ದಬಾಂಗ್ 3 : ಬಲ್ಲಿ ಸಿಂಗ್ ಅವತಾರದಲ್ಲಿ ಕಿಚ್ಚನ ಖದರ್

ಕನ್ನಡದಲ್ಲಿ ಸದಾ ಬ್ಯೂಸಿ ಇರುವ ನಟರಲ್ಲಿ ಸುದೀಪ್ ಎಂದರೆ ತಪ್ಪಾಗಲಾರದು. ಕೇವಲ ದಕ್ಷಿಣ ಭಾರತವಷ್ಟೇ ಅಲ್ಲದೆ ಇಡೀ ಭಾರತೀಯ ಸಿನಿಮಾದಲ್ಲಿ ಸುದೀಪ್ ಗೆ ಇರುವ ಸ್ಥಾನ ಅನನ್ಯ ಎನ್ನಬಹುದು.

Last Updated : Oct 8, 2019, 01:34 PM IST
ದಬಾಂಗ್ 3 : ಬಲ್ಲಿ ಸಿಂಗ್ ಅವತಾರದಲ್ಲಿ ಕಿಚ್ಚನ ಖದರ್  title=
Photo courtesy: Twitter

ಬೆಂಗಳೂರು: ಕನ್ನಡದಲ್ಲಿ ಸದಾ ಬ್ಯೂಸಿ ಇರುವ ನಟರಲ್ಲಿ ಸುದೀಪ್ ಎಂದರೆ ತಪ್ಪಾಗಲಾರದು. ಕೇವಲ ದಕ್ಷಿಣ ಭಾರತವಷ್ಟೇ ಅಲ್ಲದೆ ಇಡೀ ಭಾರತೀಯ ಸಿನಿಮಾದಲ್ಲಿ ಸುದೀಪ್ ಗೆ ಇರುವ ಸ್ಥಾನ ಅನನ್ಯ ಎನ್ನಬಹುದು.

ಇದಕ್ಕೆ ನಿದರ್ಶನವೆನ್ನುವಂತೆ ಇತ್ತೀಚಿಗೆ ಬಂದಿರುವ ಅವರ ಸಿನಿಮಾಗಳನ್ನೇ ಗಮನಿಸಿದಾಗ ಈ ಸಂಗತಿ ಸ್ಪಷ್ಟವಾಗುತ್ತದೆ. ಪೈಲ್ವಾನ್, ಸೈರಾ ನರಸಿಂಹ ರೆಡ್ಡಿ ಚಿತ್ರಗಳು ಇನ್ನು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿವೆ. ಸೈರಾದಲ್ಲಿ ಅವುಕು ರಾಜನಾಗಿ ಕಾಣಸಿಕೊಂಡಿರುವ ಸುದೀಪರ ಅಭಿನಯ ಮನೋಜ್ಞವಾಗಿದೆ.

ಈಗ ಇನ್ನೊಂದು ಕಳಸವೆನ್ನುವಂತೆ ಸುದೀಪ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಸಿನಿಮಾದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈಗ  ಈ ಚಿತ್ರದ ಮೋಷನ್ ಪೋಸ್ಟರ್ ನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಸಲ್ಮಾನ್ ಖಾನ್ 'ವಿಲನ್ ಎಷ್ಟು ದೊಡ್ಡವನಾಗಿದ್ದರೆ ಫೈಟ್ ಮಾಡಲು ಇನ್ನು ಖುಷಿಯಾಗುತ್ತದೆ' ಎಂದು ಹೇಳಿ ಸುದೀಪ್ ರನ್ನು  ಬಲ್ಲಿ ಸಿಂಗ್ ಪಾತ್ರದಲ್ಲಿ ಪರಿಚಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸುದೀಪ್ 'ಈ ಒಂದು ಸಂದರ್ಭದಲ್ಲಿ ಜಗಳವಾಡುವ ಮಾತು ಬರುವುದಿಲ್ಲ ಸರ್, ಸಮಸ್ಯೆ ಏನೆಂದರೆ ಹಿರೋ ಮೂಲಕ ವಿಲನ್ ಮೇಲೆಯೂ ಕೂಡ ಪ್ರೀತಿ ಹುಟ್ಟುತ್ತದೆ. ಈ ಚಿತ್ರದಲ್ಲಿ ನಟಿಸಿರುವುದು ಮತ್ತು ವೇದಿಕೆ ಹಂಚಿಕೊಂಡಿರುವುದು ಅದ್ಬುತ, ಈ ಚಿತ್ರದಲ್ಲಿನ ಎಲ್ಲ ಎಲ್ಲ ಕ್ಷಣಗಳು ಸ್ಮರಣೀಯ 'ಎಂದು ಟ್ವೀಟ್ ಮಾಡಿದ್ದಾರೆ.
 

Trending News