ಕಿಚ್ಚ ಸುದೀಪ್ ಅಭಿನಯದ 'ಸೈರಾ ನರಸಿಂಹರೆಡ್ಡಿ' ಚಿತ್ರೀಕರಣ ಸ್ಥಗಿತ

ಚಿರಂಜೀವಿ ಮತ್ತು ಕಿಚ್ಚ ಸುದೀಪ್​ ಅಭಿನಯದ ಸೈರಾ ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. 

Updated: Aug 1, 2018 , 07:19 PM IST
ಕಿಚ್ಚ ಸುದೀಪ್ ಅಭಿನಯದ 'ಸೈರಾ ನರಸಿಂಹರೆಡ್ಡಿ' ಚಿತ್ರೀಕರಣ ಸ್ಥಗಿತ

ತೆಲಂಗಾಣ: ಟಾಲಿವುಡ್ ಮೆಗಾಸ್ಟಾರ್​ ಚಿರಂಜೀವಿ ಮತ್ತು ಕಿಚ್ಚ ಸುದೀಪ್​ ಅಭಿನಯದ ಸೈರಾ ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. 

ತೆಲಂಗಾಣದ ಸಿರಿಲಿಂಗಂಪಲ್ಲಿ ಎಂಬಲ್ಲಿ ರಂಗಸ್ಥಲಂ ಚಿತ್ರಕ್ಕೆ ಹಾಕಿದ್ದ ಬೃಹತ್ ಸೆಟ್ ನಲ್ಲಿಯೇ ಸೈರಾ ನರಸಿಂಹರೆಡ್ಡಿ ಚಲನಚಿತ್ರದ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ, ಸೆಟ್ ಹಾಕಿ ಚಿತ್ರೀಕರಣ ನಡೆಸಲು ಆ ಸ್ಥಳಕ್ಕೆ ಅನುಮತಿ ಪಡೆಯದಿರುವ ಕಾರಣದಿಂದ ಆದಾಯ ಅಧಿಕಾರಿಗಳು ಶೂಟಿಂಗ್ ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. 

ಸೈರಾದಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಕಿಚ್ಚ ಸುದೀಪ್!

ಈ ಹಿಂದೆ ಆ ಸ್ಥಳವನ್ನು ರಂಗಸ್ಥಲಂ ಚಿತ್ರದ ಚಿತ್ರೀಕರಣಕ್ಕಾಗಿ ಲೀಸ್ ಗೆ ಪಡೆಯಲಾಗಿತ್ತು. ಆದರೆ ಆ ಲೀಸ್ ಅವಧಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಅದೇ ಭೂಮಿಯಲ್ಲಿ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಆರಂಭಿಸಲಾಗಿತ್ತು. ಆದರೆ ಅದು ಸರ್ಕಾರದ ಭೂಮಿ ಆಗಿರುವುದರಿಂದ ಸೈರಾ ಚಿತ್ರದ ಚಿತ್ರೀಕರಣಕ್ಕೂ ಪ್ರತ್ಯೇಕ ಅನುಮತಿ ಪಡೆಯದೆ ಚಿತ್ರೀಕರಣ ನಡೆಸುತ್ತಿದ್ದರಿಂದ ಅಲ್ಲಿದ್ದ ರಂಗಸ್ಥಲಂ ಚಿತ್ರದ ಸೆಟ್​ ನೆಲಸಮ ಮಾಡಿರುವ ಆದಾಯ ತೆರಿಗೆ ಇಲಾಖೆ, ಸರ್ಕಾರದ ಕೆಲವು ಆದೇಶಗಳನ್ನೊಳಗೊಂಡ ಬೋರ್ಡ್​ ಹಾಕಲಾಗಿದೆ. 

ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಲಿದೆ ಮೆಗಾಸ್ಟಾರ್- ಕಿಚ್ಚ ಜೋಡಿ

ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿರುವ 'ಸೈರಾ ನರಸಿಂಹರೆಡ್ಡಿ' ಚಿತ್ರದಲ್ಲಿ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟರಾದ ಜಗಪತಿ ಬಾಬು, ಸೇತುಪತಿ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.