ಅಕ್ಷಯ ತೃತೀಯದಂದೇ ‘ಶಿವಶರಣ ಮೋಳಿಗೆ ಮಾರಯ್ಯ’ ಆರಂಭ: ಭಕ್ತಿಪ್ರಧಾನ ಚಿತ್ರಕ್ಕೆ ಗವಿಮಠದ ಶ್ರೀಗಳಿಂದ ಚಾಲನೆ

Sandalwood Cinema: ಶ್ರೀ ಜಗನ್ನಾಥದಾಸರು, ಶ್ರೀಪ್ರಸನ್ನವೆಂಕಟದಾಸರು ಹಾಗೂ ಇತ್ತೀಚಿಗೆ ತೆರೆಕಂಡ ದಾಸವರೇಣ್ಯ ಶ್ರೀ ವಿಜಯದಾಸರು  ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Written by - Bhavishya Shetty | Last Updated : May 14, 2024, 06:37 PM IST
    • ಹೆಸರಾಂತ ಶಿವಶರಣ ಮೋಳಿಗೆ ಮಾರಯ್ಯ ಚಿತ್ರ
    • ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಮಠದಲ್ಲಿ ಆರಂಭ
    • ಪೂಜ್ಯ ಗವಿಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ
ಅಕ್ಷಯ ತೃತೀಯದಂದೇ ‘ಶಿವಶರಣ ಮೋಳಿಗೆ ಮಾರಯ್ಯ’ ಆರಂಭ: ಭಕ್ತಿಪ್ರಧಾನ ಚಿತ್ರಕ್ಕೆ ಗವಿಮಠದ ಶ್ರೀಗಳಿಂದ ಚಾಲನೆ title=
Shivasharana Molige Marayya

Sandalwood Cinema: ಹೆಸರಾಂತ ಶಿವಶರಣ ಮೋಳಿಗೆ ಮಾರಯ್ಯ ಚಿತ್ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಮಠದಲ್ಲಿ ಆರಂಭವಾಗಿದೆ. ಪೂಜ್ಯ ಗವಿಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: RCB vs CSK ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿ! ಪಂದ್ಯ ಸ್ಥಗಿತವಾದರೆ ಪ್ಲೇ ಆಫ್’ಗೆ ಪ್ರವೇಶಿಸೋದು ಯಾರು? ಇಲ್ಲಿದೆ ಮಾಹಿತಿ

ಶ್ರೀ ಜಗನ್ನಾಥದಾಸರು, ಶ್ರೀಪ್ರಸನ್ನವೆಂಕಟದಾಸರು ಹಾಗೂ ಇತ್ತೀಚಿಗೆ ತೆರೆಕಂಡ ದಾಸವರೇಣ್ಯ ಶ್ರೀ ವಿಜಯದಾಸರು  ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಅರ್ಪಿಸುವ ಹಾಗೂ ಹವಾಲ್ದಾರ್ ಫಿಲಂಸ್ ನ ಮೂಲಕ ಮಧುಸೂದನ್ ಹವಾಲ್ದಾರ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ, ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ. ಆರು ಹಾಡುಗಳು ಹಾಗೂ ವಚನಗಳು ಈ ಚಿತ್ರದಲ್ಲಿರುತ್ತದೆ. ಆನೆಗುಂದಿ, ಕೊಪ್ಪಳ, ಬಾಗಲಕೋಟೆ ಹಾಗೂ ಹಂಪಿಯ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಈ ಚಿತ್ರಕ್ಕೆ ಸಿ.ನಾರಾಯಣ ಛಾಯಾಗ್ರಾಹಣವಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

“ಶಿವಶರಣ ಮೋಳಿಗೆ ಮಾರಯ್ಯ ಅವರು ಕಾಶ್ಮೀರದ ರಾಜರಾಗಿದ್ದವರು. ಅವರು ಕಲ್ಯಾಣಕ್ಕೆ ಬರುತ್ತಾರೆ. ಶರಣ ತತ್ವಕ್ಕೆ ಮನಸೋತ್ತು ಶಿವಶರಣರಾಗುತ್ತಾರೆ. ರಾಜ್ಯವನ್ನು ಮಗನಿಗೆ ಒಪ್ಪಿಸುತ್ತಾರೆ. ದಿನವೂ ಕಟ್ಟಿಗೆ ಮಾರಿ ಅದರಿಂದ ಬಂದ ಹಣದಿಂದ ದಿನ ದಾಸೋಹ ಮಾಡಿಸುತ್ತಿರುತ್ತಾರೆ. ಇಂತಹ ಮಹಾಮಹಿಮ ಶಿವಶರಣರ ಜೀವನ ಚರಿತ್ರೆಯನ್ನು ತೆರೆಗೆ ತರಲು ತುಂಬಾ ಸಂತೋಷವಾಗಿದೆ. ನಾನು ಹಾಗೂ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇವೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸರುವ ವಿಷ್ಣುವರ್ಧನ್ ಅವರು ಮೋಳಿಗೆ ಮಾರಯ್ಯ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶರತ್ ಕುಮಾರ್ ದಂಡಿನ್, ಇಂಗಳಗಿ ನಾಗರಾಜ್, ಕೆ‌.ಪುರುಷೋತ್ತಮ ರೆಡ್ಡಿ, ನಿಶ್ಚಿತ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನನ್ನ ನಿರ್ದೇಶನದ "ದಾಸವರೇಣ್ಯ ಶ್ರೀವಿಜಯದಾಸರು" ಚಿತ್ರ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ” ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News