ಆದಿಪುರುಷ್‌ ಚಿತ್ರ ನಿಷೇದಕ್ಕೆ ಹೆಚ್ಚಿದ ಆಗ್ರಹ..!

 Adipurush : ರಾಮಾಯಣದ ಕಥಾಹಂದರವನ್ನು ಹೊಂದಿರುವ ಆದಿಪುರುಷ್‌ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸಿನಿಮಾ ಪ್ರರ್ಶನವನ್ನು ನಿಷೇದಿಸುವಂತೆ ಆಗ್ರಹಿಸುತ್ತಿದ್ದಾರೆ.   

Written by - Savita M B | Last Updated : Jun 19, 2023, 04:09 PM IST
  • ಆದಿಪುರುಷ್‌ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದಿದೆ.
  • ಚಿತ್ರ ರಿಲೀಸ್‌ ಆಗಿ 3 ದಿನಗಳಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆಗಳನ್ನು ಉಡೀಸ್‌ ಮಾಡುತ್ತಿದೆ.
  • ಸಿನಿಮಾ ಪ್ರದರ್ಶನವನ್ನು ತಡೆಯಬೇಕೆಂದು ಟ್ವಿಟರ್‌ನಲ್ಲಿ "ಬ್ಯಾನ್‌ ಆದಿಪುರುಷ್‌ ಮೂವಿ" ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಆದಿಪುರುಷ್‌ ಚಿತ್ರ ನಿಷೇದಕ್ಕೆ ಹೆಚ್ಚಿದ ಆಗ್ರಹ..!  title=

Ban Adipurush Movie Hashtag : ಓಂ ರಾವುತ್‌ ನಿರ್ದೇಶನದ, ತೆಲುಗಿನ ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಆದಿಪುರುಷ್‌ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದಿದೆ. ಚಿತ್ರ ರಿಲೀಸ್‌ ಆಗಿ 3 ದಿನಗಳಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆಗಳನ್ನು ಉಡೀಸ್‌ ಮಾಡುತ್ತಿದೆ. 

ಇನ್ನು ಈ ಸಿನಿಮಾ ಪ್ರದರ್ಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಸಿನಿಮಾ ಪ್ರದರ್ಶನವನ್ನು ತಡೆಯಬೇಕೆಂದು ಟ್ವಿಟರ್‌ನಲ್ಲಿ "ಬ್ಯಾನ್‌ ಆದಿಪುರುಷ್‌ ಮೂವಿ" ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಮುಂಬೈ ಛತ್ತೀಸ್‌ಘಡದ ವಿಲಾಸ್‌ಪುರ್‌ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ಸಹ ನಡೆಯುತ್ತಿವೆ. 

ಇದನ್ನೂ ಓದಿ-ರಜನಿಕಾಂತ್‌, ಪ್ರಭಾಸ್‌ ಇಬ್ಬರೂ ಅಲ್ಲ; ಭಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಬಾರಿ 200 ಕೋಟಿ ಗಳಿಸಿದ್ದು ಈ ನಟನ ಸಿನಿಮಾಗಳು..!

ಈ ಆದಿಪುರುಷ್‌ ಸಿನಿಮಾ ರಾಮಾಯಣದ ಕಥಾಹಂದರವನ್ನು ಒಳಗೊಂಡಿದೆ ಎಂಬಕಾರಣಕ್ಕೆ ಬೆಂಬಲಿಸಿದವರೇ ಇದೀಗ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. 28 ಸಾವಿರಕ್ಕೂ ಹೆಚ್ಚು ಟ್ವಿಟರ್‌ ಬಳಕೆದಾರರು "ಬ್ಯಾನ್‌ ಆದಿಪುರುಷ್‌ ಮೂವಿ" ಹ್ಯಾಷ್‌ ಟ್ಯಾಗ್‌ ಬಳಸಿ, ಚಿತ್ರದಲ್ಲಿನ ವಿವಾದಾತ್ಮಕ ಸನ್ನಿವೇಶ ಮತ್ತು ಸಂಭಾಷಣೆಗಳನ್ನು ಉಲ್ಲೇಖಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿರುವ ಈ ಚಿತ್ರವನ್ನು ದೇಶಾದ್ಯಂತ ನಿಷೇಧಿಸಿ ಎಂದು ಆಗ್ರಹಿಸಿದ್ದಾರೆ.

ಮುಂಬೈನ ನಾಲಾಸೋಪಾರ ಮಲ್ಟಿಪ್ಲೆಕ್ಸ್‌ನಲ್ಲಿ ಆದಿಪುರುಷ್‌ ಸಿನಿಮಾ ಪ್ರದರ್ಶನ ನಡೆಯುತ್ತಿರುವಾಗಲೇ ಬಲಪಂಥಿಯ ಸಂಘಟನೆಗಳು ಮಲ್ಟಿಪ್ಲೆಕ್ಸ್‌ನ ಒಳಗೆ ನುಗ್ಗಿದ್ದಾರೆ. ಸಿನಿಮಾ ಪ್ರದರ್ಶನವನ್ನು ತಡೆಹಿಡಿಯುವಂತೆ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಿನಿಮಾ ನೋಡುತ್ತಿದ್ದವರ ಮೇಲೂ ಹಿಂದೂ ದೇವತೆಗಳಿಗೆ ಅಪಮಾನ ಮಾಡಿರುವ ಈ ಚಿತ್ರವನ್ನು ಬೆಂಬಲಿಸುತ್ತಿರುವ ನಿಮಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. 

ಇದನ್ನೂ ಓದಿ-Priyanka Chopra : ಕಿರಿಯನಾದ್ರೂ ಜವಾಬ್ದಾರಿಯುತ ಅಪ್ಪ; ನಿಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ನಿಕ್‌ ..!

ಪ್ರವೀಣ್‌ ಕುಮಾರ್‌ ಎಂಬುವವರು ಟ್ವೀಟ್‌ ಮಾಡಿ ಆದಿಪುರುಷ್‌ ಚಿತ್ರವನ್ನು ನಿಷೇಧಸಿ, ದಶಕಗಳ ಹಿಂದಿನ ರಾಮಾಯಣ ಧಾರಾವಾಹಿಯೇ ಉತ್ತಮವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಡಿದ್ದಾರೆ. ಜೊತೆಗೆ ಈ ಸಿನಿಮಾಗೆ ಸಂಭಾಷಣೆ ಬರೆದಿರುವ ಮನೋಜ್‌ ಮುಂತಾಶಿರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News