Kotee Review: ಪ್ರಾಮಾಣಿಕವಾಗಿ ದುಡಿದು ಕೋಟಿ ಸಂಪಾದಿಸಲು ಸಾಧ್ಯ ಎಂದು ನಂಬಿದವನ ಕತೆಯಿದು!

Kotee Movie Review: ನಿಯತ್ತಾಗಿ ದುಡಿದು “ಕೋಟಿ”ಸಂಪಾದನೆ ಮಾಡುತ್ತಾರಾ ಡಾಲಿ ಧನಂಜಯ. ..? ಹೇಗಿದೆ ಗೊತ್ತಾ  ಪರಮ್ ನಿರ್ದೇಶನದ  ‘ಕೋಟಿ‘ ಸಿನಿಮಾ. .?

Written by - YASHODHA POOJARI | Last Updated : Jun 14, 2024, 10:39 AM IST
  • ಮಧ್ಯಮವರ್ಗದ ಜನರ ಕಷ್ಟಗಳಿಗೆ ತುಂಬಾ ಹತ್ತಿರ ಅನಿಸೋ ಸಿನಿಮಾವಿದು.
  • ಹಲವು ಭಾವುಕ ಕ್ಷಣಗಳು ನಿಮ್ಮ ಕಣ್ಣಾಳಿಗಳನ್ನ ಒದ್ದೆ ಮಾಡುತ್ತೆ.
  • ಅಕ್ರಮದ ಹಾದಿಯಲ್ಲಿ ಎಷ್ಟೆಲ್ಲಾ ದುಡ್ಡನ್ನು ದುಡಿಯಬಹುದು ಎಂದು ತೋರಿಸಿಕೊಟ್ಟರೂ, ಅಪ್ಪಿತಪ್ಪಿಯೂ ಅದರಲ್ಲಿ ಹೆಜ್ಜೆ ಇಡುವವನಲ್ಲ 'ಕೋಟಿ'..
Kotee Review: ಪ್ರಾಮಾಣಿಕವಾಗಿ ದುಡಿದು ಕೋಟಿ ಸಂಪಾದಿಸಲು ಸಾಧ್ಯ ಎಂದು ನಂಬಿದವನ ಕತೆಯಿದು!  title=

Koti Review: ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಅಡ್ಡ ದಾರಿ ಹಿಡಿಯದೇ ನಿಯತ್ತಾಗಿ ಒಂದು ಕೋಟಿ ಗಳಿಸಬಹುದೇ ಎಂಬ ಪ್ರಶ್ನೆಗೆ ಉತ್ತರಬೇಕು ಅಂದ್ರೆ ನೀವು ನಟರಾಕ್ಷಸ ಡಾಲಿ ಧನಂಜಯ (Daali Dhananjaya)  ನಟನೆಯ ಕೋಟಿ ಸಿನಿಮಾ (Kotee Film) ನೋಡಲೇಬೇಕು. ಹೇಗಾದ್ರೂ ಒಂದೊಳ್ಳೆ ಬದುಕು ಕಟ್ಟಿಕೊಳ್ಳಬೇಕು ಅನ್ನೋ ಆಸೆ ಹೊಂದೋ ಯುವಕ  ತನಗೆ ಎದುರಾಗುವ ಆರ್ಥಿಕ ಸಂಕಷ್ಟಗಳನ್ನು  ಹೇಗೆ ಎದುರಿಸುತ್ತಾನೆ. .? ಅನ್ನೋದೇ ಈ 'ಕೋಟಿ' ಕಥೆಯ ಮೂಲಧಾರ. 

ಒಬ್ಬ ಸಾಮಾನ್ಯ ವ್ಯಕ್ತಿ ಬದುಕಿನಲ್ಲಿ ಎದುರಾಗುವ ಆರ್ಥಿಕ ದಾಳಿಯನ್ನು ಹೇಗೆ ಎದುರಿಸುತ್ತಾನೆ ಅನ್ನೋದೇ ಇಲ್ಲಿ ಕುತೂಹಲ. ಕೊನೆಗೆ ದುಡ್ಡಿಗಾಗಿ 'ಕೋಟಿ' (Kotee) ಯಾವ ಹಾದಿಗೆ ಇಳಿಯುತ್ತಾನೆ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಮೆಟೀರಿಯಲ್ಲನ್ನು ಪ್ರೇಕ್ಷಕನಿಗೆ ನೀಡುತ್ತಾ ಸಾಗುತ್ತಾರೆ ನಿರ್ದೇಶಕ ಪರಮ್. 

ಇದನ್ನೂ ಓದಿ- ಎನ್‌ಸಿಸಿ ಡ್ರೆಸ್‌ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್‌ ಮಾಡಿ ನೋಡೋಣ..?

ಮಧ್ಯಮವರ್ಗದ ಜನರ ಕಷ್ಟಗಳಿಗೆ ತುಂಬಾ ಹತ್ತಿರ ಅನಿಸೋ ಸಿನಿಮಾವಿದು.  ಹಲವು ಭಾವುಕ ಕ್ಷಣಗಳು ನಿಮ್ಮ ಕಣ್ಣಾಳಿಗಳನ್ನ ಒದ್ದೆ ಮಾಡುತ್ತೆ. ಅಕ್ರಮದ ಹಾದಿಯಲ್ಲಿ ಎಷ್ಟೆಲ್ಲಾ ದುಡ್ಡನ್ನು ದುಡಿಯಬಹುದು ಎಂದು ತೋರಿಸಿಕೊಟ್ಟರೂ, ಅಪ್ಪಿತಪ್ಪಿಯೂ ಅದರಲ್ಲಿ ಹೆಜ್ಜೆ ಇಡುವವನಲ್ಲ 'ಕೋಟಿ'..

ಇದನ್ನೂ ಓದಿ- ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್‌ ದರ್ಶನ್ ಭಾವುಕ ಪೋಸ್ಟ್

ಇನ್ನು, ಪರಮ್‌ ತಮ್ಮ ಮೊದಲ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡ ತಂತ್ರಜ್ಞರ ಕೆಲಸವನ್ನ ಮೆಚ್ಚಲೇಬೇಕು. ವಾಸುಕಿ ವೈಭವ್ ಸಂಗೀತದ 'ಸಖಿಯೇ ಸಖಿಯೇ..' ಹಾಡು ವಾವ್ ಅನ್ನುವಂತಿದೆ. ನೋಬಿನ್ ಪೌಲ್ ಅವರು ಹಿನ್ನೆಲೆ ಸಂಗೀತ ಮೂಲಕ ಜಾದೂವನ್ನೇ ಮಾಡಿದ್ದಾರೆ. ಕೋಟಿ ಸಿನಿಮಾದಲ್ಲಿ ನಾಯಕಿಯಾಗಿ ಮೋಕ್ಷ ಸಖತ್ ಆಗಿ ನಟಿಸಿ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸುತ್ತಾರೆ.  ನಟಿ ತಾರಾ,  ರಂಗಾಯಣರಘು,  ತನುಜಾ, ಪೃಥ್ವಿ ಶಾಮನೂರು ನಟನೆಯನ್ನ ಮೆಚ್ಚುಲೇಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News