ಮಗಳನ್ನು ಬೀದಿಗೆ ತಳ್ಳಿದ ʼಜಾಕಿ ಚಾನ್ʼ..! ಅನಾಥೆಯಂತೆ ಅಲೆದಾಡುತ್ತಿದ್ದಾಳೆ‍ ಶ್ರೀಮಂತ ನಟನ ಪುತ್ರಿ

Jachie Chan Daughter : ಹಾಲಿವುಡ್‌ ಖ್ಯಾತ ನಟ ಜಾಕಿ ಚಾನ್ ತಮ್ಮ ಮಗಳನ್ನು ನಿರ್ಲಕ್ಷಿಸಿದ್ದಾರೆ ಇದರಿಂದಾಗಿ ಆಕೆ ಅನಾಥಳಂತೆ ಬದುಕುತ್ತಿದ್ದಾಳೆ ಎಂಬ ಸುದ್ದಿಯಾಗಿದೆ. ಶ್ರೀಮಂತ ನಟ ತನ್ನ ಪುತ್ರಿಯನ್ನು ಬೀದಿಗೆ ತಳ್ಳಿದ್ದಾದ್ರೂ ಏಕೆ ಎನ್ನುವ ಕುರಿತು ಚರ್ಚೆ ನಡೆಯತ್ತಿವೆ.

Written by - Krishna N K | Last Updated : Jul 5, 2023, 04:50 PM IST
  • ಹಾಲಿವುಡ್‌ ಖ್ಯಾತ ನಟ ಜಾಕಿ ಚಾನ್ ತಮ್ಮ ಮಗಳನ್ನು ನಿರ್ಲಕ್ಷಿಸಿದ್ದಾರೆ.
  • ನಟ ತನ್ನ ಸ್ವಂತ ಮಗಳನ್ನು ಅನಾಥಳನ್ನಾಗಿ ಬೀದಿಗೆ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
  • ಜಾಕಿ ಚಾನ್ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮ ಮಗಳ ಬಗ್ಗೆ ಮಾತನಾಡುವುದಿಲ್ಲ.
ಮಗಳನ್ನು ಬೀದಿಗೆ ತಳ್ಳಿದ ʼಜಾಕಿ ಚಾನ್ʼ..! ಅನಾಥೆಯಂತೆ ಅಲೆದಾಡುತ್ತಿದ್ದಾಳೆ‍ ಶ್ರೀಮಂತ ನಟನ ಪುತ್ರಿ title=

Jachie Chan family : ಜಾಕಿ ಚಾನ್ ಜಗತ್ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಕಲಾವಿದ ಮತ್ತು ಖ್ಯಾತ ನಟ. ಜಾಕಿ ಚಿತ್ರಗಳನ್ನು ಇಂದಿಗೂ ಜನ ಇಷ್ಟ ಪಡುತ್ತಾರೆ. ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ದೃಶ್ಯಗಳನ್ನು ಮಾಡುವ ಜಾಕಿ ಕುರಿತ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟ ತನ್ನ ಸ್ವಂತ ಮಗಳನ್ನು ಅನಾಥಳನ್ನಾಗಿ ಬೀದಿಗೆ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಹೌದು.. 90 ರ ದಶಕದ ಮಕ್ಕಳ ಹೀರೋಗಳ ಸಾಲಿನಲ್ಲಿ ಮೊದಲು ಎದ್ದುಕಾಣುವ ನಟ ಅಂದ್ರೆ ಜಾಕಿ ಚಾನ್. ಜಾಕಿ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 1954 ರಲ್ಲಿ ಚೀನಾದಲ್ಲಿ ಜನಿಸಿದ ಅವರು 1960 ರಿಂದ ಇಲ್ಲಿಯವರೆಗೆ ಸಾಕಷ್ಟು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರೂಪೇಶ್ ಶೆಟ್ಟಿ ನಟನೆ ʼಸರ್ಕಸ್ʼ ಸಿನಿಮಾ ಸಕ್ಸಸ್; ಸಂಭ್ರಮದಲ್ಲಿ ಚಿತ್ರತಂಡ..!

ದಿವಂಗತ ಬ್ರೂಸ್ ಲೀ ಅವರನ್ನು ಗುರುವಾಗಿಸಿಕೊಂಡಿದ್ದ ನಟ ಜಾಕಿ ತಮ್ಮ ಸಿನಿಮಾಗಳಲ್ಲಿ ಫೈಟ್‌ಗಳ ಜೊತೆ ಹಾಸ್ಯ ಬೆರೆಸಿ ಸಿನಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ನಿಪುಣರು. ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಯಾರೂ ಮುಟ್ಟದ ದಾಖಲೆಯನ್ನು ಸಾಧಿಸಿದ ಏಕೈಕ ನಟ. ಈಗ ಅವರ ಕುರಿತಾದ ಸುದ್ದಿಯೊಂದು ಅನೇಕರನ್ನು ಬೆಚ್ಚಿಬೀಳಿಸಿದೆ. 

1999 ರಲ್ಲಿ ಜಾಕಿ ಚಾನ್‌ಗೆ ಮಗಳಿದ್ದಳು. ಈಕೆಯ ಹೆಸರು ಎಟ್ಟಾಂಗ್‌ ಚೋಕ್ ಲಾಮ್. ಅವಳ ಜನನದ ಸುದ್ದಿ ಬಿಟ್ಟರೆ ಅವಳ ಬಗ್ಗೆ ಹೆಚ್ಚು ಯಾರಿಗೂ ತಿಳಿದಿಲ್ಲ. ಜಾಕಿ ಚಾನ್ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮ ಮಗಳ ಬಗ್ಗೆ ಮಾತನಾಡುವುದಿಲ್ಲ. ಆರಂಭದಲ್ಲಿ ಇದರ ಕಾರಣ ಯಾರಿಗೂ ತಿಳಿದಿರಲಿಲ್ಲ.

ಇದನ್ನೂ ಓದಿ: ಹೊಸ ಸಿನಿಮಾಗಳಿಗೆ ಸಹಿ ಹಾಕದ ಸಮಂತಾ..! ʼಶಾಕುಂತಲೆʼ ನಿರ್ಧಾರಕ್ಕೆ ಕಾರಣ ಇಲ್ಲಿದೆ..

ಜಾಕಿ ಚಾನ್ ಅವರ ಮಗಳು, ಭಿನ್ನಲಿಂಗೀಯ. ಅವಳು ಮಹಿಳೆಯನ್ನು ಪ್ರೀತಿಸುತ್ತಿದ್ದಳು. ಈ ಕಾರಣದಿಂದಾಗಿ, ಜಾಕಿ ಚಾನ್ ಅವರನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಹೇಳಲಾಗುತ್ತದೆ. ತರುವಾಯ, ಜಾಕಿ ಚಾನ್ ತನ್ನ ಮಗಳನ್ನು ಕೆಲವು ವರ್ಷಗಳ ಹಿಂದೆ ಮನೆಯಿಂದ ಹೊರಹಾಕಿದರು ಹೇಳಲಾಗುತ್ತದೆ. 

ಇನ್ನು ಇತ್ತೀಚಿಗೆ ಜಾಕಿ ರೀಲ್‌ ಒಂದನ್ನು ಹಂಚಿಕೊಂಡಿದ್ದರು. ರೈಡ್ ಆನ್ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಮಗಳ ಜೊತೆ ಕುಳಿತಿದ್ದು ವೀಡಿಯೊದಲ್ಲಿದೆ. ಇದನ್ನು ನೋಡಿದ ನೆಟಿಜನ್ಸ್ ಜಾಕಿಯನ್ನು ದ್ವೇಷಿಸಲು ಆರಂಭಿಸಿದ್ದಾರೆ. ಕಾರಣ ಆ ವಿಡಿಯೋದಲ್ಲಿರುವುದು ಅವರ ಮಗಳಲ್ಲ ಎಂಬುದು ಬಹಿರಂಗವಾಗಿದೆ. ಈ ಸುದ್ದಿ ತಿಳಿದ ನಂತರ ನೆಟ್ಟಿಗರು ನಿಜವಾದ ಜಾಕಿಯ ಮಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. 

ಇದನ್ನೂ ಓದಿ: BADʼ ಸಿನಿಮಾದ ಫಸ್ಟ್ ಲುಕ್ ರಿಲೀಸ್‌ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್..!

ಜಾಕಿ ಚಾನ್‌ನ ಮಗಳು ತನ್ನ ಗೆಳತಿಯನ್ನು ಮದುವೆಯಾಗಿ ಕೆನಡಾದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ಅಭಿಮಾನಿಗಳು ಅವರ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ವರದಿ ಮಾಡುತ್ತಿದ್ದಾರೆ. ಇದರ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ ಜಾಕಿ ಚಾನ್‌ನ ಮಗಳು ಇರಲು ಮನೆಯಿಲ್ಲದೆ ರಸ್ತೆಯಲ್ಲಿ ಅಲೆದಾಡುವ ದೃಶ್ಯಗಳನ್ನು ಒಳಗೊಂಡಿತ್ತು. ಈ ನಿಟ್ಟಿನಲ್ಲಿ ಜಾಕಿ ಮಗಳ ಗೆಳತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಂದೆ-ತಾಯಿ ಬಲವಂತದಿಂದ ಈ ಸ್ಥಿತಿಗೆ ಬಂದಿರುವುದಾಗಿ ತಿಳಿಸಿದ್ದಾರೆ. 

ಇದುವರೆಗೂ ತಮ್ಮ ಬದುಕಿನ ಭಾಗವಾಗಿದ್ದ ಜಾಕಿ ಚಾನ್ ಅಭಿಮಾನಿಗಳಿಗೆ ಈ ವಿಚಾರ ಕೇಳಿ ನಿರಾಸೆಯಾಗಿದೆ. ಅವರು ಒಳ್ಳೆಯ ನಟರಾಗಿರಬಹುದು ಆದರೆ ಒಳ್ಳೆಯ ತಂದೆ ಅಲ್ಲ ಎಂದು ಕೆಲವು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ. ಜಾಕಿ ಚಾನ್ $400 ಮಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News