AR Rahman Ex Wife Saira Banu: ಮೊನ್ನೆ ಮೊನ್ನೆಯಷ್ಟೇ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಅವರ 29 ವರ್ಷಗಳಿಂದ ಅವರ ಜೊತೆಗಿದ್ದ ಮಡದಿ ಸಾಯಿರಾ ಬಾನು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡು ಬೇರೆಯಾಗಿದ್ದಾರೆ. ಇದೀಗ ಎ.ಆರ್. ರೆಹಮಾನ್ ಹೆಸರು ಮೋಹಿನಿ ಡೇ ಜೊತೆ ತಳುಕು ಹಾಕಿಕೊಂಡಿದ್ದರೂ ಪರಸ್ಪರ ಗೌರವಯುತವಾಗಿ ಬೇರ್ಪಡೆಯಾಗೋಣ ಎಂದು ನಿರ್ಧರಿಸಿದ ಸಾಯಿರಾ ಬಾನು ಅವರ ಹಿನ್ನೆಲೆ ಏನು ಎಂಬ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.
ಸಾಯಿರಾ ಬಾನು ಗುಜರಾತ್ ಮೂಲದವರು. ಗುಜರಾತಿನ ಕಚ್ ನಲ್ಲಿ 1973ರ ಡಿಸೆಂಬರ್ 20ರಂದು ಜನಿಸಿದರು. ಆಗಲೇ ಅವರ ಪೂರ್ವಜರು ತಮಿಳುನಾಡಿನ ಚೆನ್ನೈಗೆ ಸ್ಥಳಾಂತರಗೊಂಡಿದ್ದರಿಂದ ಸಾಯಿರಾ ಬಾನು ಅವರ ಬಾಲ್ಯ ಶುರುವಾಗಿದ್ದು ಚೆನ್ನೈನಲ್ಲಿ. ಸಾಯಿರಾ ಬಾನು ಅವರ ಮಾತೃಭಾಷೆ ಉರ್ದುವೂ ಅಲ್ಲ, ತಮಿಳು ಅಲ್ಲ. ಇಂಡೋ-ಆರ್ಯನ್ ಭಾಷೆಯಾದ ಕೂಚಿ. ಆದರೆ ಈಗ ಸಾಯಿರಾ ಬಾನು ನಿರರ್ಗಳವಾಗಿ ತಮಿಳು ಮಾತನಾಡುತ್ತಾರೆ.
ಇದನ್ನೂ ಓದಿ- ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಕಿಚ್ಚ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್!
ರೆಹಮಾನ್-ಸಾಯಿರಾ ಬಾನು ಅವರದು ಅರೇಂಜ್ ಮ್ಯಾರೇಜ್!
ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ಅವರದು ಮನೆಯವರು ಮೆಚ್ಚಿ ಮಾಡಿದ ಅರೇಂಜ್ ಮ್ಯಾರೇಜ್. ರೆಹಮಾನ್ ಅವರ ತಾಯಿ ಮತ್ತು ಸಹೋದರಿ ಒಮ್ಮೆ ಮಸೀದಿಯಲ್ಲಿ ಸಾಯಿರಾ ಬಾನು ಅವರನ್ನು ನೋಡುತ್ತಾರೆ. ಈಕೆ ನಮ್ಮ ಮನೆಯ ಸೊಸೆಯಾದರೆ ಚೆಂದ ಅನಿಸುತ್ತದೆ. ನಂತರ ರೆಹಮಾನ್ ಜೊತೆ ಚರ್ಚಿಸುತ್ತಾರೆ. ರೆಹಮಾನ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಹುಡುಗಿ ಮನೆಯವರ ಮುಂದೆ ಮದುವೆ ಪ್ರಸ್ತಾಪ ಇಡುತ್ತಾರೆ. ಹುಡುಗಿ ಮನೆಯವರೂ ಒಪ್ಪಿ ರೆಹಮಾನ್ ಮತ್ತು ಸಾಯಿರಾ ಬಾನು ಅವರ ಮದುವೆಯಾಗುತ್ತದೆ.
ಅರೇಂಜ್ ಮ್ಯಾರೇಜ್ ಆದರೂ ಫೋನಿನಲ್ಲೇ ಪ್ರಣಯ:
ರೆಹಮಾನ್ ಮತ್ತು ಸಾಯಿರಾ ಬಾನು ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸಿಕ್ಕಿತಾದರೂ ಮದುವೆ ಆಗುವುದು ತಡವಾಯಿತು. ಈ ನಡುವೆ ರೆಹಮಾನ್ ಮತ್ತು ಸಾಯಿರಾ ಬಾನು ಗಂಟೆಗಟ್ಟಲೆ ಫೋನಿನಲ್ಲೇ ನಿರತರಾಗುತ್ತಿದ್ದರಂತೆ. ಆಗಲೇ ರೆಹಮಾನ್ ಅವರಿಂದ ಸಾಯಿರಾ ಬಾನು ತಮಿಳು ಕಲಿತರಂತೆ. ಫೋನಿನಲ್ಲಿ ಪ್ರಣಯಪಕ್ಷಿಗಳಾಗಿದ್ದ ಇವರು ಕಡೆಗೆ ಎ.ಆರ್. ರೆಹಮಾನ್ ಅವರ ಜನ್ಮದಿನದಂದೇ (ಜನವರಿ 6) 1995ರ ಜನವರಿ 6ರಂದು ರೆಹಮಾನ್ ಮತ್ತು ಸಾಯಿರಾ ಬಾನು ಅವರ ಮದುವೆಯಾಗುತ್ತದೆ.
ಇದನ್ನೂ ಓದಿ- ಕಷ್ಟದ ಸಮಯದಲ್ಲಿ ಗೆಳಯನಿಲ್ಲದ ನೋವಿನಲ್ಲಿ ಕೊರಗುತ್ತಿರುವ ಡಿ ಬಾಸ್..! ಅಷ್ಟಕ್ಕೂ ಆ ವಿಶೇಷ ವ್ಯಕ್ತಿ ಯಾರು ಗೊತ್ತಾ..?
ಶ್ರೀಮಂತ ಸಂಗೀತ ನಿರ್ದೇಶಕ ರೆಹಮಾನ್!
ಎ.ಆರ್. ರೆಹಮಾನ್ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ. ಆಸ್ಕರ್ ಪ್ರಶಸ್ತಿ ಪಡೆದ ದೇಶದ ಏಕೈಕ ಸಂಗೀತ ನಿರ್ದೇಶಕ. ಒಂದು ಚಿತ್ರಕ್ಕೆ ಸುಮಾರು 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಒಂದು ಹಾಡಿಗೆ 3 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ದುಬೈ ಮತ್ತು ಚೆನ್ನೈಗಳಲ್ಲಿ ಫಿಲಂ ಸ್ಟುಡಿಯೋ ಹೊಂದಿರುವ ರೆಹಮಾನ್ ಅವರ ಆಸ್ತಿ ಸುಮಾರು 600 ರಿಂದ 650 ಕೋಟಿ ರೂಪಾಯಿ ಎನ್ನಲಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ