ಬಾಲಿವುಡ್ ನಲ್ಲಿ ಅತೀ ಹೆಚ್ಚು ಬಾರಿ ನಿರ್ಮಾಣಗೊಂಡಿತ್ತು ಈ ಸ್ವಾತಂತ್ರ್ಯ ಹೋರಾಟಗಾರನ ಜೀವನ

ಇನ್ನೊಂದು ಸಿನಿಮಾದಲ್ಲಿ ಇಂದಿನ ಯುವಕರ ಕಥೆ. ಒಬ್ಬ ಯುವಕನು ದೇಶದ ಹುತಾತ್ಮರಿಂದ ಸ್ಫೂರ್ತಿ ಪಡೆದಿರುತ್ತಾನೆ. ಮುಖ್ಯವಾಗಿ ಭಗತ್ ಸಿಂಗ್ ಅವರನ್ನು ತನ್ನ ಆದರ್ಶವೆಂದು ಪರಿಗಣಿಸಿರುತ್ತಾನೆ.

Written by - Bhavishya Shetty | Last Updated : Aug 14, 2022, 08:42 AM IST
    • ಬಾಲಿವುಡ್ ನಲ್ಲಿ ಸುಮಾರು 9 ಬಾರಿ ಭಗತ್ ಸಿಂಗ್ ಸಿನಿಮಾ ಬಂದಿದೆ
    • ಭಗತ್ ಸಿಂಗ್ ದೇಶಾಭಿಮಾನ ಸಿನಿಮಾಗಳು ಯುವಜನರ ಮನಮುಟ್ಟಿದೆ
    • ಅಜಯ್ ದೇವಗನ್ ಸಿನಿಮಾಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ
ಬಾಲಿವುಡ್ ನಲ್ಲಿ ಅತೀ ಹೆಚ್ಚು ಬಾರಿ ನಿರ್ಮಾಣಗೊಂಡಿತ್ತು ಈ ಸ್ವಾತಂತ್ರ್ಯ ಹೋರಾಟಗಾರನ ಜೀವನ  title=
Bhagat Singh Movies

Independence heroes Of India: ಬಾಲಿವುಡ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದಂತೆ ಅದೆಷ್ಟೋ ಸಿನಿಮಾಗಳು ತೆರೆಗೆ ಬಂದಿವೆ. ಆದರೆ ಶಾಹೀದ್ ಭಗತ್ ಸಿಂಗ್ ಬಗ್ಗೆ ಸುಮಾರು 9 ಸಿನಿಮಾಗಳು ಬಾಲಿವುಡ್ ಪರದೆ ಮೇಲೆ ಕಾಣಿಸಿಕೊಂಡಿವೆ. ಪಂಜಾಬ್‌ನ ಈ ಫೈರ್‌ಬ್ರಾಂಡ್ ಯುವಕನ ಮೇಲೆ ಹಿಂದಿ ಚಿತ್ರರಂಗ ಇದುವರೆಗೆ ಒಂಬತ್ತು ಚಲನಚಿತ್ರಗಳನ್ನು ಮಾಡಿವೆ ಎಂದರೆ ನೀವು ನಂಬಲೇಬೇಕು. ಇವುಗಳಲ್ಲಿ ಆರು ಸಂಪೂರ್ಣವಾಗಿ ಅವನ ಜೀವನವನ್ನು ಆಧರಿಸಿವೆ. ಇನ್ನುಳಿದಂತೆ ಶಹೀದ್ ಉಧಮ್ ಸಿಂಗ್ ಅವರ ಮೇಲೆ ನಿರ್ಮಿಸಲಾದ ಎರಡು ಚಿತ್ರಗಳಲ್ಲಿ ಭಗತ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ಸಿನಿಮಾದಲ್ಲಿ ಇಂದಿನ ಯುವಕರ ಕಥೆ. ಒಬ್ಬ ಯುವಕನು ದೇಶದ ಹುತಾತ್ಮರಿಂದ ಸ್ಫೂರ್ತಿ ಪಡೆದಿರುತ್ತಾನೆ. ಮುಖ್ಯವಾಗಿ ಭಗತ್ ಸಿಂಗ್ ಅವರನ್ನು ತನ್ನ ಆದರ್ಶವೆಂದು ಪರಿಗಣಿಸಿರುತ್ತಾನೆ. ಈ ರೀತಿ ಸುಮಾರು ಒಂಬತ್ತು ಸಿನಿಮಾಗಳು ಭಗತ್ ಸಿಂಗ್ ಅವರನ್ನು ಆಧರಿಸಿ ಬಾಲಿವುಡ್ ಅಂಗಣದಲ್ಲಿ ತೆರೆಗೆ ಬಂದಿವೆ. 

ಇದನ್ನೂ ಓದಿ: ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಅತ್ಯಂತ ಕಳಪೆ ಓಪನಿಂಗ್..!

ಶಮ್ಮಿ ಕಪೂರ್, ಮನೋಜ್ ಕುಮಾರ್, ಅಜಯ್ ದೇವಗನ್, ಬಾಬಿ ಡಿಯೋಲ್ ಮತ್ತು ಸೋನು ಸೂದ್ ಅವರಂತಹ ತಾರೆಯರು ತೆರೆಯ ಮೇಲೆ ಕಾಲಕಾಲಕ್ಕೆ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸಿದವರು. ಶಹೀದ್-ಎ-ಆಜಮ್ ಭಗತ್ ಸಿಂಗ್ (1954) ಈ ಯುವ ಹುತಾತ್ಮನನ್ನು ಗಲ್ಲಿಗೇರಿಸಿದ 23 ವರ್ಷಗಳ ನಂತರ ಮಾಡಿದ ಮೊದಲ ಚಲನಚಿತ್ರ. ಪ್ರೇಮ್ ಅದೀಬ್ ಅವರು ಈ ಸಿನಿಮಾದಲ್ಲಿ ಶಹೀದ್ ಭಗತ್ ಸಿಂಗ್ ಆಗಿ ಬಣ್ಣ ಹಚ್ಚಿದ್ದರು. ನಂತರ 1963ರಲ್ಲಿ ತೆರ ಕಂಡ ಶಹೀದ್ ಭಗತ್ ಸಿಂಗ್ ಸಿನಿಮಾದಲ್ಲಿ ಶಮ್ಮಿ ಕಪೂರ್ ಬಣ್ಣ ಹಚ್ಚಿದರು.  ಮನೋಜ್ ಕುಮಾರ್ ಎರಡು ವರ್ಷಗಳ ನಂತರ ಬಿಡುಗಡೆಯಾದ ಶಾಹೀದ್ (1965) ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸುವ ಮೂಲಕ ಪಡೆದ ಸ್ಟಾರ್‌ಡಮ್ ಅವರನ್ನು ಭರತ್ ಕುಮಾರ್ ಎಂದು ಮತ್ತಷ್ಟು ಪ್ರಸಿದ್ಧಗೊಳಿಸಿತು.

2002 ರ ಹೊತ್ತಿಗೆ ಭಗತ್ ಸಿಂಗ್ ಕುರಿತಾಗಿಯೇ ಬಾಲಿವುಡ್‌ನಲ್ಲಿ ಕ್ರೇಜ್ ಹುಟ್ಟುವಂತಹ ಚಲನಚಿತ್ರ ನಿರ್ಮಾಣಗೊಂಡಿತ್ತು.  ಒಂದೇ ಬಾರಿಗೆ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಗೊಂಡವು. ನಿರ್ದೇಶಕ ರಾಜಕುಮಾರ್ ಸಂತೋಷಿ ಅವರು ಅಜಯ್ ದೇವಗನ್ ಅವರೊಂದಿಗೆ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರಕ್ಕಾಗಿ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಬಿ ಡಿಯೋಲ್ ಅವರ ಚಿತ್ರ 23 ಮಾರ್ಚ್ 1931: ಶಹೀದ್. ಮೂರನೇ ಚಿತ್ರ ಶಹೀದ್-ಎ-ಆಜಮ್. ಇದರಲ್ಲಿ ಸೋನು ಸೂದ್ ಭಗತ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.

ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ಆಧುನಿಕ ಕಥೆಯಲ್ಲಿ ಬಳಸಿ, ಚಲನಚಿತ್ರ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ರಂಗ್ ದೇ ಬಸಂತಿ (2006) ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರು. ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಹುತಾತ್ಮರು ಈ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯುವಕರ ಆದರ್ಶಗಳಾಗಿ ಕಾಣುತ್ತಾರೆ. ದಕ್ಷಿಣದ ಪ್ರಸಿದ್ಧ ತಾರೆ ಸಿದ್ಧಾರ್ಥ್ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮೀರ್ ಖಾನ್ ಸಮಾನಾಂತರವಾಗಿ ಚಾಲನೆಯಲ್ಲಿರುವ ಸ್ವಾತಂತ್ರ್ಯ ಕಥೆಯಲ್ಲಿ ಚಂದ್ರ ಶೇಖರ್ ಆಜಾದ್ ಆಗಿ ಕಾಣಿಸಿಕೊಂಡಿದ್ದರು. 

ಇದನ್ನೂ ಓದಿ: Vastu Plants: ಮನೆಯಲ್ಲಿ ಲಕ್ಷ್ಮಿ- ನಾರಾಯಣರ ವಾಸಕ್ಕೆ ಎಲ್ಲಾ ದಿಕ್ಕುಗಳಲ್ಲಿ ಈ ಸಸ್ಯಗಳನ್ನು ನೆಡಿ

ಶಹೀದ್ ಉಧಮ್ ಸಿಂಗ್ ಅವರ ಮೇಲೆ ನಿರ್ಮಿಸಲಾದ ಎರಡು ಚಲನಚಿತ್ರಗಳಲ್ಲಿ (2000 ಮತ್ತು 2021) ಭಗತ್ ಸಿಂಗ್ ಪಾತ್ರಗಳು ಪ್ರಮುಖ ನೆಲೆಯಲ್ಲಿದ್ದವು. ಮೊದಲ ಚಿತ್ರದಲ್ಲಿ ರಾಜ್ ಬಬ್ಬರ್ ಮತ್ತು ಎರಡನೇ ಚಿತ್ರದಲ್ಲಿ ಶಹೀದ್ ಉಧಮ್ ಸಿಂಗ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದರು. ವಾಸ್ತವವಾಗಿ ಭಗತ್ ಸಿಂಗ್ ಕಥೆಯಲ್ಲಿ, ನಿರ್ಮಾಪಕರು-ನಿರ್ದೇಶಕರು ಶೌರ್ಯ ಮತ್ತು ದೇಶಭಕ್ತಿಯ ಆ ಅಂಶಗಳನ್ನು ನೋಡುತ್ತಾರೆ, ಅದು ಯುವಕರನ್ನು ನೇರವಾಗಿ ಮನಮುಟ್ಟುವಂತೆ ಮಾಡುತ್ತದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News