ʼಅವತಾರ 2ʼ ಸಿನಿಮಾ ನೋಡುತ್ತಲೇ ವ್ಯಕ್ತಿ ಸಾವು : ಕಾರಣ ಗೊತ್ತಾದ್ರೆ ಶಾಕ್‌ ಆಗ್ತೀರಾ!

ಬಹು ನಿರೀಕ್ಷಿತ ಚಿತ್ರ ಅವತಾರ 2 ಇಂದು ಬಿಡುಗಡೆಯಾಗಿದೆ. ಅವತಾರ ಮೊದಲ ಭಾಗವು ಡಿಸೆಂಬರ್ 18 2009 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 13 ವರ್ಷಗಳ ನಂತರ, ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಚಿತ್ರದ ಎರಡನೇ ಭಾಗ ಪ್ರೇಕ್ಷಕನಿಗೆ ದೃಶ್ಯಕಾವ್ಯದ ಅನುಭವ ನೀಡುತ್ತಿದೆ. ಚಿತ್ರ ನೋಡಿದ ಸಿನಿ ಪ್ರೇಕ್ಷಮರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Written by - Krishna N K | Last Updated : Dec 17, 2022, 03:39 PM IST
  • ವಿಶ್ವದಾದ್ಯಂತ ಅವತಾರ 2 ಇಂದು ಬಿಡುಗಡೆಯಾಗಿದೆ
  • ಸಿನಿಮಾ ನೋಡುವ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ
  • ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆತ್ತಪುರಂದಲ್ಲಿ ನಡೆದ ಘಟನೆ
ʼಅವತಾರ 2ʼ ಸಿನಿಮಾ ನೋಡುತ್ತಲೇ ವ್ಯಕ್ತಿ ಸಾವು : ಕಾರಣ ಗೊತ್ತಾದ್ರೆ ಶಾಕ್‌ ಆಗ್ತೀರಾ! title=

Avatar 2 : ಬಹು ನಿರೀಕ್ಷಿತ ಚಿತ್ರ ಅವತಾರ 2 ಇಂದು ಬಿಡುಗಡೆಯಾಗಿದೆ. ಅವತಾರ ಮೊದಲ ಭಾಗವು ಡಿಸೆಂಬರ್ 18 2009 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 13 ವರ್ಷಗಳ ನಂತರ, ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಚಿತ್ರದ ಎರಡನೇ ಭಾಗ ಪ್ರೇಕ್ಷಕನಿಗೆ ದೃಶ್ಯಕಾವ್ಯದ ಅನುಭವ ನೀಡುತ್ತಿದೆ. ಚಿತ್ರ ನೋಡಿದ ಸಿನಿ ಪ್ರೇಕ್ಷಮರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇನ್ನು ಅವತಾರ 2 ಸಿನಿಮಾ ನೋಡುವ ವೇಳೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆತ್ತಪುರಂನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿತ್ರ ವೀಕ್ಷಿಸಲು ತನ್ನ ಕಿರಿಯ ಸಹೋದರನೊಂದಿಗೆ ಬಂದಿದ್ದ ವ್ಯಕ್ತಿಯನ್ನು ಶ್ರೀನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸಿನಿಮಾ ನೋಡುವ ವೇಳೆ ಶ್ರೀನು ಮೂರ್ಛೆ ಹೋಗಿದ್ದ. ಆಗ ಅವರ ಕಿರಿಯ ಸಹೋದರ ರಾಜು ತಕ್ಷಣವೇ ಅವರನ್ನು ಪೆಟ್ಟಾಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದರು. ಆಸ್ಪತ್ರೆ ತಲುಪಿದಾಗ ಶೀನು ಪರೀಕ್ಷೆ ನಡೆಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಶ್ರೀನು ಅವರಿಗೆ ಒಬ್ಬ ಪುತ್ರಿ ಹಾಗೂ ಪುತ್ರ ಇದ್ದಾರೆ. 

ಇದನ್ನೂ ಓದಿ: ʼಜೋಡರ್ನ್ʼ ಟ್ರೇಲರ್ ಬಿಡುಗಡೆ : ಡಿಸೆಂಬರ್ 30ಕ್ಕೆ ಸಿನಿಮಾ ತೆರೆಗೆ

ಅದೇ ರೀತಿ, ಏಜೆನ್ಸ್ ಫ್ರಾನ್ಸ್-ಪ್ರೆಸ್ 2010 ರಲ್ಲಿ ತೈವಾನ್‌ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು 'ಅವತಾರ್‌' ಅವತಾರ ಮೊದಲ ಭಾಗವನ್ನು ವೀಕ್ಷಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರನ್ನು ಪರೀಕ್ಷಿಸಿದ ವೈದ್ಯರ ಪ್ರಕಾರ, ʼಸಿನಿಮಾ ನೋಡುವಾಗ ಅತಿಯಾದ ಉತ್ಸಾಹ ಮತ್ತು ಸಂತೋಷದಿಂದʼ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿತ್ತು. ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು.

ಅಲ್ಲದೆ, ಮಧ್ಯಪ್ರದೇಶದ ಪಿಂಡ್‌ನಲ್ಲಿ 12 ವರ್ಷದ ಬಾಲಕ ತನ್ನ ಶಾಲಾ ಬಸ್‌ನಿಂದ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಅತ್ಯಂತ ಕಿರಿಯ ಮಗು ಇದು ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News