Rakesh Adiga: ಬಿಗ್‌ ಬಾಸ್‌ನಲ್ಲಿ ಈ ವಾರದ ಕಳಪೆ ರಾಕೇಶ್ ಅಡಿಗ, ಅತ್ಯುತ್ತಮ ಇವರೇ..

Rakesh Adiga: ವಾರದ ಟಾಸ್ಕ್‌ಗಳಲ್ಲಿ ರಾಕೇಶ್ ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಕಳಪೆ ಪಟ್ಟ ಸಿಕ್ಕಿದೆ. ರಾಕೇಶ್‌ಗೆ ಸ್ಪರ್ಧಾತ್ಮಕ ಮನೋಭಾವದ ಕೊರತೆಯನ್ನು ಕಳಪೆಗೆ ವೋಟ್‌ ಮಾಡುವ ವೇಳೆ ಉಲ್ಲೇಖಿಸಿದ್ದಾರೆ. 

Written by - Chetana Devarmani | Last Updated : Dec 24, 2022, 12:43 PM IST
  • ಬಿಗ್‌ ಬಾಸ್‌ನಲ್ಲಿ ಈ ವಾರದ ಕಳಪೆ ರಾಕೇಶ್ ಅಡಿಗ
  • ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ವಾರ ಬಾಕಿ
  • ಆರ್ಯವರ್ಧನ್ ಅತ್ಯುತ್ತಮ ಸ್ಪರ್ಧಿ
Rakesh Adiga: ಬಿಗ್‌ ಬಾಸ್‌ನಲ್ಲಿ ಈ ವಾರದ ಕಳಪೆ ರಾಕೇಶ್ ಅಡಿಗ, ಅತ್ಯುತ್ತಮ ಇವರೇ..  title=
ರಾಕೇಶ್ ಅಡಿಗ

Rakesh Adiga: ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ವಾರ ಬಾಕಿ ಇದೆ. ಈ ವಾರದ 'ಅತ್ಯುತ್ತಮ ಮತ್ತು ಕಳಪೆ' ಸ್ಪರ್ಧಿಯನ್ನು ಮನೆಯವರು ಸೆಲೆಕ್ಟ್‌ ಮಾಡಿದ್ದಾರೆ. ರಾಕೇಶ್ ಅಡಿಗ ವಾರದ ಅತ್ಯಂತ ಕಳಪೆ ಸ್ಪರ್ಧಿಯಾದರೆ, ಆರ್ಯವರ್ಧನ್ ಅತ್ಯುತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದರು. ವಾರದ ಟಾಸ್ಕ್‌ಗಳಲ್ಲಿ ರಾಕೇಶ್ ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಕಳಪೆ ಪಟ್ಟ ಸಿಕ್ಕಿದೆ. ರಾಕೇಶ್‌ಗೆ ಸ್ಪರ್ಧಾತ್ಮಕ ಮನೋಭಾವದ ಕೊರತೆಯನ್ನು ಕಳಪೆಗೆ ವೋಟ್‌ ಮಾಡುವ ವೇಳೆ ಉಲ್ಲೇಖಿಸಿದ್ದಾರೆ. ಹೆಚ್ಚಿನ ಸ್ಪರ್ಧಿಗಳು ರಾಕೇಶ್ ಅಡಿಗ ಅವರ ವರ್ತನೆಯನ್ನು ಪ್ರಸ್ತಾಪಿಸಿ ಅವರು ಟಾಸ್ಕ್ ಅನ್ನು ಬಿಟ್ಟುಕೊಟ್ಟರು ಎಂದಿದ್ದಾರೆ.

ಇದನ್ನೂ ಓದಿ : BBK 9: ಬಿಗ್ ಬಾಸ್‌ ಮನೆಯಲ್ಲಿ ಸರ್‌ಪ್ರೈಸ್ ಎಲಿಮಿನೇಷನ್! ಹೊರ ನಡೆದೋರು ಯಾರು?

ರಾಕೇಶ್ ಅವರು 'ಕಳಪೆ' ಟ್ಯಾಗ್ ಅನ್ನು ಸ್ವೀಕರಿಸಿದರು. ಶಿಕ್ಷೆಯ ಭಾಗವಾಗಿ ರಾಕೇಶ್‌ ಅಡಿಗ ಬಿಗ್ ಬಾಸ್ ಜೈಲು ಪ್ರವೇಶಿಸಿದರು. ಮತ್ತೊಂದೆಡೆ, ವಾರದ ಅತ್ಯುತ್ತಮ ಸ್ಪರ್ಧಿಯಾಗಿ 'ಆರ್ಯವರ್ಧನ' ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಅವರ ಜೀವನೋತ್ಸಾಹ ಮತ್ತು ವಾರವಿಡೀ ವಿವಿಧ ಚಟುವಟಿಕೆಗಳಲ್ಲಿ ಅವರ ಒಟ್ಟಾರೆ ಕಾರ್ಯಕ್ಷಮತೆಯನ್ನು ಪರಿಗಣಿಸಿ ಸ್ಪರ್ಧಿಗಳು ಆರ್ಯವ್ರಧನ್ ಅವರನ್ನು ಅತ್ಯುತ್ತಮಕ್ಕೆ ಆಯ್ಕೆ ಮಾಡಿದರು. 

 

 

ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ವರದಿಗಳ ಪ್ರಕಾರ, ಇವರಲ್ಲಿ ಇಬ್ಬರು ಸ್ಪರ್ಧಿ ಕೂಡ ಎನಿಮಿನೇಟ್‌ ಆಗಬಹುದು ಎನ್ನಲಾಗುತ್ತಿದೆ. ಬಿಗ್ ಮನೆಯಲ್ಲಿ 8 ಮಂದಿ ಇದ್ದು, ಇಬ್ಬರು ಈ ವಾರ ಹೊರ ಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ :  Video : ಜೈಲಿನಲ್ಲಿ ಹಾಟ್‌ ಬ್ಯೂಟಿ ಉರ್ಫಿ ಜಾವೇದ್‌ ಹೇಗಿದ್ದಾರೆ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News