/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು 'ನನ್ನ ಪತ್ನಿಯೇ ನನ್ನ ರಾಣಿ' ಎಂದು ಹೇಳಿ ಈಗ ಡಿವೋರ್ಸ್

Tamil actor Jayam Ravi Divorce: ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು.

Written by - Bhavishya Shetty | Last Updated : Sep 9, 2024, 03:28 PM IST
    • ತಮಿಳು ನಟ ಜಯಂ ರವಿ ಪತ್ನಿ ಆರತಿಗೆ ಡಿವೋರ್ಸ್‌ ನೀಡುವುದಾಗಿ ಘೋಷಿಸಿದ್ದಾರೆ
    • ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ
    • ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು
15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು 'ನನ್ನ ಪತ್ನಿಯೇ ನನ್ನ ರಾಣಿ' ಎಂದು ಹೇಳಿ ಈಗ ಡಿವೋರ್ಸ್ title=
Actor Jayam Ravi Divorce

Actor Jayam Ravi Divorce: ತಮಿಳು ನಟ ಜಯಂ ರವಿ ಸೆಪ್ಟೆಂಬರ್ 9 ರಂದು ತಮ್ಮ ಪತ್ನಿ ಆರತಿಗೆ ಡಿವೋರ್ಸ್‌ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯದ ಬಗ್ಗೆ ರವಿ ತಮ್ಮ ಎಕ್ಸ್ ಹ್ಯಾಂಡಲ್‌ʼನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ಗೌಪ್ಯತೆ ಕಾಪಾಡಲು ವಿನಂತಿಸಿದ್ದಾರೆ.

ಇದನ್ನೂ ಓದಿ: ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್‌ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು...

"ಬಹಳಷ್ಟು ಯೋಚನೆ, ಚಿಂತನೆ ಮತ್ತು ಚರ್ಚೆಗಳ ನಂತರ ನಾನು ಆರತಿ ಜೊತೆಗಿನ ದಾಂಪತ್ಯವನ್ನು ಅಂತ್ಯಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿಲ್ಲ. ಇದು ವೈಯಕ್ತಿಕ ಕಾರಣಗಳಿಂದ ತೆಗೆದುಕೊಂಡ ನಿರ್ಧಾರವೆಂದು ನಾನು ನಂಬುತ್ತೇನೆ" ಎಂದಿದ್ದಾರೆ.

ಇದಷ್ಟೇ ಅಲ್ಲದೆ, ಅಭಿಮಾನಿಗಳು ಮತ್ತು ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಜಯಂ ರವಿ ವಿನಂತಿಸಿದ್ದಾರೆ. "ಈ ಕಷ್ಟದ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ವಿಷಯದ ಬಗ್ಗೆ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  Motorola ಹೊರ ತಂದಿದೆ ಎಲ್ಲಕ್ಕಿಂತ ಅಗ್ಗದ Foldable Phone!ಕ್ಯಾಮೆರಾ,ಫೀಚರ್ ಎಲ್ಲವೂ ಅದ್ಭುತವಾಗಿರುವ ಫೋನ್ ಬೆಲೆ ಇಷ್ಟೇ !

ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. ಇನ್ನು 2009ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.