ಒಂದು ಕಾಲದಲ್ಲಿ ಸೌತ್‌ನ ಸೂಪರ್‌ ಸ್ಟಾರ್‌.. ವಿವಾಹಿತ ನಟನೊಂದಿಗೆ ಪ್ರೇಮಪಾಶಕ್ಕೆ ಬಿದ್ದು ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡ ನಟಿ ಈಕೆ!!

Famous South Actress: ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಅಷ್ಟು ಸುಲಭವಲ್ಲ.. ಯಶಸ್ಸು ಗಳಿಸಿದ ಮೇಲೆ ಅದನ್ನು ಉಳಿಸಿದಕೊಳ್ಳುವುದು ಇನ್ನೂ ಕಷ್ಟ.. ಇಂದು ನಾವು ಹೇಳಲು ಹೊರಟಿರುವ ನಟಿ ಒಂದು ಕಾಲದಲ್ಲಿ ದಕ್ಷಿಣದ ಸೂಪರ್‌ ಸ್ಟಾರ್‌ ಆಗಿದ್ದರು.. ಆದರೆ ಒಂದೇ ಒಂದು ತಪ್ಪಿನಿಂದ ಕೆರಿಯರ್‌ ನಾಶ ಮಾಡಿಕೊಂಡರು..   

Written by - Savita M B | Last Updated : May 18, 2024, 12:19 PM IST
  • ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ ಅನೇಕ ತಾರೆಯರಿದ್ದಾರೆ
  • ಇಂದು ನಾವು ನಿಮಗೆ ಸೌತ್ ಫಿಲ್ಮ್ ಇಂಡಸ್ಟ್ರಿಯ ನಟಿಯೊಬ್ಬರ ಬಗ್ಗೆ ಹೇಳಲಿದ್ದೇವೆ..
ಒಂದು ಕಾಲದಲ್ಲಿ ಸೌತ್‌ನ ಸೂಪರ್‌ ಸ್ಟಾರ್‌.. ವಿವಾಹಿತ ನಟನೊಂದಿಗೆ ಪ್ರೇಮಪಾಶಕ್ಕೆ ಬಿದ್ದು ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡ ನಟಿ ಈಕೆ!! title=

 South Actress Nikita Thukral: ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ ಅನೇಕ ತಾರೆಯರಿದ್ದಾರೆ.. ಆದರೆ ಅವರು ಕೆಲವು ವರ್ಷಗಳ ನಂತರ ತಮ್ಮ ಸ್ಟಾರ್‌ಡಮ್ ಅನ್ನು ಕಳೆದುಕೊಂಡಿದ್ದಾರೆ. ಇಂದು ನಾವು ನಿಮಗೆ ಸೌತ್ ಫಿಲ್ಮ್ ಇಂಡಸ್ಟ್ರಿಯ ನಟಿಯೊಬ್ಬರ ಬಗ್ಗೆ ಹೇಳಲಿದ್ದೇವೆ..  

ನಾವು ಹೇಳ ಹೊರಟಿರುವ ನಟಿ ಬೇರೆ ಯಾರೂ ಅಲ್ಲ ನಿಕಿತಾ ತುಕ್ರಾಲ್. ನಿಕಿತಾ ಒಂದು ಕಾಲದಲ್ಲಿ ದಕ್ಷಿಣದ ಟಾಪ್ ನಟಿ. ಮುಂಬೈನಲ್ಲಿ ಬೆಳೆದ ಇವರು ನಗರದ ಕಿಶಿಂಚಂದ್ ಚೆಲ್ಲರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಅಧ್ಯಯನ ಮಾಡಿದ್ದರು. ನಿರ್ಮಾಪಕ ಡಿ ರಾಮಾನಾಯ್ಡು ಅವರ 'ಹೈ' (2002) ಸಿನಿಮಾದ ಮೂಲಕ ನಿಕಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು.. ಇದರ ನಂತರ, ನಿಕಿತಾ ತುಕ್ರಾಲ್ ಅವರ ಅದೃಷ್ಟ ಮಿಂಚಿ ಹಿಂತಿರುಗಿ ನೋಡಲಿಲ್ಲ..

ಇದನ್ನೂ ಓದಿ-Anushka Shetty: ಮದುವೆಗೆ ಸಜ್ಜಾಗುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿಜವಾದ ವಯಸ್ಸೆಷ್ಟು ಗೊತ್ತೇ !

ಹತ್ತಾರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಿಕಿತಾ ತುಕ್ರಾಲ್ ಅದ್ಭುತ ನಟಿ ಎನಿಸಿಕೊಂಡರು.. ಆದರೆ ವಿವಾಹಿತ ನಟನೊಂದಿಗೆ ಸಂಬಂಧ ಹೊಂದಿದ ನಂತರ ಅವರ ವೃತ್ತಿಜೀವನವು ನಾಶವಾಯಿತು.

ನಟಿ ನಿಕಿತಾ ಅವರ ಮೇಲೆ ಸಾಕಷ್ಟು ಗಂಭೀರ ಆರೋಪಗಳು ಕೇಳಿ ಬಂದಿದ್ದವು.. ಅವರ ಸಂಬಂಧದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬಗ್ಗೆ ಸಾಕಷ್ಟು ಗಲಾಟೆಗಳು ನಡೆದಿದ್ದವು.. ಇಷ್ಟೇ ಅಲ್ಲ  ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಿಕಿತಾ ತುಕ್ರಾಲ್ ಅವರನ್ನು ಮೂರು ವರ್ಷಗಳ ಕಾಲ ಚಿತ್ರರಂಗದಿಂದ ನಿಷೇಧಿಸಿತ್ತು.. ವಿವಾದಾತ್ಮಕ ಸೆಲೆಬ್ ಆಗಿದ್ದ ನಿಕಿತಾ ತುಕ್ರಾಲ್ ಮೇಲಿನ ನಿಷೇಧವನ್ನು ತೆಗೆದುಹಾಕಿದರೂ ಅವರೊಂದಿಗೆ ಸಿನಿಮಾ ಮಾಡಲು ಯಾವ ನಿರ್ಮಾಪಕ, ನಿರ್ದೇಶಕರು ಮುಂದೆ ಬರಲಿಲ್ಲ.. 

ಇದನ್ನೂ ಓದಿ-ನಟಿ ಪವಿತ್ರ ಜಯರಾಮ್ ಸಾವಿನಿಂದ ನೊಂದ ಸ್ನೇಹಿತ ನಟ ಚಂದು ಆತ್ಮಹತ್ಯೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News