ಒಂದೇ ದಿನದಲ್ಲಿ ನಟ ಮನೋಜ್‌ 8 ಪ್ಯಾಕ್ಸ್‌ ಪಡೆದದ್ದು ಹೇಗೆ ಗೊತ್ತೆ..! ನಿಮ್ಗೂ ಇದು ಸಾಧ್ಯ

Manoj Bajpayee eight pack : 'ಕಿಲ್ಲರ್ ಸೂಪ್' ನೆಟ್‌ಫ್ಲಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ವೆಬ್ ಸರಣಿಯಲ್ಲಿ ನಟ ಮನೋಜ್ ಬಾಜ್‌ಪೇಯಿ ನಟಿಸಿದ್ದಾರೆ. ಈ ವರ್ಷದ ಮೊದಲ ದಿನದಂದು ನಟ ತಮ್ಮ ಪರ್ಫೆಕ್ಟ್ ಬಾಡಿ ಲುಕ್‌ ಮೂಲಕ ಸಖತ್‌ ಸುದ್ದಿಯಾಗಿದ್ದರು. ಇದೀಗ್‌ ಮನೋಜ್‌ ತಮ್ಮ ಎಂಟು ಪ್ಯಾಕ್ಸ್‌ ಹಿಂದಿನ ರಹಸ್ಯ ಕುರಿತು ಮಾತನಾಡಿದ್ದಾರೆ. 

Written by - Krishna N K | Last Updated : Jan 18, 2024, 11:30 AM IST
  • 'ಕಿಲ್ಲರ್ ಸೂಪ್' ನೆಟ್‌ಫ್ಲಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಈ ವೆಬ್ ಸರಣಿಯಲ್ಲಿ ನಟ ಮನೋಜ್ ಬಾಜ್‌ಪೇಯಿ ನಟಿಸಿದ್ದಾರೆ.
  • ಮನೋಜ್‌ ತಮ್ಮ ಎಂಟು ಪ್ಯಾಕ್ಸ್‌ ಹಿಂದಿನ ರಹಸ್ಯ ಕುರಿತು ಮಾತನಾಡಿದ್ದಾರೆ.
ಒಂದೇ ದಿನದಲ್ಲಿ ನಟ ಮನೋಜ್‌ 8 ಪ್ಯಾಕ್ಸ್‌ ಪಡೆದದ್ದು ಹೇಗೆ ಗೊತ್ತೆ..! ನಿಮ್ಗೂ ಇದು ಸಾಧ್ಯ title=

Killer soup : ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ 'ಕಿಲ್ಲರ್ ಸೂಪ್' ವೆಬ್ ಸರಣಿ ಸಖತ್‌ ಸೌಂಡ್‌ ಮಾಡುತ್ತಿದೆ. ನಟ ಮನೋಜ್ ಬಾಜ್‌ಪೇಯಿ ಅಭಿಯನದ ಈ ವೆಬ್‌ ಸರಣಿಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವರ್ಷದ ಮೊದಲ ದಿನ ಮನೋಜ್‌ ಅವರ ಏಟ್‌ ಪ್ಯಾಕ್ಸ್‌ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸಧ್ಯ ಈ ಕುರಿತು ನಟ ಬಹಿರಂಗಪಡಿಸಿದ್ದಾರೆ.

ಹೌದು.. ಕಟ್‌ ಮಸ್ತ್‌ ಬಾಡಿ, ಶರ್ಟ್‌ಲೆಸ್ ಫೋಟೋವನ್ನು ಪೋಸ್ಟ್ ಮಾಡಿ ಮನೋಜ್‌ ಎಲ್ಲರಿಗೂ ಶಾಕ್‌ ನೀಡಿದ್ದರು. ಅವರ ಸರಣಿಯ ಪ್ರಚಾರದ ಭಾಗವಾಗಿ, ನಟ ಈ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ, “ಹೊಸ ವರ್ಷ ಹೊಸ ನಾನು! ನೋಡಿ.. ಕಿಲ್ಲರ್‌ ಲುಕ್‌ ಅಂತ ಶೀರ್ಷಿಕೆ ಬರೆದುಕೊಂಡಿದ್ದರು. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: ʻಬ್ಯಾಚುಲರ್‌ ಪಾರ್ಟಿʼನಲ್ಲಿ ಈ ನಟಿಯನ್ನೇ ನೋಡಲು ರಕ್ಷಿತ್‌ ಬಂದಿದ್ದರು: ದಿಗಂತ್‌-ಯೋಗಿ!

ಮನೋಜ್‌ ಎಟ್‌ ಪ್ಯಾಕ್ಸ್‌ ನೆಟ್ಟಿಗರಿಗೆ ಶಾಕ್‌ ನೀಡಿತ್ತು. ಕೆಲವರು ಹೇಗೆ ಸಾಧ್ಯ ಅಂತ ಹಾಗೂ ಟಿಪ್ಸ್‌ ಕೇಳಿ ಕಾಮೆಂಟ್‌ ಮಾಡಿದ್ದರು. ಸಧ್ಯ ತಮ್ಮ ಬಾಡಿ ರಹಸ್ಯವನ್ನು ಮನೋಜ್‌ ಬಯಲು ಮಾಡಿದ್ದಾರೆ. ಈ ಚಿತ್ರವನ್ನು 'ಕಿಲ್ಲರ್ ಸೂಪ್' ಪ್ರಚಾರದ ಭಾಗವಾಗಿ ಮಾರ್ಫ್ ಮಾಡಲಾಗಿದೆ ಅಂತ ನಿಜ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಜನವರಿ 11 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ʼಕಿಲ್ಲರ್‌ ಸೂಪ್‌ʼನಲ್ಲಿ ಪ್ರಭಾಕರ್ 'ಪ್ರಭು' ಶೆಟ್ಟಿ ಮತ್ತು ಉಮೇಶ್ ಶೆಟ್ಟಿಯಾಗಿ ದ್ವಿಪಾತ್ರದಲ್ಲಿ ಮನೋಜ್ ನಟಿಸಿದ್ದಾರೆ. ಅಭಿಷೇಕ್ ಚೌಬೆ ನಿರ್ದೇಶನ ಈ ವೆಬ್‌ ಸರಣಿಯನ್ನು ಹನಿ ಟ್ರೆಹಾನ್ ಮತ್ತು ಚೇತನಾ ಕೌಶಿಕ್ ನಿರ್ಮಿಸಿದ್ದಾರೆ. ವೆಬ್ ಸರಣಿಯಲ್ಲಿ ನಾಸರ್, ಸಯಾಜಿ ಶಿಂಧೆ ಮತ್ತು ಲಾಲ್ ಕೂಡ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News