Weekend With Ramesh Ramya : ಜನಮೆಚ್ಚಿನ ಜೀ ಕನ್ನಡ ವಾಹಿನಿಯ ಬಹುನಿರೀಕ್ಷಿತ ವಿಕೇಂಡ್ ವಿಥ್ ರಮೇಶ್ ಸೀಸನ್ 5ನ ಮೊದಲ ಸಂಚಿಕೆ ಯಶಸ್ವಿಯಾಗಿದೆ. ಮೊದಲ ದಿನವೇ ಸಾಧಕರ ಸೀಟ್‌ನಲ್ಲಿ ʼಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾʼ ಮಿಂಚಿದ್ದರು. ನಟಿಯಾಗಿ ಬಣ್ಣದ ಲೋಕದಲ್ಲಿ ಮಿಂಚಿದ ರಮ್ಯಾ ರಾಜಕೀಯದಲ್ಲೂ ಸದ್ದು ಮಾಡಿದವರು. ಅಲ್ಲದೆ, ಮಹಿಳೆಯರಿಗೆ ಸ್ಪೂರ್ತಿಯೂ ಸಹ. ನಾರಿ ಶಕ್ತಿ ಏನು ಎಂಬುವುದನ್ನ ಸ್ವತಃ ಸಾಧನೆ ಮಾಡಿ ತೊರಿಸಿದ ಗಟ್ಟಿಗಿತ್ತಿ..
ಹೌದು.. ನಟಿಯಾಗಿ ಜನ ಮನ ಗೆದ್ದ ದಿವ್ಯಾ ಸ್ಪಂದನ (ರಮ್ಯಾ) ಇತ್ತೀಚಿಗೆ ಅವರು ಸಿನಿಮಾ ರಂಗದಿಂದ ದೂರವಾಗಿ ರಾಜಕೀಯ ಮೂಲಕ ಜನಸೇವೆಗೆ ನಿಂತಿದ್ದಾರೆ. ಒಬ್ಬ ಹೆಣ್ಣು ರಾಜಕೀಯವಾಗಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವುದು ಅಂದ್ರೆ ಅಷ್ಟು ಸರಳವಲ್ಲ. ಅದು ಒಬ್ಬ ಯುವ ನಟಿಯಾಗಿ, ದಿಗ್ಗಜ ರಾಜಕಾರಿಣಿಗಳ ಎದುರು ನಿಂತು ಸಂಸದೆಯಾಗಿ ಜಯಭೇರಿ ಭಾರಿಸಿದ್ದು, ಮರೆಯುವಂತಿಲ್ಲ.
ಇದನ್ನೂ ಓದಿ: Samantha: ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ದಂಗಾಗ್ತೀರಾ!!
ರಮ್ಯಾ ಸಿನಿ ಜರ್ನಿ : 2003 ಅಭಿ ಚಿತ್ರದ ಮೂಲಕ ಪವರ್ ಸ್ಟಾರ್ ಜೊತೆಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಮ್ಯಾ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಆಕಾಶ್, ಅಮೃತಧಾರೆ, ರಂಗ ಎಸ್‌ಎಸ್‌ಎಲ್‌ಸಿ, ಕಂಠಿ, ಗೌರಮ್ಮ, ಸೇವಂತಿ ಸೇವಂತಿ, ದತ್ತ, ಅರಸು, ಸಂಜು ವೆಡ್ಸ್ ಗೀತಾ.. ಸೇರಿದಂತೆ 31 ಕನ್ನಡ, 7 ತಮಿಳು, 1 ತೆಲುಗು ಸಿನಿಮಾದಲ್ಲಿ ನಟಿಸಿದ ಖ್ಯಾತಿ ರಮ್ಯಾ ಅವರಿಗಿದೆ. ಮುದ್ದು ಮುಖದ ಚೆಲುವೆ ತಮ್ಮ ನಟನೆ ಮತ್ತು ಸೌಂದರ್ಯದಿಂದ ಇಂದು ಸಿನಿಮಾ ಮಾಡುತ್ತಿಲ್ಲವೆಂದರೂ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಯೂರಿದ್ದಾರೆ.
ರಮ್ಯಾ ಅವರಿಗೆ ದೊರೆತ ಕರ್ನಾಟಕ ರಾಜ್ಯ ಪ್ರಶಸ್ತಿ, ಸಾಕಷ್ಟು ಫಿಲ್ಮ ಫೇರ್ ಅವಾರ್ಡ್‌ಗಳು, ಸೈಮಾ ಅವಾರ್ಡ್‌ಗಳ ಪಟ್ಟಿ ನೋಡುತ್ತಾ ಹೊದ್ರೆ ತಲೆ ತಿರುಗುತ್ತದೆ. ಇಂದಿನ ಕಥೆ ಬಿಡಿ, ಹಿಂದೆ ರಮ್ಯಾ ಅವರನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಜನ ಹೋಗುತ್ತಿದ್ದರು ಅಂದ್ರೆ ತಪ್ಪಾಗಲ್ಲ. ರಮ್ಯಾ ನಟನೆ ಅಷ್ಟೊಂದು ಪ್ರಭಾವ ಬೀರಿತ್ತು. ಅಲ್ಲದೆ, ಅನ್ಯಭಾಷೆಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಮ್ಯಾ ಸೂಪರ್ ಸ್ಟಾರ್‌ಗಳಾದ ಧನುಷ್ಯ ಮತ್ತು ಸೂರ್ಯ, ಜೀವ ಸೇರಿದಂತೆ ಹಲವು ನಟರ ಜೊತೆ ನಟಿಸಿ ಸೈ ಎನಿಸಿಕೊಂಡರು. ಒಂದು ಬಾರಿ ಪ್ಯಾನ್ ಇಂಡಿಯಾ ಲವೆಲ್‌ನಲ್ಲಿ ಸಿನಿಮಾ ಮಾಡಿದ್ರೆ, ಮರಳಿ ಕನ್ನಡಕ್ಕೆ ಬಾರದ ಇರುವ ನಟಿಯರ ನಡುವೆ ರಮ್ಯಾ ವಿಭಿನ್ನ. ಎಷ್ಟೇ ದೂರ ಹೋದ್ರು ಸಹ ಮಾತೃ ಭಾಷೆಯ ಮೇಲಿನ ಅವರ ಗೌರವ ಕಿಂಚಿತ್ತು ಕಡಿಮೆಯಾಗಿಲ್ಲ. ಸದ್ಯ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಇವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ರಮ್ಯಾ ರಾಜಕೀಯ : ರಮ್ಯಾ 2012 ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಸೇರಿದರು. 2013 ರಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸಂಸದರಾದರು. ಮಾರ್ಚ್ 2017 ರಲ್ಲಿ, ಅವರು ತಮ್ಮ ರಾಜಕೀಯ ಮಾರ್ಗದರ್ಶಕ ಎಸ್‌ಎಂ ಕೃಷ್ಣ ಅವರನ್ನು ಅನುಸರಿಸುತ್ತಾರೆ ಮತ್ತು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವಿತ್ತು, ಆದರೆ ಅವರು ಕಾಂಗ್ರೆಸ್‌ನಲ್ಲೇ ಮುಂದುವರೆದರು.
ಮೇ 2017 ರಲ್ಲಿ ಅವರಿಗೆ INC ಯ ಸಾಮಾಜಿಕ ಮಾಧ್ಯಮ ವಿಭಾಗದ ಜಾವಾಬ್ದಾರಿ ನೀಡಲಾಯಿತು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನ ಡಿಜಿಟಲ್ ತಂಡದ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. ವಿವಿಧ ಪತ್ರಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಪ್ರಕಾರ, ಅವರು ರಾಹುಲ್ ಗಾಂಧಿ ಮತ್ತು INC ಯ ಸಾಮಾಜಿಕ ಮಾಧ್ಯಮದ ಚಿತ್ರಣವನ್ನು ಬದಲಾಯಿಸುವಲ್ಲಿ ರಮ್ಯಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿತ್ತು. ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಕನ್ನಡತಿ ಕೀರ್ತಿ ರಮ್ಯಾ ಅವರಿಗೆ ಸಲ್ಲುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.