ಹೊಸ ಜಾತಿಜನಗಣತಿ ಸಮೀಕ್ಷೆಯಿಂದ ರಾಜ್ಯ ರಾಜಕಾರಣದ ದಿಕ್ಕೇ ಬದಲಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.. ಸಮೀಕ್ಷೆ ವರದಿಯಲ್ಲಿ ಯಾವ ಸಮುದಾಯದ ಜನಸಂಖ್ಯೆ ಎಷ್ಟು ಬರುತ್ತೋ ಅಂತಾ ಘಟಾನುಘಟಿ ನಾಯಕರು ಎದುರು ನೋಡುತ್ತಿದ್ದಾರೆ.. ಸಿಎಂ ಬದಲಾವಣೆ ಭವಿಷ್ಯವೂ ಹೊಸ ಸಮೀಕ್ಷೆಯ ಮೇಲೆಯೇ ನಿಂತಿದೆ.
ಕಾಂತರಾಜು ಆಯೋಗ ಸಲ್ಲಿಸಿದ ಜಾತಿಗಣತಿಯ ವರದಿ ಕಸದ ಬುಟ್ಟಿ ಸೇರಿದೆ. ಹೊಸ ಗಣತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಾಗಿದೆ. ಮರು ಗಣತಿ ಮಾಡಲು ಯಾವಾಗ ಒಪ್ಪಿಗೆ ದೊರೆತ ಕ್ಷಣದಿಂದಲೇ ಕೈ ಪಡೆಯಲ್ಲಿ ಬೆಂಕಿಹೊತ್ತಿಕೊಂಡಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ . ಜಾತಿಗಣತಿ ಮರು ಸಮೀಕ್ಷೆ ಬಗ್ಗೆ ಸಿದ್ದರಾಮಯ್ಯ ಮಾಹಿತಿ . ಭಾರೀ ಕುತೂಹಲ ಮೂಡಿಸಿದ ಕ್ಯಾಬಿನೆಟ್ ಮೀಟಿಂಗ್. ಮರು ಸಮೀಕ್ಷೆ ನಡೆಸಲು ವಿಶೇಷ ಸಚಿವ ಸಂಪುಟ ಸಭೆ
ಜಾತಿಗಣತಿಯನ್ನು ಮತ್ತೆ ಮರುಪರಿಶೀಲನೆ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜಾತಿಗಣತಿಗಾಗಿ ವ್ಯಯವಾಗಿರುವ 167 ಕೋಟಿ ರೂ. ದುಂದುವೆಚ್ಚಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ಕರೆಸಿಕೊಂಡಿದೆ ಎಂಬ ವಿಚಾರವನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಜಗದೀಶ್ ಶೆಟ್ಟರ್ ಏನಂದ್ರು ಇಲ್ಲಿದೆ....
ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಪುನರ್ ರಚನೆಯಾಗುತ್ತೋ.... ಯಾರಿಗೆ ಸಿಹಿ? ಯಾರಿಗೆ ಕಹಿ? ಯು.ಟಿ. ಖಾದರ್ ಗೆ ಸಚಿವ ಸ್ಥಾನ ನೀಡುವ ಸಂಭವ... ಬಿ.ಕೆ. ಹರಿಪ್ರಸಾದ್ ಗೂ ಸಿಗುತ್ತಾ ಸಚಿವ ಸ್ಥಾನ?
ಪರಿಷತ್ 4 ಸ್ಥಾನಗಳಿಗೆ ನಾಮನಿರ್ದೇಶನ ವಿಚಾರಕ್ಕೆ ಸಂಬಂಧಿಸಿದಂತೆ ನಾಮನಿರ್ದೇಶನ ಶಿಫಾರಸ್ಸಿಗೆ ಹೈಕಮಾಂಡ್ ತಡೆಹಿಡಿದಿದೆ. ಆರತಿ ಕೃಷ್ಣ, ರಮೇಶ್ ಬಾಬು,ಡಿ.ಜಿ.ಸಾಗರ್, ದಿನೇಶ್ ಅಮಿನ್‌ಮಟ್ಟು ಹೆಸರು ಶಿಫಾರಸ್ಸಿಗೆ ಸಿಎಂ ಸಹಿ ಹಾಕಿದ್ದರು. ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಎಐಸಿಸಿಯಿಂದ ರಾಜ್ಯಪಾಲರಿಗೆ ಶಿಫಾರಸ್ಸು ಪತ್ರ ಕಳುಹಿಸದಂತೆ ತಡೆಹಿಡಿಯಲಾಗಿದೆ.
B Dayananda suspended : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ದಕ್ಷ ಅಧಿಕಾರಿಗಳ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಜನಸ್ನೇಹಿ ಪೋಲಿಸ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಪರ ಸಾರ್ವಜನಿಕರು ಧ್ವನಿ ಎತ್ತಿದ್ದಾರೆ. ಮೇಕೆ ತಾನು ತಿಂದು ಕೋತಿ ಮೂತಿಗೆ ಒರೆಸಿದ ಹಾಗೆ ಆಗಿದೆ ಸರ್ಕಾರದ ನಡೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ನೇಮಕ. ರಾತ್ರಿಯೇ ನೂತನ ಕಮಿಷನರ್ ಸೀಮಂತ್ ಪದಗ್ರಹಣ. 1996 ಬ್ಯಾಚ್ ಅಧಿಕಾರಿಯಾಗಿರುವ ಸೀಮಂತ್ ಕುಮಾರ್. ನಿನ್ನೆಯೇ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿತ್ತು, ದಯಾನಂದ ಸೇರಿ ಐವರು ಅಧಿಕಾರಿಗಳ ತಲೆದಂಡ.
RCB Stampede : ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಘಟನೆ ಕುರಿತು ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ಮಹಾ ಕುಂಭ ದುರಂತದಲ್ಲಿ ಮಡಿದವರ ಸಂಖ್ಯೆಯನ್ನು ಮುಚ್ಚಿಟ್ಟಂತೆ.. ಕನಿಷ್ಠ ಪಕ್ಷ ಇಲ್ಲಿ ಸತ್ಯವನ್ನು ಮರೆಮಾಚಲಾಗುತ್ತಿಲ್ಲ ಎಂಬುವುದೇ ಸಮಾಧಾನ ಎಂದು ಹೇಳಿದ್ದಾರೆ..
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಸಾವು
ನಮಗೆ ಇಷ್ಟು ಜನ ಸೇರುತ್ತಾರೆ ಎಂದು ಗೊತ್ತಿರಲಿಲ್ಲ
2 ದಿನ ಬಿಟ್ಟು ಕಾರ್ಯಕ್ರಮ ಮಾಡಿದ್ದರೆ ಉತ್ತಮವಿತ್ತು
ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ
ಇದು ಸೂಕ್ಷ್ಮ ವಿಚಾರ, ವಿವಾದಾತ್ಮಕ ಹೇಳಿಕೆ ಬೇಡ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.