ಭಾರತೀಯ ಮನರಂಜನಾ ಉದ್ಯಮಕ್ಕೆ ಪೈರಸಿ ಕಂಟಕ; ಕಳೆದ ವರ್ಷ ₹22,400 ಕೋಟಿ ನಷ್ಟ..!

Digital piracy under Copyright Act: ಪೈರಸಿ ಎಂದರೆ ಬೇರೊಬ್ಬರ ಹಕ್ಕುಸ್ವಾಮ್ಯದ ವಸ್ತುಗಳ ಅಕ್ರಮ ನಕಲು, ವಿತರಣೆ ಅಥವಾ ಬಳಕೆ. ಇದು ಸಂಗೀತ, ಚಲನಚಿತ್ರಗಳು, ಸಾಫ್ಟ್‌ವೇರ್ ಮತ್ತು ಬೌದ್ಧಿಕ ಆಸ್ತಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. 2026ರ ವೇಳೆಗೆ ಚಲನಚಿತ್ರ ಮನರಂಜನಾ ವ್ಯವಹಾರವು 14,600 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ.

Written by - Puttaraj K Alur | Last Updated : Oct 23, 2024, 06:48 PM IST
  • ಭಾರತೀಯ ಮನರಂಜನಾ ಉದ್ಯಮ ಪೈರಸಿಯಿಂದ ತೊಂದರೆಗೊಳಗಾಗಿದೆ
  • 2023ರಲ್ಲಿ ಪೈರಸಿಯಿಂದ ಬರೋಬ್ಬರಿ 22,400 ಕೋಟಿ ರೂ.ಗಳ ಭಾರೀ ನಷ್ಟ
  • ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೇ ಹೆಚ್ಚಿನ ಪೈರಸಿ ನಡೆಯುತ್ತಿದೆ
ಭಾರತೀಯ ಮನರಂಜನಾ ಉದ್ಯಮಕ್ಕೆ ಪೈರಸಿ ಕಂಟಕ; ಕಳೆದ ವರ್ಷ ₹22,400 ಕೋಟಿ ನಷ್ಟ..! title=
ಪೈರಸಿಯಿಂದ 22,400 ಕೋಟಿ ನಷ್ಟ!

Digital piracy in India: ಭಾರತೀಯ ಮನರಂಜನಾ ಉದ್ಯಮವು ದೀರ್ಘಕಾಲದಿಂದಲೂ ಪೈರಸಿಯಿಂದ ತೊಂದರೆಗೊಳಗಾಗಿದೆ. ಆದರೆ ಕಳೆದ ವರ್ಷದ ಇತ್ತೀಚಿನ ಅಂಕಿಅಂಶಗಳು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಭಾರತೀಯ ಮನರಂಜನಾ ಉದ್ಯಮವು 2023ರಲ್ಲಿ ಮೂಲ ಕಂಟೆಂಟ್ ಕಳ್ಳತನದಿಂದ ಅಂದರೆ ಪೈರಸಿಯಿಂದ ಬರೋಬ್ಬರಿ 22,400 ಕೋಟಿ ರೂ.ಗಳ ಭಾರೀ ನಷ್ಟವನ್ನು ಅನುಭವಿಸಿದೆ. EY, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಬುಧವಾರ ಬಿಡುಗಡೆ ಮಾಡಿದ ʼದಿ ರಾಬ್ʼ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಪಿಟಿಐ ಸುದ್ದಿ ಪ್ರಕಾರ, ಮೂಲ ಕಂಟೆಂಟ್ ಕಳ್ಳತನದ ಅಪಾಯಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಬಲವಾದ ನಿಯಂತ್ರಣ ಮತ್ತು ಸಹಯೋಗದ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದೆ.

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚಿನ ಪೈರಸಿ  

ವರದಿಯ ಪ್ರಕಾರ, ಭಾರತದಲ್ಲಿ ಶೇ.51ರಷ್ಟು ಮಾಧ್ಯಮ ಗ್ರಾಹಕರು ಅಕ್ರಮ ಮೂಲಗಳಿಂದ (ಪೈರೇಟೆಡ್) ಮೂಲ ಕಂಟೆಂಟ್‌ಅನ್ನು ಪಡೆಯುತ್ತಿದ್ದಾರಂತೆ. ಇದರಲ್ಲಿ ಗರಿಷ್ಠ ಶೇ.63ರಷ್ಟು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾಡಲಾಗುತ್ತಿದೆ. 2023ರಲ್ಲಿ ಭಾರತದಲ್ಲಿ ಮೂಲ ಕಂಟೆಂಟ್‌ನ ಪೈರಸಿ ಮೂಲಕ 22,400 ಕೋಟಿ ರೂ.ಗಳ ಗಳಿಕೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ 13,700 ಕೋಟಿ ರೂ.ಗಳನ್ನು ಥಿಯೇಟರ್‌ಗಳಲ್ಲಿ ಅಕ್ರಮವಾಗಿ ಮಾಡಿದ ಕಂಟೆಂಟ್‌ನಿಂದ ಗಳಿಸಿದ್ದರೆ, 8,700 ಕೋಟಿ ರೂ.ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಿದ ಕಂಟೆಂಟ್‌ನಿಂದ ಗಳಿಸಲಾಗಿದೆ. ಇದರಿಂದ ಸರ್ಕಾರಕ್ಕೆ 4,300 ಕೋಟಿ ರೂ.ಗಳ ಸರಕು ಮತ್ತು ಸೇವಾ ತೆರಿಗೆ (GST) ನಷ್ಟಕ್ಕೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು..! ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಸೇರಿದ್ದ ಸ್ಪರ್ಧಿ ಜೈಲಿಗೆ..?

ಪೈರಸಿ ಎಂದರೇನು?

ಪೈರಸಿ ಎಂದರೆ ಬೇರೊಬ್ಬರ ಹಕ್ಕುಸ್ವಾಮ್ಯದ ವಸ್ತುಗಳ ಅಕ್ರಮ ನಕಲು, ವಿತರಣೆ ಅಥವಾ ಬಳಕೆ. ಇದು ಸಂಗೀತ, ಚಲನಚಿತ್ರಗಳು, ಸಾಫ್ಟ್‌ವೇರ್ ಮತ್ತು ಬೌದ್ಧಿಕ ಆಸ್ತಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದನ್ನು ಪೈರಸಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಮೂಲ ರಚನೆಕಾರರ ಹಕ್ಕುಗಳನ್ನು ಉಲ್ಲಂಘಿಸಿ, ಅವರಿಗೆ ಬಹುದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. IAMAIನ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಸಮಿತಿಯ ಅಧ್ಯಕ್ಷರಾದ ರೋಹಿತ್ ಜೈನ್, ಮಧ್ಯಸ್ಥಗಾರರ ನಡುವೆ ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಸಿನಿ ಮನರಂಜನಾ ವ್ಯವಹಾರ ₹14,600 ಕೋಟಿ ತಲುಪಲಿದೆ

ಭಾರತದಲ್ಲಿ ಡಿಜಿಟಲ್ ಮನರಂಜನೆಯ ತ್ವರಿತ ಬೆಳವಣಿಗೆಯನ್ನು ಅಲ್ಲಗಳೆಯುವಂತಿಲ್ಲವೆಂದು ಜೈನ್ ಹೇಳಿದ್ದಾರೆ. 2026ರ ವೇಳೆಗೆ ಚಲನಚಿತ್ರ ಮನರಂಜನಾ ವ್ಯವಹಾರವು 14,600 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ. ಆದಾಗ್ಯೂ ಮೂಲ ಕಂಟೆಂಟ್‌ ಪೈರಸಿಯ ಸಾಧ್ಯತೆಯು ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಎಲ್ಲಾ ಪಾಲುದಾರರು ಸರ್ಕಾರಿ ಸಂಸ್ಥೆಗಳು, ಉದ್ಯಮದ ಪ್ರಮುಖರು ಮತ್ತು ಗ್ರಾಹಕರು ಒಗ್ಗೂಡಬೇಕಾಗಿದೆ. ಇಂತಹ ವಿಷಯಗಳು ಹೆಚ್ಚಾಗಿ 19-34 ವರ್ಷ ವಯಸ್ಸಿನ ಜನರನ್ನು ಆಕರ್ಷಿಸುತ್ತವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ನಟಿ ಖುಷ್ಬೂ ಸುಂದರ್‌ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News