ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ : ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಯು ಸೂರ್ಯಘರ್ ಅರಮನೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಉಪಸ್ಥಿತಿಯೊಂದಿಗೆ ವಿವಾಹವಾಗಲಿದ್ದಾರೆ. ಇದೀಗ ಫೆಬ್ರವರಿ 7 ರಂದು ಅದ್ಧೂರಿ ವಿವಾಹ ನಡೆಯಲಿದೆ ಎಂದು ವರದಿಯಾಗಿದೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಕುಟುಂಬಗಳೊಂದಿಗೆ ಫೆಬ್ರವರಿ 4 ರಂದು ಜೈಸಲ್ಮೇರ್ ತಲುಪಿದರು. ಫೆಬ್ರವರಿ 5 ರಂದು ದಂಪತಿಗಳು ತಮ್ಮ ಪೂರ್ವ ವಿವಾಹದ ಕಾರ್ಯಕ್ರಮಗಳನ್ನು ತಮ್ಮ ಮೆಹೆಂದಿ ಸಮಾರಂಭದೊಂದಿಗೆ ಪ್ರಾರಂಭಿಸಿದರು. ಈ ಹಿಂದೆ ಫೆಬ್ರವರಿ 6 ರಂದು ಮದುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅವರ ಮದುವೆ ದಿನಾಂಕ ಫೆಬ್ರವರಿ 7 ರಂದು ಎಂದು ವರದಿಯಾಗಿದೆ. ಪ್ರೇಮ ಪಕ್ಷಿಗಳ ಹಲ್ದಿ ಸಮಾರಂಭವು ಫೆಬ್ರವರಿ 6 ರಂದು ಬೆಳಿಗ್ಗೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ :Sidharth Kiara Baby : ಈ ದಿನದಂದು ತುಂಬಲಿದೆಯಂತೆ ಕಿಯಾರಾ ಮಡಿಲು! ಹೀಗಂತ ಹೇಳಿದವರ್ಯಾರು ಗೊತ್ತಾ?
ಫೆಬ್ರವರಿ 5 ರಂದು ಸಿದ್ಧಾರ್ಥ್ ಮತ್ತು ಕಿಯಾರಾ ಮೆಹೆಂದಿ ಕಾರ್ಯಕ್ರಮ ನಡೆಯಿತು. ಸ್ನೇಹಿತರು, ಸಂಬಂದಿಕರು ಎಂಜಾಯ್ ಮಾಡಿದ್ದಾರೆ. ಸಿದ್ಧಾರ್ಥ್ ಮತ್ತು ಕಿಯಾರಾ ಕೂಡ ಸಂಗೀತ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು. ಮರುಭೂಮಿ ಸಫಾರಿಯಿಂದ ಹಿಡಿದು ಆಹಾರ ಮಳಿಗೆಗಳವರೆಗೆ, ದಂಪತಿಗಳು ಜೈಸಲ್ಮೇರ್‌ನಲ್ಲಿ ತಮ್ಮ ಅತಿಥಿಗಳನ್ನು ರಾಯಲ್ ಆಗಿ ಉಪಚರಿಸಲು ಸಿದ್ಧತೆ ಮಾಡಿದ್ದಾರೆ.
ಇದನ್ನೂ ಓದಿ : Shah Rukh Khan Fitness: 57 ನೇ ವಯಸ್ಸಿನಲ್ಲೂ ಇಷ್ಟೊಂದು ಫಿಟ್ ಆಗಿರಲು ಶಾರುಖ್ ಖಾನ್ ಸೇವಿಸುತ್ತಾರೆ ಈ ಆಹಾರ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.