ಎಂಟು ಭಾಷೆಗಳಲ್ಲಿ.. ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ರೆಕಾರ್ಡ್ ಬ್ರೇಕ್" ಸಿನಿಮಾ!

Record Break Movie: ತೆಲುಗಿನಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿರುವ, ಈವರೆಗೂ ತೆಲುಗು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಚಲನಚಿತ್ರಗಳನ್ನು ವಿತರಣೆ ಮಾಡಿರುವ ಚಲದವಾಡ ಶ್ರೀನಿವಾಸರಾವ್ ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಚಿತ್ರ "ರೆಕಾರ್ಡ್ ಬ್ರೇಕ್". 

Written by - YASHODHA POOJARI | Last Updated : Feb 26, 2024, 12:00 PM IST
  • ಪ್ಯಾನ್ ಇಂಡಿಯಾ ಚಿತ್ರ "ರೆಕಾರ್ಡ್ ಬ್ರೇಕ್".
  • ಎಲ್ಲಾ ಭಾಷೆಗಳಲ್ಲೂ ಭಾರತದಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ.
 ಎಂಟು ಭಾಷೆಗಳಲ್ಲಿ.. ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ರೆಕಾರ್ಡ್ ಬ್ರೇಕ್" ಸಿನಿಮಾ!  title=

Record Break: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಮಾರ್ಚ್ 8, ಮಹಾ ಶಿವರಾತ್ರಿ ದಿನದಂದು ಎಲ್ಲಾ ಭಾಷೆಗಳಲ್ಲೂ ಭಾರತದಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ. ಈ ಚಿತ್ರದ ಕುರಿತು ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು.

ನಾನು ಮೂಲತಃ ಟಿಂಬರ್ ಉದ್ಯಮಿ.  ಅಯೋಧ್ಯಾ ಶ್ರೀರಾಮನ ದೇವಸ್ಥಾನ ಸೇರಿದಂತೆ ಅನೇಕ ಜಗತ್ಪ್ರಸಿದ್ಧ ದೇವಸ್ಥಾನಗಳಿಗೆ ಮರ ಒದಗಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅನೇಕ ಭಾಷೆಗಳ ಚಿತ್ರಗಳನ್ನು ವಿತರಣೆ ಕೂಡ ಮಾಡಿದ್ದೇವೆ.

ದುಡ್ಡು ಮಾಡುವುದಕ್ಕಿಂತ ನೋಡುಗರಿಗೆ ಒಳ್ಳೆಯ ಚಿತ್ರ ಕೊಡುವ ಆಸೆ ನನ್ನದು. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, ಚಂಟಿ ಹಾಗೂ ಬಂಟಿ ಎಂಬ ಅನಾಥ ಹುಡುಗರಿಬ್ಬರು ತಾವು ಅಂದುಕೊಂಡದ್ದನ್ನು ಹಾಗೂ ಯಾರು ನಿರೀಕ್ಷಿಸದ್ದನ್ನು ಸಾಧಿಸುವ ಕಥೆಯಿದು. ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಂಟಿ ಹಾಗೂ ಬಂಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಗ್ದಾ ಇಫ್ತೇಕರ್ ಈ ಚಿತ್ರದ ನಾಯಕಿ. ಸತ್ಯಕೃಷ್ಣ, ಸಂಜನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 

ಇದನ್ನೂ ಓದಿ-Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!

ಚಿತ್ರ ಮಾರ್ಚ್‌ 8ರಂದು ಮಹಾ ಶಿವರಾತ್ರಿ ಶುಭದಿವಸ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಲಿ, ಒಡಿಯಾ ಭಾಷೆಗಳಲ್ಲಿ ಏಕಕಾಲಕ್ಕೆ ಭಾರತದಾದ್ಯಂತ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಿ. ಹಾರೈಸಿ ಎಂದರು ನಿರ್ಮಪಕ & ನಿರ್ದೇಶಕ ಚಲದವಾಡ ಶ್ರೀನಿವಾಸರಾವ್.

ನಾಯಕರಾದ ನಿಹಾರ್, ನಾಗಾರ್ಜುನ, ನಾಯಕಿ ರಗ್ದಾ ಇಫ್ತೇಕರ್, ನಟಿ ಸತ್ಯಕೃಷ್ಣ ಹಾಗೂ ನಟ ಪ್ರಸನ್ನ ಕುಮಾರ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.  ನಿರ್ದೇಶಕ ಅಜಯ್ ಕುಮಾರ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News