Deepika Padukone: ದೀಪಿಕಾ ಪಡುಕೋಣೆ ಹಾಟ್ ಪಿಕ್... ಪಡ್ಡೆ ಹೈಕ್ಳಿಗೆ ಜಾಗರಣೆ ಪಕ್ಕಾ!

Deepika Padukone : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಅನ್ನು ವೀಕ್ಷಿಸಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಶಾರುಖ್ ಖಾನ್ ಅವರು ಪಠಾಣ್ ಮೊದಲ ಪಾರ್ಟಿ ಸಾಂಗ್‌ನಿಂದ ದೀಪಿಕಾ ಪಡುಕೋಣೆ ಅವರ ಸಿಜ್ಲಿಂಗ್ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. 

Written by - Chetana Devarmani | Last Updated : Dec 9, 2022, 12:46 PM IST
  • ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್
  • ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್
  • ದೀಪಿಕಾ ಪಡುಕೋಣೆ ಹಾಟ್ ಪಿಕ್ ಆಯ್ತು ವೈರಲ್‌
Deepika Padukone: ದೀಪಿಕಾ ಪಡುಕೋಣೆ ಹಾಟ್ ಪಿಕ್... ಪಡ್ಡೆ ಹೈಕ್ಳಿಗೆ ಜಾಗರಣೆ ಪಕ್ಕಾ! title=
ದೀಪಿಕಾ ಪಡುಕೋಣೆ

Deepika Padukone Look From Pathaan : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಅನ್ನು ವೀಕ್ಷಿಸಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಶಾರುಖ್ ಖಾನ್ ಅವರು ಪಠಾಣ್ ಮೊದಲ ಪಾರ್ಟಿ ಸಾಂಗ್‌ನಿಂದ ದೀಪಿಕಾ ಪಡುಕೋಣೆ ಅವರ ಸಿಜ್ಲಿಂಗ್ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಬ್ಬಾ! ಇದರಲ್ಲಿ ದೀಪಿಕಾ ಎಷ್ಟು ಹಾಟ್‌ ಆಗಿ ಕಾಣುತ್ತಿದ್ದಾರೆ ಎಂದರೆ ಯುವಕರಿಗೆ ಕೊರೆಯುವ ಚಳಿಯಲ್ಲೂ ಬೆವರು ಬರುತ್ತೆ. ಸ್ವಿಮ್ಮಿಂಗ್‌ ಸೂಟ್‌ ಧರಿಸಿ ಮೋಹಕ ನೋಟ ಬೀರಿದ್ದಾರೆ. ಈ ಚಿತ್ರದಲ್ಲಿ ತುಂಬಾ ಹಾಟ್ ಆಗಿ ದೀಪಿಕಾ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: Aamir Khan : ಹಣೆಗೆ ಕುಂಕುಮ ಇಟ್ಟು ಕಲಶ ಪೂಜೆ! ಅಮೀರ್ ಖಾನ್ ಫೋಟೋ ವೈರಲ್

ದೀಪಿಕಾ ಅವರ ಫಸ್ಟ್ ಲುಕ್ ಅನ್ನು ಶಾರೂಖ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಬೇಷರಮ್ ರಂಗ್ ಹಾಡಿಗೆ ಸಮಯ ಬಂದಿದೆ. ಡಿಸೆಂಬರ್ 12 ರಂದು ಹಾಡು ಬಿಡುಗಡೆಯಾಗಲಿದೆ. 25ನೇ ಜನವರಿ, 2023 ರಂದು ನಿಮ್ಮ ಸಮೀಪವಿರುವ  ಚಿತ್ರಮಂದಿರದಲ್ಲಿ ಪಠಾಣ್‌ ವೀಕ್ಷಿಸಿ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ" ಎಂದು ಬರೆದಿದ್ದಾರೆ. ಈ ಫೋಟೋದಲ್ಲಿ ದೀಪಿಕಾ ಗೋಲ್ಡನ್‌ ಕಲರ್‌ ಮೊನೊಕಿನಿ ಧರಿಸಿ ಸಮುದ್ರದ ಪಕ್ಕದಲ್ಲಿ ಪೋಸ್ ನೀಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Shah Rukh Khan (@iamsrk)

 

ನವೆಂಬರ್‌ನಲ್ಲಿ, ಪಠಾಣ್‌ ಚಿತ್ರದ ಟೀಸರ್ ಬಿಡುಗಡೆಯಾಯಿತು. ಅಂದಿನಿಂದ ಸಿನಿಪ್ರಿಯರಲ್ಲಿ ಪಠಾಣ್‌ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಇದೀಗ ದೀಪಿಕಾ ಪಡುಕೋಣೆಯ ಫಸ್ಟ್ ಲುಕ್ ನೋಡಿ ಸಿನಿಮಾ ನೋಡಲು ಕಾತುರ ಹೆಚ್ಚಾಗಿದೆ. ಸಿನಿಮಾದ ಟ್ರೇಲರ್ ರಿಲೀಸ್‌ ಮಾಡುವ ಮೊದಲು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ತಯಾರಕರು ನಿರ್ಧರಿಸಿದ್ದಾರೆ. ಈ ಸಿನಿಮಾದ ಮೊದಲ ಹಾಡು, ಬೇಷರಮ್ ರಂಗ್, ಮಲ್ಲೋರ್ಕಾದ ಸುಂದರವಾದ ಕಡಲತೀರಗಳಲ್ಲಿ ಚಿತ್ರೀಕರಿಸಲಾಗಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರಲ್ಲದೆ, ಪಠಾಣ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. 

ಇದನ್ನೂ ಓದಿ : Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್‌ ರಹಸ್ಯ ಬಿಚ್ಚಿಟ್ಟ ಆಲಿಯಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News