗ್'ನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಚಿತ್ರದ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಗೆ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Trending News