ಕೇರಳ ದೇವಸ್ಥಾನದಲ್ಲಿ ಖುಷ್ಬೂ...! ಕಾಲು ತೊಳೆದು ನಾರಿ ಪೂಜೆ

Khushboo in Kerala temple: ನಟಿ ಖುಷ್ಬು ಒಂದು ಕಾಲದ ಸೌತ್‌ ಇಂಡಿಯಾದ ಬಹು ಬೇಡಿಕೆಯ ನಟಿಯಾಗಿದ್ದರು. ಸದ್ಯ ಸಿನಿಮಾಗಳಿಂದ ದೂರ ಉಳಿದ ಖುಷ್ಬು, ರಾಜಕೀಯದಲ್ಲಿ ಬಿಸಿಯಾಗಿದ್ದಾರೆ. ಇತ್ತೀಚಿಗೆ ಈ ನಟಿಗೆ ಕೇರಳಾದ ದೇವಸ್ಥಾನದಲ್ಲಿ ಗೌರವದಿಂದ ಪೂಜೆ ಮಾಡಿದ್ದಾರೆ.  

Written by - Savita M B | Last Updated : Oct 3, 2023, 03:31 PM IST
  • ಬಹುಭಾಷಾ ನಟಿ ಖುಷ್ಬು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಬಾಷೆಗಳಲ್ಲಿ ನಟಿಸಿದ್ದಾರೆ.
  • ನಟಿ ಖುಷ್ಬು ಅವರ ಸಿನಿಜರ್ನಿಯಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ
  • ಇತ್ತೀಚೆಗೆ ಖುಷ್ಬು ಕೇರಳಾದ ತ್ರೀಶೂರ್‌ನ ವಿಷ್ಣುಮಯ ದೇವಸ್ಥಾನಕ್ಕೆ ತೆರೆಳಿದರು
ಕೇರಳ ದೇವಸ್ಥಾನದಲ್ಲಿ ಖುಷ್ಬೂ...! ಕಾಲು ತೊಳೆದು ನಾರಿ ಪೂಜೆ  title=

Actress Khushboo: ಬಹುಭಾಷಾ ನಟಿ ಖುಷ್ಬು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಬಾಷೆಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಭಾಷೆಗಳಲ್ಲೂ ಸೂಪರ್‌ ಸ್ಟಾರ್‌  ಹೀರೋಗಳ ಜೊತಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದಗ್ಯ ಸಿನಿಮಾಗಳಿಂದ ದೂರವುಳಿದು, ತಮಿಳು ನಾಡಿನ ರಾಜಕೀಯದಲ್ಲಿ ಬಿಸಿಯಾಗಿದ್ದಾರೆ. 

ನಟಿ ಖುಷ್ಬು ಅವರ ಸಿನಿಜರ್ನಿಯಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಜೊತೆಗೆ ನಟಿಸಿದ ಚಿತ್ರಗಳಂತೂ ಸಖತ್‌ ಹಿಟ್‌ ಆಗಿದೆ. ಆದರೆ ಇತ್ತೀಚೆಗೆ ನಟಿ ಖುಷ್ಬು ರಾಜಕೀಯ ಜೊತೆಗೆ ಧಾರ್ಮಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾಯಿದ್ದಾರೆ. ಸದ್ಯ ಖುಷ್ಬು ಅವರ ಪೋಸ್ಟ್‌ನಿಂದ ಸುದ್ದಿಯಾಗುತ್ತಾಯಿದ್ದಾರೆ. 

ಇತ್ತೀಚೆಗೆ ಖುಷ್ಬು ಕೇರಳಾದ ತ್ರೀಶೂರ್‌ನ ವಿಷ್ಣುಮಯ ದೇವಸ್ಥಾನಕ್ಕೆ ತೆರೆಳಿದರು. ಅಲ್ಲಿ ಇವರಿಗೆ ಕಾಲು ತೊಳೆದು ನಾರಿ ಪೂಜೆ ಮಾಡಲಾಗಿದೆ.  ಇದು ವಿಷ್ಣುಮಯ ದೇವಸ್ಥಾನದ ಪದ್ಧತಿಯಾಗಿದೆ. ಇಂತಹ ಪೂಜೆ ಆ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುತ್ತಿದೆ. ಅದೇ ರೀತಿ ಈ ಬಾರಿ ಖುಷ್ಬು ಅವರಿಗೆ ಪೂಜೆ ಮಾಡಲಾಗಿದೆ. ದೇಗುಲದಲ್ಲಿ ನಡೆದ ಪೂಜೆಯ ಪೋಟೋಗಳನ್ನು ಖುಷ್ಬು ಅವರು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-BBK10: ಹೊಸ ಮನೆ, ಹೊಸ ಲುಕ್...ಸೀಸನ್​ 10ರ ಬಗ್ಗೆ ಕಿಚ್ಚ ಸುದೀಪ್​ ಹೇಳೋದೇನು?

ಕೇರಳ ರಾಜ್ಯದ ಕೆಲವು ಸ್ಥಳಗಳಲ್ಲಿ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡುವ ಪದ್ದತಿ ಇದೆ. ಅದೇ ರೀತಿ ತ್ರಿಶೂರನ ವಿಷ್ಣುಮಯ ದೇವಸ್ಥಾನದಲ್ಲೂ ಇಂತಹದೊಂದು ನಂಬಿಕೆಯಿದ್ದು ಅದನ್ನು ಪಾಲಿಸುತ್ತಾರೆ. ಹಾಗೆ ಈ ಪದ್ದತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಹಿಳೆಯ ಕಾಲು ತೊಳೆದು ದೇವಿಗೆ ಪೂಜೆ ಮಾಡುವ ರೀತಿಯೆ ಸಲ್ಲಿಸಿ ತಮ್ಮ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುತ್ತಾರೆ. ಇದನ್ನು ನಾರಿ ಪೂಜೆ ಎಂದು ಕೆರೆಯುತ್ತಾರೆ.

ಖುಷ್ಬು ಅವರಿಗೆ ಪೂಜೆ ಮಾಡಿದ ಫೋಟೋಗಳನ್ನು ಶೇರ್‌ ಮಾಡುವುದರ ಜೊತೆಗೆ ಇದರ ಬಗ್ಗೆ ಕೆಲವು ಮಾತುಗಳನ್ನು ಸಹ ಹಂಚಿಕೊಂಡಿದ್ದಾರೆ. ʼನನಗೆ ದೇವರಿಂದ ಆಶೀರ್ವಾದ ಸಿಕ್ಕಿದೆ. ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ನನ್ನನು ಕರೆದಿದ್ದು ಇದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿ ಪೂಜೆಗಾಗಿ ಕರೆಯಲಾಗುತ್ತದೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬ ಸದಸ್ಯರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿರುವುದಕ್ಕೆ  ಧನ್ಯವಾದ." ಎಂದು ಖುಷ್ಬೂ ನಾರಿ ಪೂಜೆಯ ನಂತರ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ನ್ನು ನೋಡಿದ ನೆಟ್ಟಿಗರು, ʼಇವರು ಯಾವ ಆಸ್ತಿಕರಾದರು, ನನಗೆ ಆಶ್ಚರ್ಯವಾಗುತ್ತಿದೆ.ʼ,ಕೆಲವು ಸಂದರ್ಶನದಲ್ಲಿ ನಾಸ್ತಿಕರಾಗಿದ್ದಿನಿ ಎಮದು ಹೇಳಿಕೊಂಡಿದ್ದರಲ್ವಾ, ಬಿಜೆಪಿ ಸೇರಿದ ನಂತರ ಇವರು ಆಸ್ತಿಕರಾದರʼ ಅಂತ ಕಮೆಂಟ್‌ ಮಾಡಿದ್ದಾರೆ. ʼಈಕೆ ಬೇರೆ ಧರ್ಮಕ್ಕೆ ಯಾವಾಗ ಮತಾಂತರಾದರು ಅಂತ ಹೇಳಿದ್ದಾರೆ. ಮತ್ತೆ ಇನ್ನು ಕೆಲವರು ʼ ರಾಜಕೀಯಕ್ಕಾಗಿ ಮುಸ್ಲಿಂ ಮಹಿಳೆ ಹೀಗೆ ಮಾಡ್ತಾಯಿದ್ದಾಳೆ ಅಂತೆಲ್ಲಾ ಕಮೆಂಟ್‌ಗಳಲ್ಲಿ ಬರೆದಿದ್ದಾರೆ. ಇನ್ನು ಕೆಲವರು ʼ ದೇವರು ಒಳ್ಳೆಯದು ಮಾಡಲಿʼ, ʼವರ್ಣಿಸಲು ಪದಗಳೇ ಇಲ್ಲʼ, ಅಂತ ಪಾಸಿಟಿವ್‌ ಕಮೆಂಟ್‌ ಸಹ ಮಾಡಿದ್ದಾರೆ.

ಇದನ್ನೂ ಓದಿ-ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಲಿಯೋ ಟ್ರೈಲರ್ ರಿಲೀಸ್‌ ಡೇಟ್ ಫಿಕ್ಸ್.. !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News