close

News WrapGet Handpicked Stories from our editors directly to your mailbox

ನಾನು ಯಾವಾಗಲೂ ಲತಾ ಮಂಗೇಶ್ಕರ್ ಜೂನಿಯರ್ - ರಾನು ಮೊಂಡಲ್

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈರಲ್ ಗಾಯನದಿಂದಾಗಿ ಬೆಳಕಿಗೆ ಬಂದ ರಾನು ಮೊಂಡಲ್ ಈಗ ತಾವು ಯಾವಾಗಲೂ ಲತಾ ಮಂಗೇಶ್ಕರ್ ಅವರ ಜೂನಿಯರ್ ಎಂದು ಹೇಳಿಕೆ ನೀಡಿದ್ದಾರೆ.

Updated: Sep 14, 2019 , 09:00 PM IST
 ನಾನು ಯಾವಾಗಲೂ ಲತಾ ಮಂಗೇಶ್ಕರ್ ಜೂನಿಯರ್ - ರಾನು ಮೊಂಡಲ್
file photo

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈರಲ್ ಗಾಯನದಿಂದಾಗಿ ಬೆಳಕಿಗೆ ಬಂದ ರಾನು ಮೊಂಡಲ್ ಈಗ ತಾವು ಯಾವಾಗಲೂ ಲತಾ ಮಂಗೇಶ್ಕರ್ ಅವರ ಜೂನಿಯರ್ ಎಂದು ಹೇಳಿಕೆ ನೀಡಿದ್ದಾರೆ.

ಲತಾಜಿ ಅವರ ವಯಸ್ಸಿನ ವಿಚಾರದಲ್ಲೂ ನಾನು ಚಿಕ್ಕವಳು, ನಾನು ಯಾವಾಗಲೂ ಅವರ ಜೂನಿಯರ್ ಆಗಿರುತ್ತೇನೆ. ಬಾಲ್ಯದಿಂದಲೂ ನನಗೆ ಲತಾಜಿ ಅವರ ಧ್ವನಿ ಎಂದರೆ ಇಷ್ಟ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.

ರಾನು ಮೊಂಡಲ್ ಈಗಾಗಲೇ ಬಾಲಿವುಡ್ ನ ಖ್ಯಾತ ಗಾಯಕ ಹಿಮೇಶ್ ರೇಶಮಿಯಾ ಅವರೊಂದಿಗೆ ಮೂರು ಹಾಡುಗಳನ್ನು ರಿಕಾರ್ಡ್ ಮಾಡಿದ್ದಾರೆ. ರೇಲ್ವೆ ಸ್ಟೇಶನ್ ವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡು ಹಾಡಿದ ನಂತರ ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಬಗ್ಗೆ ಲತಾ ಮಂಗೇಶ್ಕರ್ ಅವರನ್ನು ಪ್ರತಿಕ್ರಿಯಿಸಿದಾಗ ಅವರು ಸಂತಸಪಟ್ಟರೂ ಸಹಿತ ಸ್ವಲ್ಪ ಅಸಮಾಧಾನವು ಎನ್ನುವಂತೆ ತೋರಿತ್ತು. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಲತಾ ಮಂಗೇಶ್ಕರ್ ಅವರ ನಿಲುವಿಗೆ ಕಿಡಿಕಾರಿದ್ದರು.

'ನನ್ನ ಹೆಸರಿನಿಂದ ಹಾಗೂ ಕಾರ್ಯದಿಂದ ಯಾರಿಗಾದೂ ಲಾಭವಾದಲ್ಲಿ ಅದು ಒಳ್ಳೆಯದು, ಆದರೆ ನನಗೆ ಅನಿಸುತ್ತೆ ಇನ್ನೊಬ್ಬರನ್ನು ಅನುಕರಿಸುವುದು ಯಶಸ್ಸಿಗೆ ಒಳ್ಳೆಯದಲ್ಲ, ನನ್ನ ಅಥವಾ ಮುಖೇಶ್, ಆಶಾ ಬೋಸ್ಲೆ ಅವರ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯತೆಯನ್ನು ಹೊಂದುವುದು  ತಕ್ಷಣ ಗಮನ ಸೆಳೆಯಬಹುದು ಆದರೆ ಅದು ದೀರ್ಘಾವದಿಯಲ್ಲಿ ಒಳ್ಳೆಯದಲ್ಲ ಎಂದು ಲತಾ ಮಂಗೇಶ್ಕರ್ ಹೇಳಿದ್ದರು.