Relationship Tips: ಕೇವಲ ವಿವಾಹಿತರಿಗೆ ಮಾತ್ರ ಇರುವ ಅವಕಾಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುನಿಸು ತೋರಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ. ಅರ್ಥಪೂರ್ಣವಾಗಿ ಜೀವಿಸಬೇಕು ಅನ್ನುವ ಸ್ಫೂರ್ತಿ ಬಾರದೆ ಇರಬಹುದು.
Relationship Tips: ಇಂದು ಕಾಲ ಸಾಕಷ್ಟು ಬದಲಾಗಿದೆ. ಮದುವೆ ಕಾನ್ಷೆಪ್ಟ್ ಕೂಡ ಚೇಂಜ್ ಆಗಿದೆ. ಮದುವೆ ವಿಚಾರವಾಗಿ ಹುಡುಗ-ಹುಡುಗಿಯರ ಭಾವನೆಗಳು ಸಹ ಬದಲಾಗಿವೆ. ಇಂದು ವಯಸ್ಸಾದರೂ ಸಹ ಮದುವೆಯಾಗದೆ ಒಂಟಿಯಾಗಿ ಇರುವವರು ಹೆಚ್ಚಾಗಿದ್ದಾರೆ. ಒಂಟಿ ಜೀವನದಿಂದ ಇಂದು ಮದುವೆ ಬಗ್ಗೆ ಅನೇಕರು ಆಸಕ್ತಿ ತೋರುತ್ತಿಲ್ಲ. ಮದುವೆ ದೊಡ್ಡ ಕಮಿಟ್ಮೆಟ್, ಒಂಟಿಯಾಗಿರುವುದೇ ಲೇಸು ಅಂತಾ ಅನೇಕರ ಅಭಿಪ್ರಾಯವಾಗಿದೆ. ಯಾವುದೇ ಒಬ್ಬ ಮದುವೆಯಾಗದಿದ್ದರೆ ಏನೆಲ್ಲ ತೊಂದರೆಗಳು ಆಗುತ್ತವೆ ಅನ್ನೋದರ ಮಾಹತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಒಂದು ವಯಸ್ಸಿನ ನಂತರ ನಿಮ್ಮ ಜೀವನದ ಸಂತೋಷದ ದಿನಗಳು ಅಥವಾ ಬೇಸರದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಜೀವ ಮನೆಯಲ್ಲಿ ಇರುವುದಿಲ್ಲ. ಹೊರಗಡೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ, ಮನೆಯಲ್ಲಿ ಅಡುಗೆ ಮಾಡಿದ್ದೇನೆ ಅಂತಾ ಹೇಳಲು ಹೆಂಡತಿ ಇರುವುದಿಲ್ಲ.
ಶಾಲೆಯಲ್ಲಿ ತಮ್ಮ ಮಗ ಅಥವಾ ಮಗಳ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು ಮೆಲುಕು ಹಾಕಲು ಆಗುವುದಿಲ್ಲ. ಆದರೆ ಮದುವೆಯಾಗದೆ ಮಕ್ಕಳನ್ನು ಪಡೆಯಬಹುದು ಎನ್ನುವ ವಾದಕ್ಕೆ ಈ ವಿಷಯ ಅನ್ವಯವಾಗುವುದಿಲ್ಲ.
ಕೇವಲ ವಿವಾಹಿತರಿಗೆ ಮಾತ್ರ ಇರುವ ಅವಕಾಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುನಿಸು ತೋರಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ. ಅರ್ಥಪೂರ್ಣವಾಗಿ ಜೀವಿಸಬೇಕು ಅನ್ನುವ ಸ್ಫೂರ್ತಿ ಬಾರದೆ ಇರಬಹುದು.
ನಿನ್ನ ಮದುವೆ ಯಾವಾಗ ಎಂದು ಒಂದಷ್ಟು ವರ್ಷದವರೆಗೆ ಸ್ನೇಹಿತರಿಂದ ಸಂಬಂಧಿಕರಿಂದ ಬರುವ ಪ್ರಶ್ನೆಯನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಮದುವೆಯಾಗಿಲ್ಲ ಎನ್ನುವ ಬಗ್ಗೆ ಕಿರಿಕಿರಿ ಉಂಟು ಮಾಡುವಷ್ಟು ಕರುಣಾಮಯ ನೋಟದಿಂದ ತಪ್ಪಿಸಲು ಸಾಧ್ಯವಿಲ್ಲ.
ಅನಾರೋಗ್ಯವಾದರೆ ಸಂತೈಸಲು ಮಡದಿ ಅಥವಾ ಮಕ್ಕಳಿರುವುದಿಲ್ಲ. ಒಳ್ಳೆಯ ನೆರೆ ಹೊರೆಯವರು ಇಲ್ಲದಿದ್ದರೆ, ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರೆ ಸಾವಾದರೂ ಯಾರಿಗೂ ಬೇಗನೆ ತಿಳಿಯುವುದಿಲ್ಲ.